Advertisement

ಕೆರೆ ಶುದ್ಧೀಕರಣಕ್ಕೆ ಮುಹೂರ್ತ

12:17 PM Apr 24, 2017 | Team Udayavani |

ಬೆಂಗಳೂರು: ಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶದ ಪರಿಣಾಮ ಬೆಳ್ಳಂದೂರು ಕೆರೆ ಅಭಿವೃದ್ಗೆ ತರಾತುರಿಯಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿದ ಬಿಡಿಎ, ಸೋಮವಾರದಿಂದಲೇ ಕೆರೆ ಸ್ವತ್ಛಗೊಳಿಸುವ ಕಾಮಗಾರಿ ಆರಂಭಿಸಲಿದೆ. 

Advertisement

ಕೆರೆಯನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸುವ ಸಂಬಂಧ ಬಿಡಿಎ ವತಿಯಿಂದ ಕರೆಯಲಾಗಿದ್ದ ಟೆಂಡರ್‌ ಪ್ರಕ್ರಿಯೆ ಶನಿವಾರ ಪೂರ್ಣಗೊಂಡಿದ್ದು, ಕೆರೆಯಲ್ಲಿನ ಜೊಂಡು, ಹಲ್ಲು, ಗಿಡಗಂಟಿ ಗಳನ್ನು ತೆರವುಗೊಳಿಸುವ ಜವಾಬ್ದಾರಿಯನ್ನು ಹಾರ್ವಿನ್‌ ಕನ್‌ಸ್ಟ್ರಕ್ಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ ವಹಿಸಲಾಗಿದೆ.

ಬಿಡಿಎ ಅಕಾರಿಗಳು ಈಗಾಗಲೇ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದ್ದು, ಸೋಮವಾರದಿಂದಲೇ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಕಾಮಗಾರಿಗೆ ಅವಶ್ಯಕವಾದ ಯಂತ್ರೋಪಕರಣ, ಸಿಬ್ಬಂದಿಯನ್ನು ನೇಮಿಸಿಕೊಂಡಿರುವ ಗುತ್ತಿಗೆದಾರರು, ಸೋಮವಾರದಿಂದ ಕೆರೆ ಸ್ವತ್ಛಗೊಳಿಸುವ ಕಾರ್ಯಕ್ಕೆ ಮುಂದಾಗಲಿದ್ದಾರೆ ಎಂದು ಬಿಡಿಎ ಅಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬೆಳ್ಳಂದೂರು ಕೆರೆ ಸುತ್ತಲಿನ ಕೈಗಾರಿಕೆಗಳನ್ನು ಮುಚ್ಚುವಂತೆ ಎನ್‌ಜಿಟಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಆ ಕುರಿತು ಪರಿಶೀಲಿಸಲು ಪ್ರತ್ಯೇಕ ತಂಡ ರಚಿಸಲಾಗಿದೆ. ಆದರೆ, ನ್ಯಾಯಾಲಯದ ಆದೇಶ ಪ್ರತಿ ದೊರೆಯದಿರುವುದರಿಂದ ಕ್ರಮಕ್ಕೆ ಮುಂದಾಗಲು ಸಾಧ್ಯವಾಗುತ್ತಿಲ್ಲ ಎಂದು ಮಂಡಳಿ ಅಕಾರಿಗಳು ತಿಳಿಸಿದ್ದಾರೆ. 

ಎನ್‌ಜಿಟಿ ಆದೇಶ ಪಾಲನೆಗಾಗಿಯೇ ಮಂಡಳಿಯ 30 ಪ್ರಾದೇಶಿಕ ಅಕಾರಿಗಳನ್ನು ಒಳಗೊಂಡ ತಂಡ ರಚನೆ ಮಾಡಲಾಗಿದೆ. ಕೆರೆಯಿಂದ ಎಷ್ಟು ವಿಸ್ತೀರ್ಣದಲ್ಲಿರುವ ಕೈಗಾರಿಕೆ ಗಳನ್ನು ಸ್ಥಗಿತಗೊಳಿಸಬೇಕು? ಯಾವ ಮಾದರಿಯ ಕೈಗಾರಿಕೆ ಗಳನ್ನು ಮುಚ್ಚಬೇಕು? ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾದ ಕೂಡಲೇ ಕಾರ್ಯಾಚರಣೆ ಆರಂಭಿಸುವುದಾಗಿ ಹೇಳಿದ್ದಾರೆ.

Advertisement

ಕೊಳವೆಬಾವಿಗಳ ನೀರಿನ ಪರೀಕ್ಷೆ
ನಗರದಲ್ಲಿನ ಬಹುತೇಕ ಎಲ್ಲ ಕೆರೆಗಳ ನೀರು ಕಲುಷಿತಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಕೆರೆಗಳ ಸುತ್ತ ಇರುವ ಕೊಳವೆ ಬಾವಿಗಳ ಲ್ಲಿನ ನೀರಿನ ಮಾದರಿ ಪರೀಕ್ಷೆ ನಡೆಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ. ಈ ಮೊದಲು ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಸುತ್ತಲಿನ ಕೊಳವೆಬಾವಿಗಳನ್ನು ಮಾತ್ರ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದ ಮಂಡಳಿ ಅಕಾ ರಿಗಳು, ಎನ್‌ಜಿಟಿ ಆದೇಶದ ನಂತರ ಎಲ್ಲ ಕೆರೆಗಳ ಸುತ್ತಲಿನ ಕೊಳವೆ ಬಾವಿಗಳ ಪರೀಕ್ಷೆಗೆ ನಿರ್ಧರಿಸಿದ್ದಾರೆ.

ಕೆರೆಗಳಿಗೆ ಸಂಸ್ಕರಿಸದ ಕೊಳಚೆ ನೀರು ಹಾಗೂ ಕೆಲ ಕೈಗಾರಿಕೆಗಳ ಅಪಾಯಕಾರಿ ರಾಸಾಯನಿಕ ಅಂಶಗಳು ಹರಿಸುತ್ತಿರುವ ಹಿನ್ನೆಲೆ ಯಲ್ಲಿ ಕೆರೆಗಳ ನೀರು ಸಂಪೂರ್ಣವಾಗಿ ವಿಷಯುಕ್ತವಾ ಗುತ್ತಿದೆ. ಆದ್ದರಿಂದ ಕೆರೆಗಳಿಂದ ಒಂದು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿರುವ ಕೊಳವೆಬಾವಿಗಳ ನೀರಿನ  ಮಾದರಿ ಪರಿಶೀಲಿಸಲಾಗುವುದು, ಒಂದೊಮ್ಮೆ ನೀರಿನಲ್ಲಿ ವಿಷಕಾರಿ ಅಂಶಗಳಿರುವುದು ಕಂಡು ಬಂದರೆ ಅಂತಹ ಕೊಳವೆ ಬಾವಿಗಳ ಬಳಕೆಯನ್ನು ನಿರ್ಬಂಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದ್ದಾರೆ.

200 ಮೀಟರ್‌ಗೊಂದು ಫೋಕಸ್‌ ಲೈಟ್‌
ಬೆಳ್ಳಂದೂರು ಕೆರೆಗೆ ರಾತ್ರಿ ವೇಳೆ ತ್ಯಾಜ್ಯ ಸುರಿಯಲಾಗುತ್ತಿದೆ ಎಂಬ ಆರೋಪಗಳಿರುವ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಯಮಲೂರು ಕೆರೆಯಿಂದ ಬೆಳ್ಳಂದೂರು ಕೆರೆಯವರೆಗೆ 200 ಮೀ.ಗೆ ಒಂದರಂತೆ ಫೋಕಸ್‌ ಲೈಟ್‌ ಅಳವಡಿಸಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಕೆರೆಗೆ ತ್ಯಾಜ್ಯ ಸುರಿಯದಂತೆ ಬೆಳ್ಳಂದೂರು ಕೆರೆಯ ಸುತ್ತಮುತ್ತಲಿನ ಭಾಗಗಳ ನಿವಾಸಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಸುರಿದರೆ 5 ಲಕ್ಷ ರೂ.ವರೆಗೆ ದಂಡ ವಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಅಕಾರಿಗಳು ನೀಡಿದ್ದಾರೆ. 

ಕೆರೆ ಸುತ್ತ ಸಿಸಿಟಿವಿ ಕ್ಯಾಮೆರಾ
ಬೆಳ್ಳಂದೂರು ಕೆರೆಗೆ ಘನತ್ಯಾಜ್ಯ ಸೇರಂದಂತೆ ಕ್ರಮ ಕೈಗೊಳ್ಳಲು ಎನ್‌ಜಿಟಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಕೆರೆಯ ನಾಲ್ಕು ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಬಿಬಿಎಂಪಿ ಮುಂದಾಗಿದೆ. ಅದರ ಹಿನ್ನೆಲೆಯಲ್ಲಿ ಈಗಾಗಲೇ ಪಾಲಿಕೆಯಿಂದ ಕ್ಯಾಮೆರಾ ಅಳವಡಿಕೆಗೆ ಕಂಬಗಳನ್ನು ನೆಡಲಾಗಿದ್ದು, ಮೂರು ದಿನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಜತೆಗೆ ಕೆರೆಯ ಸಮೀಪ ಸುರಿಯಲಾಗಿದ್ದ ಕಟ್ಟಡ ಅವಶೇಷಗಳನ್ನು ತೆರವುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next