Advertisement
ಅವರು ಕರ್ನಾಟಕ ರಾಜ್ಯ ಹಜ್ ಸಮಿತಿ ಅಶ್ರಯದಲ್ಲಿ ಹಜ್ ಕ್ಯಾಂಪ್ ನಿರ್ವಹಣಾ ಸಮಿತಿ ಮಂಗಳೂರಿನ ಸಹಯೋಗದೊಂದಿಗೆ ಬಜಪೆ ಅನ್ಸಾರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ಹಜ್ ವಿಮಾನ ಯಾತ್ರೆ-2019ನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರಿನಲ್ಲಿ ಹಜ್ ಘರ್ ನಿರ್ಮಾಣಕ್ಕೆ ಈಗಾಗಲೇ 70 ಸೆಂಟ್ಸು ಜಾಗ ನಿಗದಿಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಅನುದಾನ ನೀಡಲು ಮುಂದೆ ಬಂದಿದ್ದು ಸದ್ಯದಲ್ಲೇಶಿಲಾನ್ಯಾಸ ನಡೆಯಲಿದೆ ಎಂದರು. ಸಚಿವ ಜಮೀರ್ ಆಹ್ಮದ್ ಖಾನ್‌ಅವರು ಜಿಲ್ಲೆಯಿಂದ 11 ಉಲೇಮಾಗಳಿಗೆ ಹಾಗೂ ರಾಜ್ಯದಿಂದ 100ಕ್ಕಿಂತ ಹೆಚ್ಚು ಉಲೇಮಾಗಳಿಗೆ ಪವಿತ್ರ ಹಜ್‌ಯಾತ್ರೆ ಕೈಗೊಳ್ಳಲು ಸಹಾಯ ಮಾಡಲಿದ್ದಾರೆ ಎಂದು ಖಾದರ್ ತಿಳಿಸಿದರು.
Related Articles
ಸಂಸದ ಮೊಹಮ್ಮದ್ ಇರ್ಫಾನ್ ಅಹ್ಮದ್ ಮಾತನಾಡಿ, ಈ ಬಾರಿ ದೇಶ ದಿಂದ 2 ಲಕ್ಷ ಮಂದಿ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. 1,75,000 ಮಂದಿಗೆ ಮಾತ್ರ ಈ ವರೆಗೆ ಅವಕಾಶವಿತ್ತು. 4 ತಿಂಗಳ ಮೊದಲು ಪ್ರಧಾನಿ ಮೋದಿ ಅವರು ಸೌದಿ ಅರೇಬಿಯಾ ರಾಜ ಮಹಮದ್ ಸಲ್ಮಾನ್ ಭಾರತಕ್ಕೆ ಬಂದಾಗಈ ಬಗ್ಗೆ ಅವರಲ್ಲಿ ಪ್ರಸ್ತಾವಿಸಿದ್ದರಿಂದಾಗಿ ಹೆಚ್ಚುವರಿ 25 ಸಾವಿರ ಮಂದಿಗೆ ಅವಕಾಶ ಲಭಿಸಿದೆ ಎಂದರು.
Advertisement
ಮಾಜಿ ಶಾಸಕರಾದ ಬಿ.ಎ. ಮೊದಿನ್‌ಬಾವಾ, ಕೆ.ಎಸ್. ಮಹಮ್ಮದ್ ಮಸೂದ್, ಮುಖಂಡರಾದ ಮಹಮ್ಮದ್ ಮೋನು, ಜಿಲ್ಲಾ ವಕ್ಫ್ ಯು.ಕೆ. ಮೋನು ಕಣಚೂರು, ಬಿ.ಎಂ. ಝಕರಿಯಾ, ವೈ. ಮಹಮ್ಮದ್ ಕುಂಞಿ, ಬಿ.ಎಂ. ಮುಮ್ತಾಝ್ ಅಲಿ, ಎಸ್.ಎಂ. ರಶೀದ್ ಹಾಜಿ, ಹನೀಫ್ ಹಾಜಿ ಕೊಳತ್ತಮಜಲು, ಎಂ.ಎಸ್. ಕರೀಂ, ಕೆ.ಕೆ. ಸಾಹುಲ್ ಹಮೀದ್, ಹೈದರ್ ಪರ್ತಿಪಾಡಿ, ಅಬ್ದುಲ್ ರಶೀದ್, ಅಶ್ರಫ್, ಬಶೀರ್, ಮಹಮ್ಮದ್ ಕುಂಜತ್ತಬೆೈಲು, ಬಶೀರ್ ಬೆೈಕಂಪಾಡಿ, ಸಿರಾಜ್, ಮಹಮದ್ ಶರೀಫ್, ಹನೀಫ್ ಮಹಮದ್ ಉಪಸ್ಥಿತರಿದ್ದರು.
ದ.ಕ. ಖಾಝಿ ಆಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಉಳ್ಳಾಲ ಖಾಝಿ ಆಸ್ಸಯ್ಯಿದ್ ಫಝಲ್ ಕೋಯಮ್ಮ ತಂšಳ್ ಅಲ್ಬುಖಾರಿ ಶುಭಾಶಂಸನೆಗೈದರು. ರಾಜ್ಯ ಹಜ್ ಸಮಿತಿ ಕಾರ್ಯ ನಿರ್ವಾಹಣಾಧಿಕಾರಿ ಸಫ್ರ್ರಾಝ್ ಖಾನ್ ಸರ್ದಾರ್ ಸ್ವಾಗತಿಸಿದರು. ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿ ಸಿದರು. ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ ವಂದಿಸಿದರು.
ಮಂಗಳೂರು ಮೂಲಕ 747 ಮಂದಿ ಯಾತ್ರೆ
ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದಿಕಿ ಪ್ರಸ್ತಾವನೆಗೈದು, ಮಂಗಳೂರು ಮೂಲಕ ಈ ಬಾರಿ ಒಟ್ಟು 747 ಮಂದಿ ಹಜ್ ಯಾತ್ರೆ ಕೈಕೊಳ್ಳಲಿದ್ದಾರೆ. ಇದರಲ್ಲಿ ದ.ಕ. ಜಿಲ್ಲೆಯ 610, ಉಡುಪಿ ಜಿಲ್ಲೆಯ 72, ಕೊಡಗಿನ 39, ಹಾಸನದ 20, ಚಿಕ್ಕಮಗಳೂರಿನ 6 ಮಂದಿ ಇದ್ದಾರೆ. ರಾಜ್ಯ ಮಟ್ಟದಲ್ಲಿ ಒಟ್ಟು 14 ಸಾವಿರ ಹಜ್ ಯಾತ್ರಾರ್ಥಿಗಳಿಂದ ಅರ್ಜಿಗಳು ಬಂದಿದ್ದವು. ಈ ಬಾರಿ 8,739 ಮಂದಿಗೆ ಅವಕಾಶ ಲಭಿಸಿದೆ. ಕಳೆದ ಬಾರಿ 6,300 ಮಂದಿಗೆ ಮಾತ್ರ ಅವಕಾಶ ಇತ್ತು ಎಂದು ಹೇಳಿದರು.