ಬೆಂಗಳೂರು: ಕಳೆದ ವರ್ಷ ನಡೆದ ಹಿರಿಯ ಭೂವಿಜ್ಞಾನಿ ಕೆ.ಎಸ್.ಪ್ರತಿಮಾ (43) ಕೊಲೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸುಬ್ರಹ್ಮಣ್ಯಪುರ ಪೊಲೀಸರು ಆರೋಪಿ ಕಿರಣ್ ವಿರುದ್ಧ ನ್ಯಾಯಾಲಯಕ್ಕೆ 600 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಕೆ
ಲಸದಿಂದ ತೆಗೆದು ಹಾಕಿದಕ್ಕೆ ಕೋಪಗೊಂಡ ಕಿರಣ್, 2023ರ ನ.4 ರಂದು ದೊಡ್ಡಕಲ್ಲಸಂದ್ರದ ಕುವೆಂಪು ನಗರದಲ್ಲಿರುವ ಹಿರಿಯ ಭೂವಿಜ್ಞಾನಿ ಕೆ.ಎಸ್.ಪ್ರತಿಮಾ ಮನೆಗೆ ನುಗ್ಗಿ ಆವರನ್ನು ಕೊಲೆ ಗೈದು, ಬಳಿಕ ಅವರ ಮೈಮೇಲಿದ್ದ ಚಿನ್ನಾ ಭರಣ, ಕಬೋರ್ಡ್ ನಲ್ಲಿಟ್ಟಿದ್ದ 5 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ. ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ತಲಘಟ್ಟಪುರ ಠಾಣಾಧಿಕಾರಿ ಎನ್.ಜಗದೀಶ್ ನೇತೃತ್ವದ ತಂಡ ತನಿಖೆ ಪೂರ್ಣಗೊಳಿಸಿ, ನಗರದ 2ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿ ಕಿರಣ್ ನೀಡಿದ್ದ ಸ್ವಇಚ್ಛಾ ಹೇಳಿಕೆ, 70 ಮಂದಿ ಸಾಕ್ಷಿದಾರರ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ, ಸಾಂದರ್ಭಿಕ ಸಾಕ್ಷ್ಯ, ಡಿಜಿಟಲ್ ಸಾಕ್ಷ್ಯಾಧಾರ ಸಹಿತ 600 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ.
ಆರೋಪಿ ಕಿರಣ್ ತಂದೆ ಭೂವಿಜ್ಞಾನ ಇಲಾಖೆಯಲ್ಲಿ ಕಾರು ಚಾಲಕರಾಗಿದ್ದರು. ಹೀಗಾಗಿ ಕಿರಣ್‌ಗೂ ಅದೇ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿ ಕೆಲಸ ಸಿಕ್ಕಿದ್ದು, ಪ್ರತಿಮಾಗೆ ಕಾರು ಚಾಲಕನಾಗಿದ್ದ. ಈ ವೇಳೆ ಪ್ರತಿಮಾ ಜತೆ ಕೆಲವೊಮ್ಮೆ ಆರೋಪಿ ಅನುಚಿತವಾಗಿ ವರ್ತಿಸಿದ್ದ. ಜತೆಗೆ ಈತ ಅಪರಾಧ ಹಿನ್ನೆಲೆಯುಳ್ಳವ ಎಂದು ತಿಳಿದ ಪ್ರತಿಮಾ, ಆತನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಅದರಿಂದ ಆಕ್ರೋಶಗೊಂಡಿದ್ದ ಕಿರಣ್, ನ.4ರಂದು ದೊಡ್ಡಕಲ್ಲಸಂದ್ರದ ಕುವೆಂಪು ನಗರದ ಪ್ರತಿಮಾ ಮನೆ ಬಳಿ ಪ್ರತಿಮಾಗಾಗಿ ಕಾಯುತ್ತಿದ್ದ. ಅವರು, ರಾತ್ರಿ 8.30ರ ಸುಮಾರಿಗೆ ಮನೆಗೆ ಬಂದಾಗ ಹಿಂದಿನಿಂದಲೇ ಹೋಗಿ, ಮತ್ತೂಮ್ಮೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಆಕೆ ಬಳಿ ಮನವಿ ಮಾಡಿದ್ದಾನೆ. ಆದರೆ, ಪ್ರತಿಮಾ ತಿರಸ್ಕರಿಸಿದ್ದಾರೆ.
ಇದೇ ಕಾರಣಕ್ಕೆ ಕೋಪಗೊಂಡ ಆರೋಪಿ, ಪ್ರತಿಮಾ ಅವರನ್ನು ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದ, ಬಳಿಕ ಆಕೆಯ ಮೈಮೇಲಿದ್ದ ಚಿನ್ನಾ ಭರಣ ವನ್ನೂ ದೋಚಿ ಪರಾರಿಯಾಗಿದ್ದ. ಅದಾದ ಮೇಲೆ ಇಬ್ಬರು ಸ್ನೇಹಿತರ ಜತೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ, ಮುಡಿಕೊಟ್ಟಿದ್ದ. ಅಲ್ಲಿಂದ ವಾಪಸ್ ಬೆಂಗಳೂರಿಗೆ ಬಂದಾಗ ಬಂಧಿಸಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖೀಸಿದ್ದಾರೆ.