Advertisement

ಅರಣ್ಯ ರಕ್ಷಕನಿಂದಲೇ ಬೆಲೆಬಾಳುವ ಮರಗಳ ಭಕ್ಷಣೆ

03:45 AM Feb 16, 2017 | |

ಗುಂಡ್ಲುಪೇಟೆ: ಬಂಡಿಪುರ ಹುಲಿ ಯೋಜನೆ ವ್ಯಾಪ್ತಿಯ ಅರಣ್ಯದಲ್ಲಿ ಹುಲ್ಲುಕಡ್ಡಿಯನ್ನೂ ಹೊರತೆಗೆಯಬಾರದು ಎಂಬ ನಿಯಮವಿದ್ದರೂ ಬಂಡಿಪುರ ಅಭಯಾರಣ್ಯದ ಸಿಬ್ಬಂದಿಯೊಬ್ಬ ಕಾಡು ಮರಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Advertisement

ಬಂಡಿಪುರ ಹುಲಿ ಯೋಜನೆಯ ಮೊಳೆಯೂರು ವಲಯಕ್ಕೆ ಸೇರಿದ ಹೊಸಕೋಟೆ ಬೀಟ್‌ನ ಅರಣ್ಯ ರಕ್ಷಕ, ತಂಗಮಣಿ ಎಂಬುವರು ತಮ್ಮ ವಾಸದ ಬಿ.ಮಟೆRರೆ ಮನೆಯಲ್ಲಿ ಸುಮಾರು 3 ಟ್ರ್ಯಾಕ್ಟರ್‌ಗಳಷ್ಟು ಮರಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ. ಮೊಳೆಯೂರು ಅರಣ್ಯವಲಯದ ಹೊಸಕೋಟೆ ಬೀಟ್‌ನಲ್ಲಿ ಆನೆ ಕಂದಕ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀಗಂಧದ ಮರ, ತೇಗ ಸೇರಿದಂತೆ ಕಂದಕ ನಿರ್ಮಾಣ ಮಾರ್ಗದಲ್ಲಿನ ಕಾಡು ಮರಗಳನ್ನು ತೆರವು ಮಾಡಲಾಗಿದೆ. ಅರಣ್ಯ ಕಾಯ್ದೆಯ ಪ್ರಕಾರ ಸಂರಕ್ಷಿತ ಪ್ರದೇಶದಲ್ಲಿನ ಮರಮಟ್ಟುಗಳನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸುವಂತಿಲ್ಲ. ಆದರೆ, ಇಲ್ಲಿ ಅರಣ್ಯ ಸಿಬ್ಬಂದಿಯೇ ಮರಗಳನ್ನು ಶೇಖರಿಸಿದ್ದಾರೆ. ಅಲ್ಲದೆ, ಅವುಗಳನ್ನು ಮಾರಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ, ಹಿರಿಯ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲಿಸಿ, ತನಿಖೆ ಮಾಡಿ, ತಪ್ಪಿತಸ್ಥ ಅರಣ್ಯ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ.

ಅಲ್ಲದೆ, ಕಳೆದ ತಿಂಗಳು ವನ್ಯಜೀವಿ ಪರಿಪಾಲಕ ಹುದ್ದೆ ಖಾಲಿಯಾಗಿದೆ. ಹೀಗಾಗಿ, ಅರಣ್ಯ ಪ್ರದೇಶದೊಳಗೆ ಏನು ನಡೆಯುತ್ತಿದೆ ಎಂಬುದರ ನಿಗಾ ಇಡುವುದು ಕೂಡ ಕಷ್ಟವಾಗುತ್ತಿದೆ. ಈ ಹಿಂದೆ, ಮೂಲೆಹೊಳೆ ಚೆಕ್‌ಪೋಸ್ಟ್‌ ಬಳಿ ಕೊಠಡಿ ನಿರ್ಮಾಣಕ್ಕಾಗಿ ಕಾಡು ಮರಗಳನ್ನು ಕಟಾವು ಮಾಡಿ ಸ್ವಂತಕ್ಕೆ ಬಳಕೆ ಮಾಡಿಕೊಳ್ಳಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.

ನಾನು ಕೆಲ ದಿನಗಳಿಂದ ರಜೆಯಲ್ಲಿದ್ದೇನೆ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಕೂಡಲೇ ಸಂಬಂಧಪಟ್ಟ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ವರದಿ ಪಡೆದು, ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲಾಗುವುದು.
– ಟಿ.ಹೀರಾಲಾಲ್‌, ಹುಲಿ ಯೋಜನೆ ನಿರ್ದೇಶಕ, ಬಂಡಿಪುರ

ಹುಲಿ ಯೋಜನೆ ವ್ಯಾಪ್ತಿಯಲ್ಲಿ  ಹುಲ್ಲುಕಡ್ಡಿಯನ್ನೂ ಹೊರಗೆ ತೆಗೆಯುವಂತಿಲ್ಲ. ಮರಗಳು ಅಲ್ಲಿಯೇ ಕೊಳೆಯಬೇಕು. ಸಾಮಾಜಿಕ ವಲಯ ವ್ಯಾಪ್ತಿಯಲ್ಲಿ ಬಿದ್ದ ಮರಗಳನ್ನು ಮಾತ್ರ ಹರಾಜು ಮಾಡಬಹುದು. ಅರಣ್ಯ ಸಿಬ್ಬಂದಿ ಮರಗಳ ಸಂಗ್ರಹ ಮಾಡುತ್ತಿರುವುದು ಹಾಗೂ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. 
– ಎಂ.ಎನ್‌.ನವೀನ್‌ ಕುಮಾರ, ಮಾಜಿ ವನ್ಯಜೀವಿ ಪರಿಪಾಲಕ

Advertisement

– ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next