ಕೊಪ್ಪಳ: ಕೋವಿಡ್ ಮಹಾಮಾರಿಯ ಆರ್ಭಟದಲ್ಲಿ ಕೆಂಗೆಟ್ಟಿದ್ದ ಜಿಲ್ಲೆಯ ರೈತರಿಗೆ ಮುಂಗಾರು ಪೂರ್ವ ಮಳೆಯು ಉತ್ತಮವಾಗಿ ಸುರಿಯುತ್ತಿವೆ. ಇದರಿಂದ ರೈತರ ಮೊಗದಲ್ಲಿ ಖುಷಿ ಮೂಡಿದೆ.
ರೈತಾಪಿ ವಲಯವು ಮುಂಗಾರು ಕೃಷಿ ಚಟುವಟಿಕೆಯಲ್ಲಿ ತೊಡಗಲು ಈಗಾಗಲೇ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ರೈತರ ನಿರೀಕ್ಷೆಯಂತೆ ಕೃತಿಕ ಮಳೆ ಉತ್ತಮವಾಗಿ ಸುರಿಯುತ್ತಿದೆ.
ಇದನ್ನೂ ಓದಿ:ಕೋವಿಡ್ ಹೆಚ್ಚಳ : ಹುಣಸೂರು ನಗರದ ಎಲ್ಲಾ ವಾರ್ಡ್ ಗಳಿಗೆ ಸ್ಯಾನಿಟೈಸ್ ಕಾರ್ಯ
ಮಂಗಳವಾರ ಗಂಗಾವತಿ ಭಾಗದ ವಿವಿಧ ಭಾಗದಲ್ಲಿ ಉತ್ತಮ ಮಳೆಯಾಗಿದ್ದರೆ, ಬುಧವಾರ ಬೆಳಗ್ಗೆ ಕೊಪ್ಪಳ ತಾಲೂಕಿನ ವಿವಿಧ ಹೋಬಳಿಯಲ್ಲೂ ಮಳೆ ಚೆನ್ನಾಗಿ ಸುರಿದಿದೆ. ಕೋವಿಡ್ ಆಭರ್ಟದ ಮಧ್ಯೆ ಕೃಷಿ ಕಾಯಕ ಆರಂಭಿಸಲು ರೈತರು ಭೂಮಿ ಹಸನ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಒಂದೆರಡು ಮಳೆಗೆ ಮುಂಗಾರು ಬಿತ್ತನೆ ಕಾರ್ಯವೂ ನಡೆಯಲಿದೆ. ಕೃತಿಕ ಮಳೆಯು ರೈತರಲ್ಲಿ ಭರವಸೆ ಮೂಡಿಸಿದೆ.