Advertisement
ಸೋಮವಾರ ಪೊಲೀಸರು ಆರೋಪಿ ಗಳಿಬ್ಬರನ್ನು ಸುಳ್ಯದ ಎಸ್‌ಡಿಪಿಐ ಕಚೇರಿಗೆ ಕರೆ ತಂದು ಮಹಜರು ನಡೆಸಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡಿದೆ. ಲಭ್ಯ ಮಾಹಿತಿ ಪ್ರಕಾರ ಪಿಎಫ್‌ಐ ಸಂಘಟನೆಯಲ್ಲಿ ಈ ಇಬ್ಬರು ಗುರುತಿಸಿಕೊಂಡಿದ್ದು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈಗಾಗಲೇ ಬಂಧಿತರಾಗಿರುವ ಶಫೀಕ್, ಜಾಕೀರ್, ಸದ್ದಾಂ, ಹಾರೀಸ್ ಪಿಎಫ್‌ಐ, ಎಸ್‌ಡಿಪಿಐಯಲ್ಲಿ ಗುರುತಿಸಿಕೊಂಡಿರುವುದು ದೃಢಪಟ್ಟಿದೆ. ರವಿವಾರ ಬಂಧಿಸಲ್ಪಟ್ಟವರು ಕೂಡ ಈ ಸಂಘಟನೆಯಲ್ಲಿ ಇರುವುದು ತನಿಖೆಯ ಮೇಲೂ°ಟದಲ್ಲಿ ಕಂಡು ಬಂದಿದೆ.
ಬಂಧಿತ ಆರೋಪಿಗಳಿಬ್ಬರು ಸುಳ್ಯದ ಕಚೇರಿಯಿಂದಲೇ ಪ್ರವೀಣ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಹತ್ಯೆಯ ಸಂಚು ಕೂಡ ರೂಪಿಸಿದ್ದರು ಎನ್ನುವ ಅನುಮಾನದ ನಡುವೆ ಈ ಮಹಜರು ಪ್ರಕ್ರಿಯೆ ಮಹತ್ವ ಪಡೆದಿದೆ. ಈಗಾಗಲೇ ಪ್ರವೀಣ್ ಹತ್ಯೆ ನಡೆಸಿ ಪರಾರಿ ಆಗಿರುವ ಪ್ರಮುಖ ಹಂತಕರ ಜತೆಗೆ ಈ ಇಬ್ಬರು ನಿರಂತರ ಸಂಪರ್ಕದಲ್ಲಿರುವುದ್ದು ಕೂಡ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಎಲ್ಲ ಕೋನಗಳಿಂದ ಪೊಲೀಸರು ತನಿಖೆ ಮುಂದುವರಿಸಿದ್ದು ಹತ್ಯೆ, ಹತ್ಯೆಗೆ ಕಾರಣವಾದ ಅಂಶದ ಇಡೀ ಚಿತ್ರಣವನ್ನು ಬೇಧಿಸುವಲ್ಲಿ ನಿರತರಾಗಿದ್ದಾರೆ.
Related Articles
Advertisement
ಅಜ್ಞಾತವಾಸದಲ್ಲಿ ಪ್ರಮುಖರು !ಪ್ರವೀಣ್ ಹತ್ಯೆಯ ಬಳಿಕ ಕೆಲವು ಸಂಘಟನೆಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಮುಖಂಡರು ಬೆಳ್ಳಾರೆಯನ್ನು ತೊರೆದಿದ್ದು ಅಜ್ಞಾತವಾಸದಲ್ಲಿರುವ ಬಗ್ಗೆ ಮಾಹಿತಿ ಹಬ್ಬಿದೆ. ಉದ್ವಿಗ್ನ ಸ್ಥಿತಿಯ ಕಾರಣದಿಂದಾಗಿ ಸುರಕ್ಷತೆಗೋಸ್ಕರ ಅಥವಾ ಬೇರೆ ಯಾವುದೋ ಕಾರಣದಿಂದ ಊರು ತೊರೆದಿರಬಹುದು ಎನ್ನುವ ಬಗ್ಗೆ ಸ್ಥಳೀಯವಾಗಿ ಶಂಕೆ ಮೂಡಿದೆ.
ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಮೂವರು ಹಂತಕರು ಸ್ಥಳೀಯ ಪರಿ ಸರದವರಾಗಿದ್ದು ಅವರು ಕೂಡ ಊರು ತೊರೆದಿದ್ದು ಪೊಲೀಸರು ಅವರು ಬೆನ್ನು ಬಿದ್ದಿದ್ದಾರೆ ಎನ್ನುವ
ಮಾಹಿತಿ ಲಭಿಸಿದೆ. ನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಾಲ…, ಸುಳ್ಯ ನಾವೂರು ನಿವಾಸಿ ಆಬಿದ್‌ನನ್ನು ಸೋಮವಾರ ಸಂಜೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಕಿರಿಯ ಸಿವಿಲ್ ನ್ಯಾಯಾಧೀಶೆ ಆರೋಪಿಗಳಿಗೆ ಆಗಸ್ಟ್ 12ರ ತನಕ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿ¨ªಾರೆ.