Advertisement

ಸಂಸ್ಕೃತದಲ್ಲಿ ಪ್ರಾರ್ಥನೆ ವಿವಾದ: ಸಂವಿಧಾನ ಪೀಠಕ್ಕೆ ಪ್ರಕರಣ ವರ್ಗ

12:30 AM Jan 29, 2019 | Team Udayavani |

ಹೊಸದಿಲ್ಲಿ: ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತ ಮತ್ತು ಹಿಂದಿಯಲ್ಲಿ ಪ್ರಾರ್ಥನೆ ನಡೆಸುವುದನ್ನು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ಸಂವಿ ಧಾನ ಪೀಠಕ್ಕೆ ವರ್ಗಾಯಿಸಿದೆ. ಈ ಅಭ್ಯಾಸವು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುವುದರಿಂದ, ಇದನ್ನು ಹೆಚ್ಚಿನ ಸದಸ್ಯರನ್ನು ಹೊಂದಿರುವ ಸಂವಿಧಾನ ಪೀಠಕ್ಕೆ ವರ್ಗಾಯಿಸಲು ನ್ಯಾ| ಆರ್‌.ಎಫ್. ನಾರಿಮನ್‌ ನೇತೃತ್ವದ ದ್ವಿಸದಸ್ಯ ಪೀಠ ನಿರ್ಧರಿಸಿದೆ.

Advertisement

ಕೇಂದ್ರೀಯ ವಿದ್ಯಾಲಯದಲ್ಲಿ ಪ್ರತಿ ದಿನ ಬೆಳಗ್ಗೆ ಅಸತೋ ಮಾ ಸದ್ಗಮಯ ಎಂಬ ಶ್ಲೋಕವನ್ನು ಮಕ್ಕಳಿಂದ ಹೇಳಿಸ ಲಾಗುತ್ತದೆ. ಇದು ಹಿಂದೂ ಧರ್ಮವನ್ನು ಶಾಲೆಯಲ್ಲಿ ಪ್ರಚುರಪಡಿಸುತ್ತದೆ ಎಂದು ವಕೀಲ ವಿನಾಯಕ್‌ ಷಾ ದೂರು ಸಲ್ಲಿಸಿದ್ದರು. ಸೋಮವಾರ ವಿಚಾರಣೆ ವೇಳೆ ಅಸತೋ ಮಾ ಸದ್ಗಮಯ ಎಂಬುದನ್ನು ಉಪನಿಷತ್ತಿನಿಂದಲೇ ಪಡೆದಿದ್ದಲ್ಲವೇ ಎಂದು ನ್ಯಾ| ನಾರಿಮನ್‌ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್‌ ತುಷಾರ್‌ ಮೆಹ್ತಾ, ಹೌದು. ಇದೇ ರೀತಿ ಪ್ರತಿ ಜಡ್ಜ್ಗಳ ಹಿಂಬದಿ ಬರೆದಿರುವ ಯತೋ ಧರ್ಮಸ್‌ ತತೋ ಜಯ ಎಂಬ ವಾಕ್ಯ ವನ್ನೂ ಭಗವದ್ಗೀತೆಯಿಂದಲೇ ಎರವಲು ಪಡೆಯಲಾಗಿದೆ ಎಂದರು. ಪ್ರಾರ್ಥನೆ ಸಂಸ್ಕೃತದಲ್ಲಿದೆ ಎಂದ ಮಾತ್ರಕ್ಕೆ ಅದನ್ನು ಧಾರ್ಮಿಕ ಎನ್ನಲಾಗದು. ಕ್ರಿಶ್ಚಿಯನ್‌ ಶಾಲೆಗಳಲ್ಲಿ ಹಾನೆಸ್ಟಿ ಈಸ್‌ ದಿ ಬೆಸ್ಟ್‌ ಪಾಲಿಸಿ ಎಂಬ ಪ್ರಾರ್ಥನೆಯನ್ನು ಹೇಳಿಸಲಾಗುತ್ತದೆ. ಅದೂ ಧಾರ್ಮಿಕ ಹೇಳಿಕೆ ಎಂದಾಗುತ್ತದೆಯೇ ಎಂದು ಮೆಹ್ತಾ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next