Advertisement

ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ

09:46 PM May 27, 2019 | Sriram |

ಕುಳಾಯಿ: ವಿಶ್ವಬ್ರಾಹ್ಮಣ ಯುವ ಸೇವಾ ದಳ ಕುಳಾಯಿ. ಇದರ ವತಿಯಿಂದ 7ನೇ ವರ್ಷದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ಕಾರ್ಯ ಕ್ರಮವು ಕುಳಾಯಿ ಗೋಪಾಲ ಕೃಷ್ಣ ಭಜನ ಮಂದಿರದಲ್ಲಿ ಜರಗಿತು.

Advertisement

ವಿಶ್ವಕರ್ಮ ಸಹಕಾರಿ ಬ್ಯಾಂಕ್‌ ನಿಯಮಿತ ಮಂಗಳೂರು ಅಧ್ಯಕ್ಷ ಪಿ. ಜಗದೀಶ ಆಚಾರ್ಯ ಪಡು ಪಣಂಬೂರು ಅಧ್ಯಕ್ಷತೆ ವಹಿಸಿದ್ದರು.

ತಲಪಾಡಿ ಶಾರದಾ ನಿಕೇತನ ಪಿಯು ಕಾಲೇಜು ಅಧ್ಯಾಪಿಕೆ ನಮಿತಾ ಆಚಾರ್ಯ ಮಂಗಳೂರು, ವಿಶ್ವ ಬ್ರಾಹ್ಮಣ ಯುವಬಳಗ ಕಾಟಿಪಳ್ಳ ಅಧ್ಯಕ್ಷ ಸದಾನಂದ ಆಚಾರ್ಯ, ವಾಸುದೇವ ಆಚಾರ್ಯ ಕುಳಾಯಿ ಉಪಸ್ಥಿತರಿದ್ದರು. ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸ್ವಾತಿ ಕೆ. ಆಚಾರ್ಯ, ನೂತನ್‌ ಆಚಾರ್ಯ, ಅಕ್ಷತಾ ಆಚಾರ್ಯ, ಸುಷ್ಮಾ ಆಚಾರ್ಯ ಅವರನ್ನು ಗೌರವಿ ಸಲಾಯಿತು.

ವಿಶ್ವಬ್ರಾಹ್ಮಣ ಯುವ ಸೇವಾ ದಳ ಕುಳಾಯಿ ಅಧ್ಯಕ್ಷ ಕೆ. ಜಯರಾಮ ಆಚಾರ್ಯ ಸ್ವಾಗತಿಸಿದರು. ಪ್ರಜ್ಞಾ ಕೆ. ಆಚಾರ್ಯ ನಿರೂ ಪಿಸಿದರು. ಸಹ ಕಾರ್ಯದರ್ಶಿ ವಿಘ್ನೇಶ್ ಆಚಾರ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next