Advertisement
ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅನಾವರಣಗೊಳ್ಳಲು ಪಠ್ಯೇತರ ಚಟುವಟಿಕೆಗಳು ಪೂರಕವಾಗಿ ಕೆಲಸ ಮಾಡುತ್ತವೆ ತಾಲೂಕಿನ ಬಾಲ ಪ್ರತಿಭೆಗಳು ರಾಜ್ಯಮಟ್ಟದವರೆಗೂ ಭಾಗವಹಿಸಿ ತಾಲೂಕಿನ ಹೆಸರನ್ನು ಗುರ್ತಿಸುವ ಕಾರ್ಯ ಮಾಡಲಿ ಎಂದು ಹಾರೈಸಿದರು.ಜಿಪಂ ಸದಸ್ಯರಾದ ಎಂ.ಆರ್.ಮಹೇಶ್, ದೀಪಾ ಜಗದೀಶ್, ಸುರೇಂದ್ರನಾಯ್ಕ,ಬಿಆರ್‌ಸಿ ಎಚ್.ಎಸ್.ಉಮಾಶಂಕರ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ಜಿಲ್ಲಾ ತರಬೇತಿ ಸಂಸ್ಥೆ ಉಪನ್ಯಾಸಕ ಲಕ್ಷ ಣ್, ಸಂಸ್ಥೆ ಕಾರ್ಯದರ್ಶಿ ಡಾ|ರಾಜಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರು ಸಂಘದ ತಾಲೂಕು ಅಧ್ಯಕ್ಷ ಎಸ್.ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ
ಕೆ.ಎಂ. ಕರಿಬಸಯ್ಯ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರಪ್ಪ ಮಾತನಾಡಿದರು.