ಹೊಸಕೋಟೆ: ದೇಶವು ಇಡೀ ವಿಶ್ವದಲ್ಲಿಯೇ ಬಹಳಷ್ಟು ಸಾಂಪ್ರದಾ ಯಿಕ ಕ್ರೀಡೆಗಳಿಗೆ ತವರಾಗಿದ್ದು, ಪರಂಪರೆಯನ್ನು ಉಳಿಸಿ ಬೆಳೆಸಲು ಆದ್ಯತೆ ನೀಡಬೇಕಾಗಿದೆ ಎಂದು ಮಾಜಿ ಸಚಿವ ಎನ್.ನಾಗರಾಜ್ ಹೇಳಿದರು.
ನಗರದ ಚನ್ನಭೈರೇಗೌಡ ಕ್ರೀಡಾಂಗಣ ದಲ್ಲಿ ಜೀವನೆಲೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ಇಂದು ಯುವಕರು ಇಂಟರ್‌ನೆಟ್, ಮೊಬೈಲ್ ಬಳಕೆಗೆ ಆಕರ್ಷಿತರಾಗುತ್ತಿದ್ದು ಕ್ರೀಡಾಭ್ಯಾಸದ ಬಗ್ಗೆ ಆಸಕ್ತಿ ಕುಂಠಿತಗೊಳ್ಳುತ್ತಿರುವುದು ವಿಷಾದ ನೀಯ. ಮುಂದಿನ ದಿನಗಳಲ್ಲಿ ಕೆಲವು ಕ್ರೀಡೆಗಳು ಅಸ್ತಿತ್ವವನ್ನು ಕಳೆದುಕೊಳ್ಳುಸ ಸಾಧ್ಯತೆಯಿದ್ದು ತಡೆಗಟ್ಟಲು ಗಮನಹರಿಸಬೇಕಾಗಿದೆ ಎಂದರು.
ದೈಹಿಕ, ಮಾನಸಿಕ ಸಮತೋಲನ ದೊಂದಿಗೆ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಲು ಕ್ರೀಡೆಯು ಪರಿಣಾಮಕಾರಿ ಯಾದ ಸಾಧನವಾಗಿದ್ದು ಪೋಷಕರು ಸಹ ಸೂಕ್ತ ತಿಳಿವಳಿಕೆ ನೀಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಕುಸ್ತಿ ಪಂದ್ಯಾವಳಿಯೊಂದಿಗೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಣೆ ಮಾಡುತ್ತಿರುವ ಸಂಸ್ಥೆಯ ಕಾರ್ಯ ಅಭಿನಂದನಾರ್ಹ ಎಂದರು.
ಅಂತಾರಾಷ್ಟ್ರೀಯ ದೇಹದಾಡ್ಯರ್ ಪಟು ಎ.ವಿ.ರವಿ, ಜೀವನೆಲೆ ಚಾರಿ ಟಬಲ್ ಟ್ರಸ್ಟ್ ಅಧ್ಯಕ್ಷ ಹರ್ಷವರ್ಧನ್ ಇನ್ನಿತರರು ಭಾಗವಹಿಸಿದ್ದರು.