Advertisement

ಕುತೂಹಲದ ಪ್ರವೇಶ

10:50 PM Jun 05, 2019 | Team Udayavani |

ಕರಾವಳಿಯ ಒಂದು ನೈಜ ಘಟನೆಯನ್ನೇ ಆಧರಿಸಿಕೊಂಡು ಕಥೆಯಾಗಿ ಮಾಡಿ ಸಿನೆಮಾ ರೂಪದಲ್ಲಿ ಹೊರ ತರುವ ಚೇತನ್‌ ಮುಂಡಾಡಿ ಅವರ “ಪ್ರವೇಶ’ ಸಿನೆಮಾವು ತುಳು ಸಹಿತ ಎರಡು ಭಾಷೆಯಲ್ಲಿ ಹೊರ ಬರಲಿದೆ. ಚೇತನ್‌ ಮುಂಡಾಡಿ ಅವರು ಈ ಹಿಂದೆ ತನ್ನ “ಮದಿಪು’ ಚಿತ್ರಕ್ಕಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವ ಪ್ರತಿಭಾವಂತ. ಆದ್ದರಿಂದಲೇ ಇವ ರ ಈ ಪ್ರವೇಶ ಸಿನೆಮಾದ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿದೆ. ಕುಂದಾಪುರ ಕನ್ನಡ, ಮಂಗಳೂರು ಕನ್ನಡ, ಬೆಂಗಳೂರು ಕನ್ನಡ ಮುಂತಾದ ಪ್ರಾದೇಶಿಕ ಮಟ್ಟದ ಕನ್ನಡವನ್ನು ಈ ಸಿನೆಮಾದಲ್ಲಿ ಬಳಸಿಕೊಳ್ಳಲಾಗಿದ್ದು, ಆ ಮೂಲಕ ಒಂದು ನೈಜತೆಯನ್ನು ತರುವ ಪ್ರಯತ್ನವನ್ನೂ ನಿರ್ದೇಶಕರು ಮಾಡಿದ್ದಾರೆ.

Advertisement

ಚೇತನ್‌ ಅವರೇ ಬರೆದಿರುವ ಮೂಲಕಥೆಯನ್ನು ಖ್ಯಾತ ಸಿನೆಮಾ ಪತ್ರಕರ್ತ ಜೋಗಿ ಅವರು ವಿಸ್ತರಿಸಿದ್ದಾರೆ. ವಿ. ಮನೋಹರ್‌ ಅವರ ಸಂಗೀತವಿರುವ ಈ ಸಿನೆಮಾವು ಒಂದು ಧಾರ್ಮಿಕ ಭಾವನೆಯ ವಿಷಯವು ಕೋಮು ಸಾಮರಸ್ಯದಿಂದಿದ್ದ ಗ್ರಾಮದ ಸ್ವರೂಪವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಬಿಚ್ಚಿಡುತ್ತದೆ. ಕೆಜಿಎಫ್‌ ಸಿನೆಮಾದ ಎಡಿಟಿಂಗ್‌ ಮಾಡಿದ್ದ ಶ್ರೀಕಾಂತ್‌ ಅವರೇ ಪ್ರವೇಶವನ್ನೂ ಸಂಕಲನ ಮಾಡುತ್ತಿದ್ದಾರೆ. ಚೇತನ್‌ ಅವರ ಈ ಹಿಂದಿನ ಮದಿಪು ಸಿನೆಮಾವನ್ನು ಕೂಡ ಶ್ರೀಕಾಂತ್‌ ಎಡಿಟಿಂಗ್‌ ಮಾಡಿದ್ದರು. ಚಿತ್ರದ ನಾಯಕನಾಗಿ ಪೃಥ್ವಿ ಅಂಬಾರ್‌ ಮತ್ತು ನಾಯಕಿಯಾಗಿ ಬಿಂದು ರಕ್ಷಿದಿ ಅವರು ನಟಿಸಿದ್ದಾರೆ. ಖ್ಯಾತ ರಂಗಭೂಮಿ ನಟ ಚಂದ್ರಹಾಸ್‌ ಉಳ್ಳಾಲ್‌ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next