Advertisement

ಗ್ರಾಮೀಣ ಪ್ರದೇಶಗಳ ಮೂಲ ಸೌಲಭ್ಯಕ್ಕೆ ಆದ್ಯತೆ

01:50 PM Feb 23, 2020 | Suhan S |

ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶಗಳ ಜನರಿಗೆ ಮೂಲ ಸೌಲಭ್ಯ ಕಲ್ಪಿಸುವುದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಆದ್ಯತೆಯಾಗಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

Advertisement

ಶನಿವಾರ ಸಮೀಪದ ಬೂದಿಹಾಳ ಗ್ರಾಮದಲ್ಲಿ 67 ಲಕ್ಷ ರೂ.ಗಳ ಶಾಸಕರ ವಿಶೇಷ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕೊಕ್ಕರಗುಂದಿ ಗ್ರಾಮ ಮತ್ತು ಬೂದಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದೊಡ್ಡ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಚಾಲನೆ ನೀಡುವ ಮೂಲಕ ಈ ಭಾಗದ ಜನರ ಬಹುದಿನ ಬೇಡಿಕೆ ಈಡೇರಿಸುವಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಬೂದಿಹಾಳ ಗ್ರಾಮದಲ್ಲಿನ ರಸ್ತೆಗಳನ್ನು ಸುಧಾರಣೆ ಮಾಡುವ ಮೂಲಕ ಸುಂದರ ಗ್ರಾಮವನ್ನಾಗಿ ಮಾಡುವಲ್ಲಿ ಸುಮಾರು 2 ಕೋಟಿ ವೆಚ್ಚದ ಕಾಮಗಾರಿ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದ ಅವರು, ತಾಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆಗಳ ಸುಧಾರಣೆಗೆ 100 ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ರಸ್ತೆಗಳನ್ನು ಮೇಲ್ದರ್ಜೆಗೆ ಎರಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಚಿದಾನಂದ ಹಡಪದ, ರಾಮಶೆಟ್ಟಿ ರಾಮಶೆಟ್ಟರ, ಸುರೇಶ ಚೆಬ್ಬಿ, ಗಂಗಾಧರ ಮೆಣಸಿನಕಾಯಿ, ಸೋಮನಗೌಡ ಪಾಟೀಲ, ಕೊಟೆಪ್ಪ ಚಳ್ಳಕೇರಿ, ಕುಮಾರ ಪಾಟೀಲ, ಶ್ರೀಶೈಲಗೌಡ ಪಾಟೀಲ, ಶರಣು ಬಡ್ನಿ, ಮಹೇಶ ಮೇಟಿ, ಶರಣಪ್ಪ ಚೆಳ್ಳಕೇರಿ, ಮಂಜುನಾಥ ನಾಯಕ್‌, ಲಕ್ಷ್ಮಣ ಲಮಾಣಿ ಸಂಗಮೇಶ ಬೆಳವಲಕೊಪ್ಪ, ಶರೀಫ್‌ಸಾಬ ಚೆಬ್ಬಿ, ಸೋಮು ಲಮಾಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next