Advertisement

ಹುಟ್ಟೂರಿನಲ್ಲಿ ಪ್ರವೀಣ್ ಪೂಜಾರಿ ಅಂತ್ಯಸಂಸ್ಕಾರ : ಸಾವಿರಾರು ಮಂದಿ ಭಾಗಿ

05:27 PM Jul 27, 2022 | Team Udayavani |

ಪುತ್ತೂರು : ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತನಾದ ಬಿಜೆಪಿ ಯುವ ಮುಖಂಡ ಪ್ರವೀಣ್ ಪೂಜಾರಿ ಅವರ ಅಂತ್ಯಸಂಸ್ಕಾರ ಹುಟ್ಟೂರಾದ ಬೆಳ್ಳಾರೆ ಗ್ರಾಮದ ನೆಟ್ಟಾರಿನಲ್ಲಿ ಕುಟುಂಬಸ್ಥರ ಉಪಸ್ಥಿತಿಯಲ್ಲಿ ನಡೆಯಿತು.

Advertisement

ಅಂತ್ಯಸಂಸ್ಕಾರಕ್ಕೂ ಮೊದಲು ಮೃತದೇಹವನ್ನು ಮೆರವಣಿಗೆಯ ಮೂಲಕ ಪುತ್ತೂರಿನಿಂದ ರಸ್ತೆ ಮಾರ್ಗವಾಗಿ ಅವರ ಹುಟ್ಟೂರಾದ ಬೆಳ್ಳಾರೆ ಗ್ರಾಮದ ನೆಟ್ಟಾರಿನ ಅವರ ಮನೆಗೆ ತರಲಾಯಿತು. ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಬಿಲ್ಲವ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ನ. ಸೀತಾರಾಮ ಸೇರಿದಂತೆ ಪ್ರವೀಣ್ ಅವರ ಸ್ನೇಹಿತರು, ಅಭಿಮಾನಿಗಳು, ಬಿಜೆಪಿ ಮುಖಂಡರು, ಹಾಗೂ ಹಿಂದೂಪರ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ಕೂದಲು ಉದುರುವುದು,ಕಡಿಮೆ ಲೈಂಗಿಕಾಸಕ್ತಿ; ದೀರ್ಘ ಕೋವಿಡ್‌ನ ಲಕ್ಷಣ: ಅಧ್ಯಯನ

Advertisement

Udayavani is now on Telegram. Click here to join our channel and stay updated with the latest news.

Next