Advertisement
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್ ಮಾತನಾಡಿ ಡಿ.ಕೆ.ಶಿವಕುಮಾರ್ ರವರು ರಾಜ್ಯದಲ್ಲೇ ಒಬ್ಬ ದಿಟ್ಟ ನೇರ ನುಡಿಯ ರಾಜಕಾರಣಿಯಾಗಿದ್ದು ಹಲವಾರು ಸವಾಲುಗಳನ್ನು ಎದುರಿಸಿ ಧೀಮಂತ ನಾಯಕರಾಗಿದ್ದಾರೆ. ಆದರೆ ಬಿಜೆಪಿಯ ಆಪರೇಷನ್ ಕಮಲಕ್ಕೆ ವಿರುದ್ಧ ಧ್ವನಿ ಎತ್ತಿದ ನಾಯಕರಲ್ಲಿ ಡಿಕೆಶಿ ಮೊದಲಿಗರು ,ಡಿಕೆಶಿ ರಾಜಕೀಯವಾಗಿ ಬೆಳೆದು ಬಿಟ್ಟರೆ ಬಿಜೆಪಿ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಉಳಿಗಾಲವೇ ಇರಲ್ಲ ಎಂದು ಭಾವಿಸಿರುವ ಬಿಜೆಪಿ ನಾಯಕರು ಇ.ಡಿ ಮತ್ತು ಐ.ಟಿ ಅಧಿಕಾರಿಗಳನ್ನು ಬಳಸಿಕೊಂಡು ಡಿ.ಕೆ.ಶಿವಕುಮಾರ್ ರವರನ್ನು ರಾಜಕೀಯವಾಗಿ ತುಳಿಯಲು ಮುಂದಾಗಿದ್ದಾರೆ ಇದು ಅವರ ಕೆಟ್ಟ ನೀಚ ರಾಜಕೀಯ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ. ಇಂತಹ ಅದೆಷ್ಟೋ ನಾಯಕರಿಗೆ ರಾಷ್ಟ್ರದಲ್ಲಿ ಹಾಗೂ ಬೇರೆ ಬೇರೆ ರಾಜ್ಯಗಳಲ್ಲಿ ಬೆದರಿಕೆ ಹಾಕಿ ಬಿಜೆಪಿ ಪಕ್ಷಕ್ಕೆ ಸೆಳೆದಿದ್ದಾರೆ ಎಂದು ಕಿಡಿ ಕಾರಿದರು.
ಒಂದು ವೇಳೆ ಡಿ.ಕೆ.ಶಿವಕುಮಾರ್ ಅವರನ್ನು ಅಕ್ರಮವಾಗಿ ಬಂಧಿಸಲು ಮುಂದಾದರೆ ಯಾವುದೇ ಸಮಯದಲ್ಲಿ ಎಲ್ಲಾ ಮುಖಂಡರು ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಪ್ರತಿಭಟಿಸಲು ಮುಂದೆ ಬರಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಬಾಲಕುಂಟಹಳ್ಳಿ ಮುನಿಯಪ್ಪ,ಜಯರಾಂ, ಶ್ರೀಧರ್, ಜಯರಾಂ, ಲಕ್ಷ್ಮಣ್, ಜನಾರ್ಧನ್,ಸುನಿಲ್ ಜೀವನ್ ಇನ್ನೂ ಹಲವಾರು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಹಾಜರಿದ್ದರು.