ಮಡಿಕೇರಿ:ಈಸ್ಟರ್ ಹಬ್ಬ ದಂದು ಶ್ರೀಲಂಕಾದ ಹಲವೆಡೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ನಾಗರಿಕರಿಗೆ ನಗರದ ಸಂತ ಅನ್ನಮ್ಮ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ವೀರಾಜಪೇಟೆ ನಗರದ ಸಂತ ಅನ್ನಮ್ಮ ದೇವಾಲಯದಲ್ಲಿ ಶ್ರೀಲಂಕಾದ ಕೊಲೊಂಬೊದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರಿಗಾಗಿ ಪ್ರಧಾನ ಧರ್ಮಗುರುಗಳಾದ ರೆ.ಫಾ.ಮೊದಲೈ ಮುತ್ತು ಮತ್ತು ಸಹಾಯಕ ಧರ್ಮ ಗುರುಗಳಾದ ರೋಷನ್ ಬಾಬು ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಶಾಂತಿ ಪೂಜೆ ನಡೆಯಿತು.
ಪ್ರಾರ್ಥನೆಯ ವೇಳೆ ಮಾತನಾಡಿದ ಧರ್ಮಗುರುಗಳು, ಈಸ್ಟರ್ ದಿನ ಎನ್ನುವುದು ಕ್ರೆçಸ್ತ ಧರ್ಮಕ್ಕೆ ಪ್ರಮು ಖವಾದ ದಿನವಾಗಿದ್ದು, ಇಂತಹ ಸಂದರ್ಭ ಉಗ್ರರಿಂದ ದಾಳಿ ನಡೆದಿರುವುದು ಬಹಳ ದುಃಖದ ವಿಚಾರ. ಇಂತಹ ಹೀನ ಕೃತ್ಯ ನಡೆಸಿದವರನ್ನು ದೇವರು ಕ್ಷಮಿಸಿ, ಅವರಿಗೆ ಮಾನವೀಯತೆಯನ್ನು ಕರುಣಿಸಲಿ ಎಂದು ಆಶಿಸುವುದಾಗಿ ತಿಳಿಸಿದರು.
ಇದೇ ಸಂದರ್ಭ ಮರಣ ಹೊಂದಿದವರ ಕುಟುಂಬಗಳಿಗೆ ನೋವನ್ನು ಭರಿಸುವ ಶಕ್ತಿಯನ್ನು ನೀಡಿ, ಧೈರ್ಯವನ್ನು ದೇವರು ಕರು ಣಿಸಲಿ ಎಂದು ವಿಶೇಷ ಪ್ರಾರ್ಥನೆ ಮಾಡಲಾಯಿತು.
ದೇವಾಲಯದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಗಮಿಸಿ ಶ್ರೀಲಂಕಾದಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿಯನ್ನು ಕೋರಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.