ಹೊಸದಿಲ್ಲಿ: ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ 283 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಬಹುಮತ ಪಡೆದು ಅಧಿಕಾರಕ್ಕೇರಲಿದೆ ಎಂದು ಟೈಮ್ಸ್ ನೌ- ವಿಎಂಆರ್ ಸಮೀಕ್ಷೆ ಭವಿಷ್ಯ ನುಡಿದಿದೆ. ಯುಪಿಎ ಚೇತರಿಸಿಕೊಳ್ಳಲಿದ್ದು, 135 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇತರ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳು ಒಟ್ಟು 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಸಮೀಕ್ಷೆ ಹೇಳಿದೆ. ಒಟ್ಟು 17 ಸಾವಿರ ಜನರ ಅಭಿಪ್ರಾಯ ಆಧರಿಸಿ ಈ ಫಲಿತಾಂಶ ರೂಪಿಸಲಾಗಿದೆ. ಕೇಂದ್ರ ಸರಕಾರದ ಮಧ್ಯಾಂತರ ಬಜೆಟ್ ಮತ್ತು ಬಾಲಾಕೋಟ್ ದಾಳಿ ಬಿಜೆಪಿ ಮೇಲಿನ ಒಲವನ್ನು ಹೆಚ್ಚಿಸಿದೆ ಎಂದು ಈ ಸಮೀಕ್ಷೆ ಅಂದಾಜಿಸಿದೆ. ಈ ವರ್ಷಾರಂಭದಲ್ಲಿ ವಿವಿಧ ವಾಹಿನಿಗಳು ನಡೆಸಿದ್ದ ಸಮೀಕ್ಷೆಯಲ್ಲಿ ಎನ್‌ಡಿಎ ಬಹು ಮತಕ್ಕೆ ಬೇಕಾದ ಸ್ಥಾನ ಪಡೆಯುವಲ್ಲಿ ವಿಫಲವಾಗಲಿದೆ ಎಂದು ಹೇಳಲಾಗಿತ್ತು.
ಕರ್ನಾಟಕದಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಪ್ರಸ್ತುತ ಬಿಜೆಪಿ 15 ಸಂಸದರನ್ನು ಹೊಂದಿದೆ. 2014ರಲ್ಲಿ 17ರಲ್ಲಿ ಗೆದ್ದಿದ್ದ ಬಿಜೆಪಿ, ಉಪಚುನಾವಣೆಯಲ್ಲಿ ಬಳ್ಳಾರಿ ಕಳೆದುಕೊಂಡಿತ್ತು. ಬೆಂಗಳೂರು ದಕ್ಷಿಣದಲ್ಲಿ ಅನಂತ್‌ಕುಮಾರ್ ಮೃತ ಪಟ್ಟಿರುವುದರಿಂದ ಆ ಸ್ಥಾನ ಖಾಲಿ ಇದೆ. ಹೀಗಾಗಿ 2014ಕ್ಕೆ ಹೋಲಿಸಿದರೆ 2 ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿಯಿಂದ ಒಟ್ಟು 13 ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಊಹಿಸಲಾಗಿದೆ. ಮತದಾನವಾಗುವ ಒಟ್ಟು ಮತಗಳ ಪೈಕಿ ಬಿಜೆಪಿಗೆ ಶೇ. 44.3 ರಷ್ಟು ಲಭ್ಯವಾಗಲಿದ್ದರೆ, ಕಾಂಗ್ರೆಸ್ – ಜೆಡಿಎಸ್ ಮೈತ್ರಿಗೆ ಶೇ. 43.5 ಮತಗಳು ಲಭ್ಯವಾಗಿವೆ.
ಎಸ್‌ಪಿ ಶೇ. 0.9 ರಷ್ಟು ಮತ್ತು ಇತರೆ ಪಕ್ಷಗಳು ಶೇ. 11.2 ರಷ್ಟು ಮತಗಳನ್ನು ಪಡೆಯಲಿವೆ. ಕೇರಳದ 1 ಸ್ಥಾನದಲ್ಲಿ ಎನ್‌ಡಿಎ ಗೆಲ್ಲಲಿದೆ. ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಉ.ಪ್ರದೇಶದಲ್ಲಿ ಬಿಜೆಪಿ ಕೇವಲ 42 ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಲಿದೆ. ಕಳೆದ ಚುನಾವಣೆಯಲ್ಲಿ 73 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು ಸಾಧಿಸಿತ್ತು. ಆದರೆ ಎಸ್‌ಪಿ-ಬಿಎಸ್‌ಪಿ ಮೈತ್ರಿ ಉತ್ತಮ ಫಲ ನೀಡಿದಂತಿದ್ದು, 36 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಕಳೆದ ಚುನಾವಣೆಯಲ್ಲಿ ಕೇವಲ 5 ಕ್ಷೇತ್ರಗಳು ಎಸ್‌ಪಿ-ಬಿಎಸ್‌ಪಿಗೆ ಗೆಲುವು ತಂದುಕೊಟ್ಟಿತ್ತು. ಇನ್ನು ಕಾಂಗ್ರೆಸ್ ತನ್ನ ಎರಡು ಕ್ಷೇತ್ರಗಳನ್ನು ಕಾಯ್ದುಕೊಳ್ಳಲಿದೆ.
ಸಮೀಕ್ಷೆಯ ಅಂದಾಜು
ಒಟ್ಟು ಸ್ಥಾನ – 543: ಎನ್‌ಡಿಎ – 283, ಯುಪಿಎ – 135, ಇತರ- 125.
ಕರ್ನಾಟಕದಲ್ಲಿ 5 ಸ್ಥಾನಗಳಲ್ಲಿ ಬಿಜೆಪಿ, ಯುಪಿಎಗೆ 13ರಲ್ಲಿ ಗೆಲುವು
ಯುಪಿಎ – 135, ಎನ್‌ಡಿಎ – 283