Advertisement

ನದಿ ತಟದ ಗ್ರಾಮಗಳ ಕುರಿತು ಮುನ್ನೆಚ್ಚರಿಕೆ

05:39 PM Jun 14, 2017 | Team Udayavani |

ಚಿತ್ತಾಪುರ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಬರುತ್ತಿರುವ ಮಳೆಯಿಂದ ಬೆಣ್ಣೆತೊರಾ ಅಣೆಕಟ್ಟು ತುಂಬುತ್ತಿದ್ದು, ಯಾವುದೇ ಸಮಯದಲ್ಲಿ ಹೆಚ್ಚುವರಿ ನೀರನ್ನು ಕಾಗಿಣಾ ನದಿಗೆ ಬಿಡುವ ಕಾರಣ ನದಿತಟದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ತಾಲೂಕು ಅ ಧಿಕಾರಿಗಳು ಸಿದ್ಧರಾಗಬೇಕು ಎಂದು ಸೇಡಂನ ಸಹಾಯಕ ಆಯುಕ್ತ ಪರಶುರಾಮ ಹೇಳಿದರು. 

Advertisement

ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ತಾಲೂಕು ಮಟ್ಟದ ಅಧಿ ಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಳೆ ಪ್ರಮಾಣ ಹೆಚ್ಚಾಗಿದೆ. ಇದರಿಂದ ನದಿಗೆ ನೀರಿನ ಹರಿವು ಹೆಚ್ಚಾಗುತ್ತಿದೆ. ಹೆಚ್ಚುವರಿ ನೀರನ್ನು ಕಾಗಿಣಾ ನದಿಗೆ ಬಿಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನದಿ ತಟದ ಗ್ರಾಮಸ್ಥರು  ನದಿಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಗ್ರಾಮದ ಜನರಿಗೆ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ತಾಲೂಕು ಆಡಳಿತ ಸಿದ್ಧವಾಗಿರಬೇಕು. ಹೋಬಳಿವಾರು ನೋಡಲ್‌ ಅಧಿ ಕಾರಿಗಳ ತಂಡ ರಚಿಸಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಬೆಣ್ಣೆತೊರಾ ಜಲಾಶಯದಿಂದ 3 ಸಾವಿರ ಕ್ಯೂಸೆಕ್‌ ನೀರನ್ನು ನಾಲ್ಕು ಗೇಟ್‌ಗಳ ಮೂಲಕ ಹೊರಬಿಡಲಾಗಿದೆ.

ನದಿ ದಡದಲ್ಲಿ ಬರುವ 21 ಗ್ರಾಮಗಳಿಗೆ ಹೊಂದಿಕೊಂಡಿರುವ ನದಿ ದಡದಲ್ಲಿನ ಸಮಿಪಕ್ಕೆ  ಗ್ರಾಮಸ್ಥರು ಯಾರೂ ಹೋಗದಂತೆ ತಾಲೂಕು ಆಡಳಿತ ಸೂಚನೆ ನೀಡಬೇಕು ಎಂದು ಹೇಳಿದರು. ತಹಶೀಲ್ದಾರ ಮಲ್ಲೇಶಾ ತಂಗಾ, ಗ್ರೇಡ್‌ -2 ತಹಶೀಲ್ದಾರ ರವೀಂದ್ರ  ಧಾಮಾ, ಇಒ ಲಕ್ಷಣ ಶೃಂಗೇರಿ, ಪುರಸಭೆ ಮುಖ್ಯಾಧಿ ಕಾರಿ ಹಣಮಂತಗೌಡ, ಕೃಷಿ ಇಲಾಖೆಯ ಜಾಲೇಂದ್ರ ಗುಂಡಪ್ಪ, ಬಿಇಒ ಶಿವಶರಣಪ್ಪ ಬನ್ನಿಕಟ್ಟಿ, ಲೋಕೋಪಯೋಗಿ ಇಲಾಖೆಯ ಹಣಮಂತರೆಡ್ಡಿ, ಸಿಡಿಪಿಒ ಶಿವಶರಣಪ್ಪ, ಬಸಲಿಂಗಪ್ಪ ಡಿಗ್ಗಿ ಹಾಗೂ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next