Advertisement
ಸುರತ್ಕಲ್ ಇದೀಗ ಬೆಳೆಯುತ್ತಿರುವ ನಗರವಾಗಿದ್ದು, ಮಿನಿ ರತ್ನ ಕಂಪೆನಿಗಳಾದ ಎಂಆರ್‌ಪಿಎಲ್, ಎಚ್‌ಪಿಸಿಎಲ್, ಬೃಹತ್ ಕೈಗಾರಿಕೆಗಳು, ಎನ್‌ಐಟಿಕೆ, ಶ್ರೀನಿವಾಸ್ ಎಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜುಗಳು ಇಲ್ಲಿವೆ. ಇನ್ನು ಕೈಗಾರಿಕ ಪ್ರದೇಶವೂ ಈ ಭಾಗದಲ್ಲಿದೆ. ಜವಾಬ್ದಾರಿಯ ದೃಷ್ಟಿಯಿಂದ 22 ವಾರ್ಡ್‌ಗಳಿಗೆ ಅತೀ ಹೆಚ್ಚು ಮೂಲಸೌಕರ್ಯ ಒದಗಿಸಬೇಕಾದ ಅಗತ್ಯವೂ ಇದೆ. ಸರಕಾರದ ಎಸ್‌ಎಫ್‌ಸಿ, ಕಾರ್ಪೋರೆಟರ್ ನಿ ಧಿ, ಶಾಸಕರ ನಿಧಿ ಸಾಮಾನ್ಯವಾಗಿ ಬರುತ್ತವೆ. ಆದರೆ ಇದೀಗ ಅಪೂರ್ಣವಾಗಿ ಉಳಿದಿರುವ ಕಾಮಗಾರಿ ಗಳಿಗೆ ಬಜೆಟ್ ಇಟ್ಟು ಪೂರ್ಣಗೊಳಿಸುವ ಜವಾಬ್ದಾರಿ ಪಾಲಿಕೆ ಮೇಲಿದೆ.
Related Articles
Advertisement
ಕೃಷ್ಣಾಪುರದಲ್ಲಿ 3 ಕೋ. ರೂ. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿ ಸಿದ್ದು, ಅರೆಬರೆ ಕಾಮಗಾರಿ ಮುಗಿಸಲಾಗಿದೆ. ಇದೀಗ ಕೃಷ್ಣಾಪುರ ಮಾರುಕಟ್ಟೆಯನ್ನು ಪೂರ್ಣಗೊಳಿಸಲು ಮತ್ತೆ 1.5 ಕೋಟಿ ರೂ. ಅಗತ್ಯವಿದೆ. ಬೈಕಂಪಾಡಿಯಲ್ಲಿ ಇಂದಿಗೂ ರಸ್ತೆ ಬದಿ ಹಾಗೂ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಮೀನು, ತರಕಾರಿ ಮಾರಲಾಗುತ್ತಿದೆ. ಇಲ್ಲಿನ ಕೈಗಾರಿಕ ಪ್ರದೇಶದ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು
ಬೈಕಂಪಾಡಿ ಅತೀ ಹತ್ತಿರದ ಪ್ರದೇಶವಾಗಿದೆ. ಬೈಕಂಪಾಡಿಯಲ್ಲಿ ಮಾರುಕಟ್ಟೆಯಿಲ್ಲ. ಕೂಳೂರು ಬಳಿ ಮಾರುಕಟ್ಟೆ ನಿರ್ಮಾಣಕ್ಕೆ ಜಾಗ ಮೀಸಲಿರಿಸಿದ್ದರೂ ಅನುದಾನ ನೀಡಲಾಗಿಲ್ಲ.
ಬಂದ ಯೋಜನೆ ವಾಪಾಸ್? :
ಪಾಲಿಕೆ ಹಾಗೂ ಮುಡಾ ವತಿಯಿಂದ ಅಂದಾಜು 1.50 ಕೋಟಿ ರೂ. ವೆಚ್ಚದಲ್ಲಿ ಕೃಷ್ಣಾಪುರ ಅಥವಾ ಹೊಸಬೆಟ್ಟುವಿನಲ್ಲಿ ಈಜುಕೊಳವನ್ನು ನಿರ್ಮಿಸಲು ಉದ್ದೇಶಿ ಸಲಾಗಿತ್ತು. ಜಾಗದ ಕೊರತೆಯ ನೆಪ ವೊಡ್ಡಿ ಮಂಗಳೂರು ಎಮ್ಮೆಕೆರೆಗೆ ಸ್ಥಳಾಂತರಿ ಸಲಾಯಿತು. ಸುಸಜ್ಜಿತ ಪಾರ್ಕ್ ನಿರ್ಮಾಣಕ್ಕೆ ಹೊಸಬೆಟ್ಟುವಿನ ರೀಜೆಂಟ್ ಬಳಿ ಜಾಗ ಗುರುತಿಸಲಾಗಿದೆ. ಆದರೆ ಇದುವರೆಗೂ ಯೋಜನೆ ಕಾರ್ಯಗತವಾಗಿಲ್ಲ.
ಪಾರ್ಕಿಂಗ್ ಅವ್ಯವಸ್ಥೆ :
ಸುರತ್ಕಲ್ ಬೆಳೆಯುತ್ತಿರುವ ನಗರ ವಾಗಿದ್ದು, ದಿನಕ್ಕೆ ನೂರಾರು ದ್ವಿಚಕ್ರ, ಚತುಶ್ಚಕ್ರ ವಾಹನಗಳು ನೋಂದಣಿ ಹೊಂದಿಬರುತ್ತಿವೆ. ಹೆದ್ದಾರಿ ಹಾಗೂ ಒಳ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಜಾಗವಿಲ್ಲದೆ ವಾಹನ ಮಾಲಕರು ವಾಹನ ನಿಲ್ಲಿಸಲು ಪರದಾಟ ನಡೆಸುತ್ತಿದ್ದಾರೆ. ಪಾಲಿಕೆ ವ್ಯವಸ್ಥಿತವಾಗಿ ಪಾರ್ಕಿಂಗ್ ನಿರ್ಮಾಣಕ್ಕೆ ಇಂಟರ್‌ಲಾಕ್ ಅಳವಡಿಕೆ, ಜಾಗ ಸಮತಟ್ಟುಗೊಳಿಸಲು ಅನುದಾನ ಮೀಸಲಿಡುವ ಅಗತ್ಯವಿದೆ.
ಸಮಗ್ರ ಅಭಿವೃದ್ಧಿ ಆದ್ಯತೆಯಾಗಲಿ :
ಪಾಲಿಕೆಯ ಬಜೆಟ್‌ನಲ್ಲಿ ಮಂಗಳೂರು ಉತ್ತರ ಭಾಗವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯವಸ್ಥಿತವಾದ ಮಾರುಕಟ್ಟೆ ನಿರ್ಮಾಣವಾಗಿಲ್ಲ. ಬೀಚ್ ಅಭಿವೃದ್ಧಿಯಾಗಲಿ, ವ್ಯವಸ್ಥಿತ ರೀತಿಯ ಪಾರ್ಕ್, ಒಳಾಂಗಣ ಕ್ರೀಡಾಂಗಣ ವಾಗಲಿ, ರಂಗಮಂದಿರವಾಗಲಿ ನಿರ್ಮಾಣ ವಾಗಿಲ್ಲ. ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ, ಒಳಚರಂಡಿ ವ್ಯವಸ್ಥೆ ಮರೀಚಿಕೆಯಾಗಿದೆ ಎಂಬುದು ಸಾರ್ವಜನಿಕರ ಅಳಲು.
ಯಾವುದಕ್ಕೆ ಪ್ರಮುಖ ಆದ್ಯತೆ?:
- ಜ ಬೈಲಾರೆ ರಾಜಕಾಲುವೆ ಸಂಪೂರ್ಣಕ್ಕೆ ಅಂದಾಜು 26 ಕೋಟಿ ರೂ. ಬೇಕಿದೆ. ಇದರಿಂದ ಹಲವಾರು ಬಡಾವಣೆಗಳು ಮಳೆಗಾಲದಲ್ಲಿ ಮುಳುಗುವುದು ತಪ್ಪುತ್ತದೆ.
- ಕೃಷ್ಣಾಪುರ ಮಾರುಕಟ್ಟೆಗೆ 1.50 ಕೋಟಿ ರೂ.ಗಳ ಅಗತ್ಯವಿದೆ.
- ಪಾಲಿಕೆ ವಲಯ ಕಚೇರಿ ಪೂರ್ಣ ಗೊಳ್ಳಲು 3 ಕೋಟಿ ರೂ.ಗಳ ಅನುದಾನ ಬೇಕಿದೆ. ಕೆರೆಗಳ ಅಭಿವೃದ್ಧಿಗೆ ಅನುದಾನದ ಅಗತ್ಯವಿದೆ.
- ಸುರತ್ಕಲ್ ಜಂಕ್ಷನ್ ಅಪಘಾತ ವಲಯವಾಗಿದ್ದು, ಸುಸಜ್ಜಿತ ಸರ್ಕಲ್, ಡಿವೈಡರ್ ಅಗತ್ಯವಿದೆ.
- ಸುರತ್ಕಲ್ ರೈಲ್ವೇ ಬ್ರಿಡ್ಜ್ ಬಳಿ ಪಾದ ಚಾರಿ ಸೇತುವೆ ನಿರ್ಮಾಣವಾಗಬೇಕಿದೆ.