Advertisement
ಪ್ರವೀಣ್ ಹತ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಉನ್ನತ ಮಟ್ಟದ ತನಿಖೆಗೆ ಪ್ರಕರಣವನ್ನು ಹಸ್ತಾಂತರಿಸಿದ ಪರಿಣಾಮ ಪಿಎಫ್ಐ ಒಳ ಸಂಚಿನ ಇಂಚಿಂಚೂ ಮಾಹಿತಿ ಹೊರಬಿದ್ದಿತ್ತು.
ಜು. 26ರಂದು ರಾತ್ರಿ ಬೆಳ್ಳಾರೆಯ ಮಾಸ್ತಿಕಟ್ಟೆಯ ಚಿಕನ್ ಸೆಂಟರ್ ಅಂಗಡಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೊರಡಲು ಅಣಿಯಾಗಿದ್ದ ಪ್ರವೀಣ್ ಮೇಲೆ ಮೂವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಹತ್ಯೆಗೆ ಸಹಕಾರ ನೀಡಿದ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದ ಹಿಂದೆ ಎಂಟಕ್ಕೂ ಅಧಿಕ ಮಂದಿಗೆ ಆರೋಪಿಗಳ ನಂಟಿರುವ ಬಗೆಗಿನ ಮಾಹಿತಿ ಗೊತ್ತಾಗಿತ್ತು. ಪ್ರಮುಖ ಮೂವರು ಹಂತಕರು ಪದೇ ಪದೇ ವಾಸಸ್ಥಳ ಬದಲಾಯಿಸುತ್ತಿದ್ದ ಕಾರಣ ಅವರ ಪತ್ತೆ ಕಾರ್ಯಕ್ಕೆ ಹದಿನೈದು ದಿನ ತಗಲಿತ್ತು. ಈ ಆರೋಪಿಗಳ ರಕ್ಷಣೆಯ ಹಿಂದೆ ಪಿಎಫ್ಐ ಸಂಘಟನೆ ಕೈ ಜೋಡಿಸಿದ್ದು, ತನಿಖೆಯ ವೇಳೆ ಬಹಿರಂಗಗೊಂಡಿದ್ದರೂ, ಅದಕ್ಕೆ ಪೂರಕ ಸಾಕ್ಷಿಗಾಗಿ ತನಿಖಾ ತಂಡ ಕಾರ್ಯಾಚರಣೆ ತೀವ್ರಗೊಳಿಸಿತ್ತು. ಶಂಕೆಗೆ ಸಿಕ್ಕಿತ್ತು ಪ್ರಬಲ ಸಾಕ್ಷ್ಯ
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಹತ್ತು ಆರೋಪಿಗಳಿಗೆ ಪಿಎಫ್ಐ ನಂಟು ಇರುವ ಬಗ್ಗೆ ಪೊಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಸಂಘಟನೆಯ ಕಚೇರಿ, ಆರೋಪಿಗಳ ಮೊಬೈಲ್‌ನಲ್ಲಿ ಅದಕ್ಕೆ ಬಲವಾದ ಸಾಕ್ಷಿ ದೊರೆತಿತ್ತು. ಪ್ರಕರಣದ ಉನ್ನತ ಮಟ್ಟದ ತನಿಖೆಯನ್ನು ಎನ್‌ಐಎ ವಹಿಸಿಕೊಂಡ ಅನಂತರ ಈ ಅಂಶ ದೃಢಪಟ್ಟಿತ್ತು. ಪ್ರವೀಣ್ ಹತ್ಯೆ ಮಾದರಿ
ಯಲ್ಲಿಯೇ ಈ ಹಿಂದೆ ರಾಷ್ಟ್ರದ ನಾನಾ ಭಾಗದಲ್ಲಿ ನಡೆದ ಹತ್ಯೆಯ ಹಿಂದೆಯೂ ಮತಾಂಧ ಶಕ್ತಿಯ ಶಂಕೆ ಇತ್ತಾದರೂ ದೃಢಪಟ್ಟಿರಲಿಲ್ಲ. ಆದರೆ ಪ್ರವೀಣ್ ಹತ್ಯೆಯ ತನಿಖೆ ಈ ಹಿಂದಿನ ಹತ್ಯೆಗಳ ಹಿಂದೆ ಮತಾಂಧ ಶಕ್ತಿಯ ಕೈವಾಡ ಇತ್ತು ಎನ್ನುವುದನ್ನು ಖಾತರಿಪಡಿಸಿತ್ತು. ಭವಿಷ್ಯದಲ್ಲಿ ಅನೇಕ ವಿಧ್ವಂಸಕ ಕೃತ್ಯ ನಡೆಸಲು ಉದ್ದೇಶಿಸಿರುವ ಸಂಚು ಕೂಡ ಬೆಳಕಿಗೆ ಬಂದಿತ್ತು.
Related Articles
ರಾಷ್ಟ್ರದ ನಾನಾ ಕಡೆಗಳಲ್ಲಿ ನಡೆಸಲು ಉದ್ದೇಶಿಸಿರುವ ಹತ್ಯೆಗೆ ಮಂಗಳೂರು ಶಕ್ತಿ ಕೇಂದ್ರ. ಇಲ್ಲಿ ಪಿಎಫ್ಐ ತನ್ನ ಜಾಲವನ್ನು ರಾಷ್ಟ್ರದೆÇÉೆಡೆ ಹರಡಿ ಯುವಕರನ್ನು ಸೇರಿಸುವ ಕೆಲಸ ಮಾಡುತ್ತಿತ್ತು. ಕೇರಳದ ಮತಾಂಧ ಶಕ್ತಿಗಳು ಇದಕ್ಕೆ ಸಹಕಾರ ನೀಡುತ್ತಿದ್ದರೆ, ವಿದೇಶಿ ಶಕ್ತಿಗಳು ಆರ್ಥಿಕ ನೆರವು ನೀಡಿ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಲಿದ್ದರು. ಹತ್ಯೆ, ಗಲಭೆಕೋರರಿಗೆ ಹಣದ ಆಮಿಷ ಒಡ್ಡಿ ದ್ವೇಷ ಭಾವನೆಗಳನ್ನು ಬಿತ್ತಲಾಗುತ್ತಿತ್ತು. ಈ ಆಮಿಷಕ್ಕೆ ಸಾವಿರಾರು ಮಂದಿ ಆಕರ್ಷಿತರಾಗಿ ವಿಧ್ವಂಸಕ ಕೃತ್ಯ ನಡೆಸಲು ಸಜ್ಜಾಗಿದ್ದರು.
Advertisement
ಈ ಎಲ್ಲ ಅಂಶಗಳನ್ನು ಎನ್‌ಐಎ ಗುಪ್ತವಾಗಿ ಸಂಗ್ರಹಿಸಿ ಕೇಂದ್ರ ಸರಕಾರದ ಗಮನ ಸೆಳೆದ ಕಾರಣ, ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಂಡೇ ಪಿಎಫ್ಐ ಮತ್ತು ಇತರ ಸಂಘಟನೆಗಳನ್ನು ಕೇಂದ್ರ ಸರಕಾರ 5 ವರ್ಷ ನಿಷೇಧ ಮಾಡಿದೆ.
ಇದನ್ನೂ ಓದಿ : ಉಡುಪಿ ಜಿಲ್ಲೆಯಲ್ಲೂ ಸುವರ್ಣ ಸಂಭ್ರಮದ ನವರಾತ್ರಿ ಗೊಂಬೆ ಆರಾಧನೆಯ ಮೆರುಗು