ಉದಯವಾಣಿ ಸಮಾಚಾರ
ಗದಗ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಹೊಸ ಜೀವನ ಕೌಶಲ್ಯ ರೂಢಿಸಿಕೊಳ್ಳಲು ಜಿಲ್ಲಾ ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಮಹತ್ವದ ಪಾತ್ರ ವಹಿಸುತ್ತವೆ ಎದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.
ಬೆಟಗೇರಿಯ ಲೊಯೊಲಾ ಪ್ರಾಥಮಿಕ- ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷ ಇಲಾಖೆಯ ಯೋಜನಾ ಕಾರ್ಯಕ್ರಮದಡಿ ರೂಪಿಸಿದ ವಿಸ್ತೃತ ಕಾರ್ಯಕ್ರಮದಡಿ ಯೋಜಿಸಲಾದ ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ಕಂಠಪಾಠ, ಧಾರ್ಮಿಕ ಪಠಣ, ಸಂಗೀತ ಕಥೆ ಹೇಳುವುದು, ಅಭಿನಯ ಗೀತೆ, ಭಾಷಣ, ನೃತ್ಯ, ಕ್ವಿಜ್, ಕವ್ವಾಲಿ ಹೀಗೆ ಹತ್ತು ಹಲವಾರು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸುವ ಏಕೈಕ ವೇದಿಕೆ ಪ್ರತಿಭಾ ಕಾರಂಜಿ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎ. ರಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ವಿವಿಧ ತಾಲೂಕುಗಳಿಂದ ಪ್ರಥಮ ಸ್ಥಾನ ಪಡೆದು ವಿಜೇತರಾದ 250 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಇಂದಿನ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ ಎಂದರು.
ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಚ್. ಕಡಿವಾಲ ಮಾತನಾಡಿದರು. ವೇದಿಕೆ ಮೇಲೆ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಎಂ.ಎ. ಮಾಡಲಗೇರಿ, ಮುಂಡರಗಿ ಬಿಇಒ ಎಚ್.ಎಂ. ಫಡ್ನೇಸಿ, ಗದಗ ಗ್ರಾಮೀಣ ಬಿಇಒ ಜಿ.ಎಂ. ಮುಂದಿನಮನಿ, ಎಸ್.ಡಿ. ಕನವಳ್ಳಿ, ಶಿಕ್ಷಣಾಧಿಕಾರಿ ಅಕ್ಷರ ದಾಸೋಹ ಕೊಟ್ರೇಶ ವಿಭೂತಿ, ಡಯಟ್ ಉಪನ್ಯಾಸಕರಾದ ಎಚ್.ಬಿ. ರಡ್ಡೇರ, ಜಿ.ಡಿ. ದಾಸರ, ಜೆ.ಎ. ಬಾವಿಕಟ್ಟಿ, ಎಚ್.ಎ. ಫಾರೂಖಿ, ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಚ್. ಕಡಿವಾಲ, ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹಿರೇಮಠ, ರಾ.ಸ.ನೌ. ಸಂಘದ ಕೆ.ಬಿ. ಕೊಣ್ಣೂರ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ.ಲಮಾಣಿ, ಎಂ.ಎಸ್. ಕುಚಬಾಳ, ಬಿ.ಎಫ್. ಪೂಜಾರ, ಎಸ್.ಆರ್. ಬಂಡಿ, ಬಿ.ಕೆ. ನಿಂಬನಗೌಡರ, ರವಿ ಕೊಟಿಯವರ, ಆರ್.ಎಂ. ಶಿರಹಟ್ಟಿ, ಮಹೇಶ ಕುರಿ, ಲೊಯೊಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆ
ಮುಖ್ಯಾಧ್ಯಾಪಕಿ ಸಿಸ್ಟರ್ ರೆನಿಟಾ ಪಿಂಟೊ, ಸಿಸ್ಟರ್ ಬೆನಿಗ್ನಾ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪಂ| ಪುಟ್ಟರಾಜ ಸಂಗೀತ ಮಹಾವಿದ್ಯಾಲಯದ ಕಲಾವಿದರು ನಾಡಗೀತೆ ಪ್ರಸ್ತುತಪಡಿಸಿದರು. ಶಿವಾನಂದ ಗಿಡ್ನಂದಿ ನಿರೂಪಿಸಿ, ಎಂ.ಎ. ಮಾಡಲಗೇರಿ ವಂದಿಸಿದರು.