Advertisement

ಬೇಸಿಗೆ ಶಿಬಿರದಲ್ಲಿ ವೈವಿಧ್ಯಮಯ ಕಲಿಕೆಗೆ ಆದ್ಯತೆ

05:15 PM May 07, 2019 | Suhan S |

ತುಮಕೂರು: ಪ್ರತಿದಿನ ಶಾಲಾ ಅವಧಿಯಲ್ಲಿ ವೇಳಾಪಟ್ಟಿಯಂತೆ ಪಾಠ ಪ್ರವಚನಗಳು ನಡೆಯುತ್ತವೆ. ಇಲ್ಲಿ ಕಲಿಕೆ ಯಾಂತ್ರಿಕವಾಗಿರುತ್ತದೆ. ಆದರೆ, ಬೇಸಿಗೆ ಶಿಬಿರಗಳಲ್ಲಿ ಕಲಿತ ವೈವಿಧ್ಯಮಯ ವಾದಂತಹ ಕಲೆ ಅದು, ವಿದ್ಯಾರ್ಥಿಗಳ ಇಡೀ ಜೀವನ ನೆನಪಿನಲ್ಲಿ ಉಳಿಯುತ್ತದೆ ಎಂದು ವಾಸವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಎ.ಸೋಮೇಶ್ವರ ಗುಪ್ತ ಹೇಳಿದರು.

Advertisement

ತುಮಕೂರು ನಗರದ ಚಿಕ್ಕಪೇಟೆಯ ಗಾರ್ಡನ್‌ ರಸ್ತೆಯಲ್ಲಿರುವ ವಾಸವಿ ಶಾಲೆಯಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಮಕ್ಕಳ ಮನಸ್ಥಿತಿ ಯನ್ನು ಅರ್ಥಮಾಡಿಕೊಂಡು ಅವರ ಮನೋ ಭಾವಕ್ಕೆ ತಕ್ಕಂತೆ ಸ್ಪಂದಿಸಬೇಕು. ಇವತ್ತು ಶಿಕ್ಷಣ ಅನ್ನುವುದು ವ್ಯಾಪಾರವಾಗಿದೆ. ಯಾವ ಶಾಲೆ ಯವರು ಹೆಚ್ಚು ಡೊನೇಷನ್‌ ತೆಗೆದುಕೊಳ್ಳುತ್ತಾರೋ ಆ ಶಾಲೆ ಚನ್ನಾಗಿರುತ್ತದೆ ಎಂಬ ಭ್ರಮೆ ಕೆಲವು ತಂದೆ- ತಾಯಿಗಳಲ್ಲಿದೆ. ಆದರೆ, ನಮ್ಮ ವಾಸವಿ ಶಿಕ್ಷಣ ಸಂಸ್ಥೆ ಸೇವೆ ಮಾಡುವ ಹಿತದೃಷ್ಟಿಯಿಂದ ಪ್ರಾರಂಭ ಮಾಡಿ ಯಶಸ್ಸನ್ನು ಕಂಡುಕೊಂಡಿದೆ ಎಂದು ತಿಳಿಸಿದರು.

ಪ್ರೀತಿಯಿಂದ ಎಲ್ಲವನ್ನೂ ಕಲಿಸಬಹುದು: ವಾಸವಿ ಶಿಕ್ಷಣ ಸಂಸ್ಥೆಯ ಸಂಚಾಲಕ ಸಿ.ಆರ್‌.ಮೋಹನ್‌ಕುಮಾರ್‌ ಮಾತನಾಡಿ, ಮಕ್ಕಳಿಗೆ ವಿದ್ಯೆಯನ್ನು ಹೇಳಿಕೊಡುವ ಶಿಕ್ಷಕರು ಮತ್ತು ಮನೆಯಲ್ಲಿ ಮೊದಲು ಅಕ್ಷರ ಕಲಿಸುವ ಎಲ್ಲಾ ತಾಯಂದಿರು ಗಳನ್ನು ಮಾತೃದೇವೋಭವ ಎಂದು ಸಂಬೋಧಿ ಸುತ್ತೇವೆ. ಮಕ್ಕಳಿಗೆ ಪ್ರೀತಿಯಿಂದ ಏನನ್ನಾದರೂ ಕಲಿಸಬಹುದು ಎಂದು ಹೇಳಿದರು.

ಪ್ರೖಮರಿ ಶಾಲೆಯ ಮೇಲ್ವಿಚಾರಕ ಬಿ.ಅಮರ್‌ನಾಥ್‌ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಕ್ರಿಯಾ ತ್ಮಕವಾದ ಪ್ರತಿಭೆಗಳನ್ನು ಇಂತಹ ಬೇಸಿಗೆ ಶಿಬಿರ ಗಳಿಂದ ಗುರುತಿಸಬಹುದು. ಹೆಚ್ಚು ವಿದ್ಯಾರ್ಥಿಗಳು ಇಂತಹ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವಂತೆ ಎಲ್ಲಾ ಶಿಕ್ಷಕರು ಶ್ರಮ ವಹಿಸಬೇಕು ಎಂದರು.

ಗ್ರಾಮೀಣ ಆಟಗಳ ಪರಿಚಯ ಮಾಡಿ: ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಧನಲಕ್ಷ್ಮ ಅಮರ್‌ನಾಥ್‌ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳು ಮಾಡಿರುವ ವಿವಿಧ ಕಲಾ ಪ್ರಕಾರಗಳನ್ನು ನೋಡಿ ಮೆಚ್ಚಿಕೊಂಡು ಮನಸಾರೆ ಹೊಗಳಿದರು. ಇದರ ಜೊತೆಗೆ ಬೇಸಿಗೆ ಶಿಬಿರಗಳಲ್ಲಿ ದೇಶಿ ಸೊಗಡಿನ ಅರ್ಥಾತ್‌ ಗ್ರಾಮೀಣ ಆಟಗಳನ್ನು ಆಡುವುದರ ಜೊತೆಗೆ ಆ ಆಟಗಳ ಪರಿಚಯವನ್ನು ಮಾಡಿಕೊಡ ಬೇಕು ಎಂದು ಸಲಹೆ ನೀಡಿದರು.

Advertisement

ಪ್ರಕೃತಿ ಸಹಜ ಬದುಕನ್ನು ಅರ್ಥೈಸಿ: ವಾಸವಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎನ್‌.ನಾಗಪ್ಪ ಮಾತ ನಾಡಿ, ಮಕ್ಕಳು ರಜೆಯಲ್ಲಿ ಮನೆಯೊಳಗೆ ಟೀವಿ ಮತ್ತು ಮೊಬೈಲ್ನಿಂದ ಕಳೆದು ಹೋಗುವುದರಿಂದ ಆ ಬಂಧನದಿಂದ ಹೊರಬಂದು ಪ್ರಕೃತಿ ಸಹಜ ಬದುಕನ್ನು ಅವರಿಗೆ ಅರ್ಥೈಸಬೇಕಾಗಿದೆ. ಶಿಬಿರದಲ್ಲಿ ಕಲಿತದ್ದು ತಮ್ಮ ಬದುಕಿಗೆ ಆಸರೆಯಾಗುತ್ತದೆ ಎಂದು ಸಲಹೆ ನೀಡಿದರು. ಈ ವೇಳೆ ಬೃಹತಿ, ಖುಷಿ, ಸುಹಾಸ್‌, ಯುವರಾಜ್‌, ಯಶವಂತ, ದಿವ್ಯ, ಜಮುನಾ, ರಾಮ ಚರಣ, ವೇದಿಕ ಮತ್ತು ಮೋಕ್ಷಿತ್‌ ಬಹುಮಾನ ಪಡೆದರು. ಸಮಾರಂಭದಲ್ಲಿ ಮಂಜುಳಾ, ಮೀನಾ ಕುಮಾರಿ, ಮುಖ್ಯಶಿಕ್ಷಕ ಪ್ರಭಾಕರ್‌, ಗ್ರೇಸಿಪಿಂಟೋ, ಗಾಯತ್ರಿ, ಬೃಂದಾ, ಬೃಹತಿ ಎಂ.ಎಲ್.ತೇಜಾವತಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next