Advertisement

ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪ್ರತಿಷ್ಠಾಬ್ರಹ್ಮಕಲಶ; ವೈಭವದ ಹಸುರು ಹೊರೆಕಾಣಿಕೆ ಮೆರವಣಿಗೆ

11:37 AM Mar 20, 2024 | Team Udayavani |

ಮಲ್ಪೆ: ಇಲ್ಲಿನ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಮಾ. 19ರಿಂದ 29ರವರೆಗೆ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳ ವಾರ ಸಂಜೆ 4ರಿಂದ ಹಸುರು ಹೊರೆ ಕಾಣಿಕೆ ಮೆರವಣಿಗೆಯು ಕೊಡವೂರು ಶಂಕರನಾರಾಯಣ ದೇವಸ್ಥಾನದಿಂದ ಆರಂಭಗೊಂಡು ವಡಭಾಂಡ ಬಲರಾಮ ದೇವಸ್ಥಾನಕ್ಕೆ ಬಹಳ ವೈಭವಯುತವಾಗಿ ಸಾಗಿ ಬಂತು.

Advertisement

ಭಕ್ತವೃಂದ ವಡಭಾಂಡೇಶ್ವರ ವತಿಯಿಂದ ರಜತ ದೇವರಿಗೆ ರಜತ ಪ್ರಭಾವಳಿ, ಪಾಣಿಪೀಠ ಹಾಗೂ ಗರ್ಭ ಗುಡಿ ದ್ವಾರ ಬಾಗಿಲಿಗೆ ರಜತ ಕವಚ ವನ್ನು ಕೊಡುಗೆಯಾಗಿ ನೀಡಿದ್ದಾರೆ. ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ಶ್ರೀಪಾದರು ಮೆರವಣಿಗೆಗೆ ಚಾಲನೆ ನೀಡಿದರು. ಕೊಡವೂರು ದೇಗುಲದಿಂದ ಹೊರಟ ಮೆರವಣಿಗೆ ಸಿಟಿಜನ್‌ ಸರ್ಕಲ್‌ ಮಾರ್ಗವಾಗಿ ಶ್ರೀ ವಡಭಾಂಡ ಬಲರಾಮ ದೇವ ಸ್ಥಾನಕ್ಕೆ ಸಾಗಿ ಬಂದಿತು.

ಶಾಸಕ ಯಶ್‌ಪಾಲ್‌ ಸುವರ್ಣ ಅವರು ವಿವಿಧ ಟ್ಯಾಬ್ಲೋಗಳಿಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಪೂರ್ಣ ಕುಂಭ, 101 ಚೆಂಡೆ, ಕೀಲು ಕುದುರೆ, ಕೊಂಬು, ವಾದ್ಯ, ಕುಣಿತ ಭಜನೆ, ತಟ್ಟಿರಾಯ, ನಾಸಿಕ್‌ ಬ್ಯಾಂಡ್‌, ಯಕ್ಷಗಾನ, ವಿವಿಧ ವೇಷಭೂಷಣಗಳು, ಟ್ಯಾಬ್ಲೋಗಳು, 70ಕ್ಕೂ ಮಿಕ್ಕಿ ಹೊರೆ ಕಾಣಿಕೆಯ ವಾಹನಗಳು, 4 ಸಾವಿರಕ್ಕೂ ಹೆಚ್ಚು ಭಕ್ತರು ಮೆರವಣಿಗೆಯಲ್ಲಿ ಸಾಗಿ ಬಂದು ದೇವಸ್ಥಾನ ತಲುಪಿದರು.

ದೇವಸ್ಥಾನದ ಪ್ರಧಾನ ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ. ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶ್ರೀಶ ಭಟ್‌ ಕಡೆಕಾರ್‌, ಅಧ್ಯಕ್ಷ ನಾಗರಾಜ್‌ ಮೂಲಿಗಾರ್‌, ಪ್ರಧಾನ ಕಾರ್ಯದರ್ಶಿ ಶಶಿಧರ ಎಂ. ಅಮೀನ್‌, ಅನುವಂಶಿಕ ಮೊಕ್ತೇಸರ ಟಿ. ಶ್ರೀನಿವಾಸ ಭಟ್‌, ಪವಿತ್ರಪಾಣಿ ಶಂಕರನಾರಾಯಣ ಐತಾಳ್‌, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್‌, ಗೌರವಾಧ್ಯಕ್ಷರಾದ ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯಾನ್‌, ಉಪಾಧ್ಯಕ್ಷ ರಮೇಶ್‌ ಕೋಟ್ಯಾನ್‌, ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಜಿ. ಕೊಡವೂರು, ಕಾರ್ಯದರ್ಶಿ ಜನಾರ್ದನ ಕೊಡವೂರು, ಪ್ರಮುಖರಾದ ತೋಟದಮನೆ ದಿವಾಕರ ಶೆಟ್ಟಿ,ಪ್ರಸಾದ್‌ ರಾಜ್‌ ಕಾಂಚನ್‌ ನಾಗರಾಜ್‌ ಸುವರ್ಣ, ಕಿಶೋರ್‌ ಸುವರ್ಣ, ಸುಭಾಸ್‌ ಮೆಂಡನ್‌, ರಾಮಚಂದ್ರ ಕುಂದರ್‌, ಹಿರಿಯಣ್ಣ ಕಿದಿಯೂರು, ಈಶ್ವರ್‌ ಸಾಲ್ಯಾನ್‌, ಶಶಿಧರ್‌ ಕುಂದರ್‌, ದಿನೇಶ್‌ ಸುವರ್ಣ, ಶರತ್‌ ಕುಮಾರ್‌, ಶೇಖರ್‌ ಜಿ. ಕೋಟ್ಯಾನ್‌, ಡಾ| ವಿಜಯೇಂದ್ರ, ದಯಾನಂದ ಕೆ. ಸುವರ್ಣ, ಮೀನಾಕ್ಷಿ ಮಾಧವ, ದಯಕರ್‌ ವಿ. ಸುವರ್ಣ, ಜ್ಞಾನೇಶ್ವರ್‌ ಕೋಟ್ಯಾನ್‌, ವಿಜಯ್‌ ಕೊಡವೂರು, ವಿಜಯ್‌ ಕುಂದರ್‌, ಪಾಂಡುರಂಗ ಮಲ್ಪೆ, ಬಾಲಕೃಷ್ಣ ಮೆಂಡನ್‌, ಧನಂಜಯ್‌ ಕಾಂಚನ್‌, ರತ್ನಾಕರ್‌ ಸಾಲ್ಯಾನ್‌, ವಿಜಯ ಸುವರ್ಣ, ಅಶೋಕ್‌ ಕೋಟ್ಯಾನ್‌, ಅಭಿವೃದ್ಧಿ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು, ಭಕ್ತವೃಂದ, ಗುರಿಕಾರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

ತೋರಣ, ಉಗ್ರಾಣ ಮುಹೂರ್ತ

ಮಲ್ಪೆ: ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಮಾ. 19ರಿಂದ 29ರವರೆಗೆ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ ದೇಗುಲ ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವ ದಲ್ಲಿ ಒಟ್ಟು ಕಾರ್ಯಕ್ರಮಗಳ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಮೊದಲಾದವರು ಧಾರ್ಮಿಕ ಪ್ರಕ್ರಿಯೆಗಳು ನಡೆಯಿತು.

ಬೆಳಗ್ಗೆ 7.30ಕ್ಕೆ ದೇಗುಲದ ಮುಂಭಾಗ ದಲ್ಲಿ ದೇವಸ್ಥಾನ ಮತ್ತು ಸಮಿತಿಯ ವತಿಯಿಂದ ಋತ್ವಿಜರನ್ನು ಸ್ವಾಗತಿಸಲಾ ಯಿತು. ಬಳಿಕ ಋತ್ವಿಗರಣೆ, ಗೇಹ ಪ್ರತಿಗ್ರಹ, ದೇವತಾ ಪ್ರಾರ್ಥನೆಯನ್ನು ನಡೆಸಲಾಯಿತು.

ದೇವಸ್ಥಾನ ಮುಂಭಾಗ ಸೇರಿದಂತೆ ಮೂರು ಕಡೆ ತೋರಣ ಮುಹೂರ್ತ ನಡೆಸಿ, ಉಗ್ರಾಣ ಮುಹೂರ್ತ, ಪಂಚಗವ್ಯ, ಪುಣ್ಯಾಹ, ದೇವನಾಂದಿ ನಡೆದು ಅರಣಿ ಮಥನದ ಮೂಲಕ ಆಗ್ನಿ ಜನನ, ಶಿಲ್ಪಿಗಳು ದೇವಸ್ಥಾನವನ್ನು ಬಿಟ್ಟು ಕೊಡುವ ಪ್ರಕ್ರಿಯೆ ಮೂಲಕ ಶಿಲ್ಪಿ ಮರ್ಯಾದೆ, ಬ್ರಹೃಕೂರ್ಚ ಹೋಮ, ಕಂಕಣ ಬಂಧ, ಆದ್ಯ ಗಣ ಪತಿ ಯಾಗ, ಸಂಜೀವಿನಿ ಮೃತ್ಯುಂಜಯ ಹೋಮ, ವೇದತ್ರಯ ಪಾರಾಯಣ, ಭಾಗವತ ಪಾರಾಯಣ ನಡೆಯಿತು. ಸಂಜೆ ಸಪ್ತ ಶುದ್ಧಿ, ಭೂ ಶುದ್ಧಿ ಹೋಮ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪ್ರತಿಷ್ಠೆ ಪೂಜೆ, ವಾಸ್ತು ಹೋಮ, ಬಲಿ, ಪ್ರಾಕಾರ ಬಲಿ, ಅಸ್ತ್ರ ಕಲಶ ಪ್ರತಿಷ್ಠೆ, ರಕ್ಷೆ, ಪ್ರತಿಷ್ಠಾಂಗ, ಅಂಕುರಾರೋಹಣ, ಶಯ್ನಾ ಮಂಟಪ ಸಂಸ್ಕಾರ ಜರಗಿತು.

ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶ್ರೀಶ ಭಟ್‌ ಕಡೆಕಾರ್‌, ಅಧ್ಯಕ್ಷ ನಾಗರಾಜ್‌ ಮೂಲಿಗಾರ್‌, ಪ್ರಧಾನ ಕಾರ್ಯದರ್ಶಿ ಶಶಿಧರ ಎಂ. ಅಮೀನ್‌, ಅನುವಂಶಿಕ ಮೊಕೇ¤ಸರ ಟಿ. ಶ್ರೀನಿವಾಸ ಭಟ್‌, ಪವಿತ್ರಪಾಣಿ ಶಂಕರನಾರಾಯಣ ಐತಾಳ್‌, ಹಯವದನ ಭಟ್‌, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್‌, ಉಪಾಧ್ಯಕ್ಷ ರಮೇಶ್‌ ಕೋಟ್ಯಾನ್‌, ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಜಿ. ಕೊಡವೂರು, ಕಾರ್ಯದರ್ಶಿ ಜನಾರ್ದನ ಕೊಡವೂರು,ಈಶ್ವರ್‌ ಸಾಲ್ಯಾನ್‌, ಆಶೋಕ್‌ ಕೋಟ್ಯಾನ್‌, ಅಭಿವೃದ್ದಿ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು, ಗುರಿಕಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next