Advertisement
ಪ್ರವೀಣ ಅವರ ಇತಿಹಾಸವನ್ನು ನೋಡಿದರೆ ಅಪರಾಧ ಪ್ರಕರಣದ ಯಾವುದೇ ಚಹರೆ ಇರಲಿಲ್ಲ. ತಮ್ಮ ಸಮುದಾಯದ ಸಂಘಟನೆ, ಊರಿನ ಸಂಘಟನೆಗಳು ಹಾಗೂ ಬಿಜೆಪಿಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಇಷ್ಟೆಲ್ಲ ಇದ್ದರೂ ಪ್ರವೀಣ್ ಎಲ್ಲರಿಗೂ ಇಷ್ಟ ವಾಗಿದ್ದುದು ಅವರ ಪರೋಪಕಾರದ ಗುಣ ದಿಂದಲೇ.
Related Articles
ನೆಟ್ಟಾರಿನಲ್ಲಿ ಯುವಕ ಮಂಡಲದ ಕಾರ್ಯ ಕ್ರಮಗಳಲ್ಲಿ ಸದಾ ಸಕ್ರಿಯವಾಗಿದ್ದವರು ಪ್ರವೀಣ್. ಜೀವನೋತ್ಸಾಹ ಸದಾ ಪುಟಿ ಯುತ್ತಿತ್ತು. ಸರಕಾರಿ ಸವಲತ್ತುಗಳನ್ನು ಎಲ್ಲ ಜನರಿಗೂ ತಲುಪಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದರು. ಶಿಬಿರಗಳನ್ನು ಆಯೋ ಜಿಸುವುದು, ಮಾಹಿತಿ ಕಾರ್ಯಕ್ರಮ ನೀಡುವುದು ಹೀಗೆ-ಹತ್ತಾರು ಚಟುವಟಿಕೆಗಳ ಮೂಲಕ ಜನರಿಗೆ ಆಪ್ತರಾಗಿದ್ದರು. ಪುತ್ತೂರಿನ ವಿಜಯ ಸಾಮ್ರಾಟ್ ಸಂಘಟನೆಯಲ್ಲೂ ಸಕ್ರಿಯರಾಗಿದ್ದರು.
Advertisement
ಬಿಲ್ಲವ ಸಮುದಾಯದ ಸಂಘಟನೆಯ ನೇತೃತ್ವದಲ್ಲಿ ತನ್ನೂರಿನಲ್ಲಿ ಕೆಸರು ಗದ್ದೆಯಂತಹ ತುಳುನಾಡಿನ ಕ್ರೀಡಾಕೂಟ ಆಯೋಜಿಸಿದ್ದರು. ಸಾಂಸ್ಕೃತಿಕ, ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಜನಾನುರಾಗಿಯಾಗಿದ್ದ ಪ್ರವೀಣರು ಯಾರೊಂ ದಿಗೂ ದ್ವೇಷ ಕಟ್ಟಿಕೊಂಡವರೂ ಇಲ್ಲ.
ಪರೋಪಕಾರಿಗೆ ಇಂಥ ಸಾವೇ?ನೆಟ್ಟಾರು, ಬೆಳ್ಳಾರೆ ಪರಿಸರದ ಬಹುತೇಕರಿಗೆ ಪ್ರವೀಣ ಪರಿಚಿತರೇ. ಸದಾ ಪರೋಪಕಾರ ಮಾಡುತ್ತಾ, ಕಷ್ಟದಲ್ಲಿದ್ದವರಿಗೆ ಸ್ಪಂದಿಸುತ್ತಿದ್ದ ಮನುಷ್ಯನಿಗೆ ಇಂಥ ದಾರುಣ ಸಾವೇ ಎಂಬ ಪ್ರಶ್ನೆ ಎಲ್ಲರದ್ದಾಗಿತ್ತು.