Advertisement

ಶಿಕ್ಷಣಕ್ಕೆ ಆದ್ಯತೆ ನೀಡಿ, ಸಮಾನತೆ ಸಾಧಿಸಿ: ಅಂಗಾರ

06:40 AM Aug 14, 2017 | Team Udayavani |

ಸುಳ್ಯ : ಅಂಬೇಡ್ಕರ್‌ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಿ. ಸ್ವತ್ಛತೆಗೆ ಮಹತ್ವ ನೀಡಿ. ಶಿಕ್ಷಣಕ್ಕೆ ಪ್ರಾಮುಖ್ಯ ಕೊಡಿ. ಈ ಮೂಲಕ ಸಮಾನತೆ ಸಾಧಿಸಿ ಎಂದು ಶಾಸಕ ಎಸ್‌.ಅಂಗಾರ ತಿಳಿಸಿದರು.

Advertisement

ರವಿವಾರ ಪುರಭವನದಲ್ಲಿ ನಡೆದ ಸುಳ್ಯ ತಾ| ಆದಿ ದ್ರಾವಿಡ ಸಮಾಜ ಸೇವಾ ಸಂಘದ ಗ್ರಾಮೀಣ ಕ್ರೀಡಾಕೂಟ, ಪ್ರಥಮ ವರ್ಷ ಆಟಿಡೊಂಜಿ ದಿನ ಮತ್ತು ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.
ಆದಿ ದ್ರಾವಿಡ ಸಂಘದ ಜಿಲ್ಲಾಧ್ಯಕ್ಷ ಮೋಹನ್‌ ನೆಲ್ಲಿಗುಂಡಿ ಅವರು ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಹಾರಾರ್ಪಣೆಗೈದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸಿದರು.

ಹಬ್ಬದ ಆಶಯ ಮುಖ್ಯ
ಉಪ್ಪಿನಂಗಡಿ ಸ.ಪ. ಕಾಲೇಜಿನ ಉಪ ನ್ಯಾಸಕ ಸುಬ್ಬಪ್ಪ ಕೈಕಂಬ ಮುಖ್ಯ ಭಾಷಣ ಮಾಡಿ, ಆಟಿ ಆಚರಣೆ  ಸಂಭ್ರಮದ ಹಬ್ಬ ಅಲ್ಲ. ಹಿಂದೆ ಆಟಿ ತಿಂಗಳು ಕಷ್ಟದ ದಿನಗಳಾಗಿತ್ತು. ಇಂತಹ ಸಂದರ್ಭ ಆಹಾರದ ಕೊರತೆ ಎದುರಾಗುತ್ತಿತ್ತು. ಇಂದು ಇಂತಹ ಸಂಕಷ್ಟ ಇಲ್ಲ. ಆಟಿ ಆಚರಣೆ ಇದೀಗ  ಸಾರ್ವ ಜನಿಕ ಸಮಾರಂಭಗಳಾಗುತ್ತಿದೆ. ಏನಿದ್ದರೂ ಆಚರಣೆಯ ಹಿಂದಿರುವ ಆಶಯವನ್ನು ಅರಿತಿರಬೇಕಾದ್ದು ಮುಖ್ಯ ಎಂದರು.

ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ  ಮಾತನಾಡಿ,  ಶಿಕ್ಷಣಕ್ಕೆ ಮಹತ್ವ ನೀಡಿ, ಹೆಚ್ಚು ಹೆಚ್ಚು ವ್ಯಾಸಂಗ ಮಾಡಿ, ಉನ್ನತ ಹುದ್ದೆಗಳು ನಿಮ್ಮನ್ನು ಅರಸಿಕೊಂಡು ಬರುತ್ತವೆ. ಐಎಎಸ್‌, ಐಪಿಎಸ್‌ ಉನ್ನತ ಪದವಿ ಪಡೆ ಯಲು ಮುಂದೆ ಬನ್ನಿ ಎಂದರು.

ಮುಖ್ಯ ಅತಿಥಿಗಳಾಗಿ ಸುಳ್ಯ ಆದಿ ದ್ರಾವಿಡ ಸಂಘದ ಅಧ್ಯಕ್ಷ ಮೋನಪ್ಪ ರಾಜಾರಾಂಪುರ, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಯೋಜನಾಧಿಕಾರಿ ಸಂತೋಷ್‌ಕುಮಾರ್‌ ರೈ, ಆದಿ ದ್ರಾವಿಡ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷಿ$¾àಸುಬ್ರಹ್ಮಣ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್‌ ಜಟ್ಟಿಪಳ್ಳ,  ಎಪಿಎಂಸಿ  ಸದಸ್ಯ ಸುಂದರ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಶೇಖರ ಬಲ್ಲಾಳ ಭಾಗ್‌, ಕೃಷ್ಣ , ನಾಗರಾಜ್‌, ಶಿವಕುಮಾರ್‌, ಆದಿ ದ್ರಾವಿಡ ಮಹಿಳಾ ಘಟಕದ ಉಪಾಧ್ಯಕ್ಷೆ ವಿಮಲಾ ಮುಳ್ಯ, ಸಂಘದ ಕೋಶಾಧಿಕಾರಿ ಮಲ್ಲೇಶ್‌, ಚಿನ್ನಪ್ಪ ಜಾಲೂÕರು ಅವರು ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಷ ಬಾಬು ಕೆ.ಎಂ. ಜಾಲೂÕರು  ಅವರು ಸ್ವಾಗತಿಸಿ, ಕಾರ್ಯದರ್ಶಿ ದಿಲೀಪ್‌ ಕೊಡಿಯಾಲ ಬೈಲು ವಂದಿಸಿ, ಸೀತಾರಾಮ ಮೊರಂಗಲ್ಲು  ಅವರು ನಿರೂಪಿಸಿದರು. ಗ್ರಾಮೀಣ ಕ್ರೀಡಾಕೂಟದಲ್ಲಿ ಹಗ್ಗ ಜಗ್ಗಾಟ, ಲಕ್ಕಿ ಗೇಮ್‌, ಭಾವಗೀತೆ, ಪ್ರಬಂಧ ಸ್ಪರ್ಧೆಗಳು ನಡೆದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next