Advertisement

ಪ್ರತಾಪ್‌ ಪೂಜಾರಿ ಕೊಲೆ: ಎಂಟು ಮಂದಿ ಸೆರೆ

12:25 PM Feb 23, 2017 | Harsha Rao |

ಮಂಗಳೂರು: ಪ್ರತಾಪ್‌ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 8  ಆರೋಪಿಗಳನ್ನು ಕಂಕನಾಡಿ ನಗರ ಪೊಲೀಸರು ಬುಧವಾರ ಬಂಧಿಸಿ ಕೃತ್ಯಕ್ಕೆ ಬಳಸಿದ ತಲವಾರು, ಚೂರಿ ಹಾಗೂ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ವೀರನಗರದ ಸಾಗರ್‌ ಪೂಜಾರಿ (25), ಮರೋಳಿಯ ಮಿಥುನ್‌ (25), ವೀರನಗರದ ಕೌಶಿಕ್‌ (26), ಆಕಾಶಭವನ ಕಾಪಿಗುಡ್ಡೆಯ ತಿಲಕ್‌ರಾಜ್‌ ಶೆಟ್ಟಿ (28), ಕೋಡಿಕೆರೆಯ ನಿಖೀಲ್‌ ಶೆಟ್ಟಿ (19), ಕೋಡಿಕೆರೆಯ ಎಸ್‌ಇಝೆಡ್‌ ಕಾಲನಿಯ ಮನೀಷ್‌ ಪೂಜಾರಿ (20), ಕೋಟೆಕಾರು ಮಾಡೂರಿನ ಶಿವರಾಜ್‌ (26), ಫ‌ರಂಗಿಪೇಟೆ ಕುಂಪನಮಜಲು ಹೌಸ್‌ನ ರಾಜೇಶ್‌ (21) ಬಂಧಿತರು.  ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಫೆ. 18ರಂದು ರಾತ್ರಿ ಹರ್ಷಿತ್‌ ಶೆಟ್ಟಿ ತನ್ನ ಸ್ನೇಹಿತರಾದ ವಿತೇಶ್‌, ಮಣಿಕಂಠ ಅವರೊಂದಿಗೆ ತನ್ನ ಮನೆಯಂಗಳದಲ್ಲಿ ಮದ್ಯ ಸೇವಿಸುತ್ತಿದ್ದರು. ಕೌಶಿಕ್‌ನ ಅಣ್ಣ ನಿಶಿತ್‌ಗೆ ಮಣಿಕಂಠ ಫೆ. 15ರಂದು ಹೊಡೆದಿದ್ದ. ಅದನ್ನು ರಾಜಿ ಮಾಡಲೆಂದು ಸಾಗರ್‌, ಮಿಥುನ್‌, ನಿಶಿತ್‌ ಅವರ ಜತೆ  ಕೋಡಿಕೆರೆಯ ತಿಲಕ್‌, ಮಿಥುನ್‌, ನಿಖೀಲ್‌, ಶಿವು, ಶರಣ್‌, ಮನೀಷ್‌ ಹಾಗೂ ರಾಜೇಶ್‌ ಬಂದಿದ್ದರು. ಅವರೊಳಗೆ ಮಾತಿನ ಚಕಮಕಿ ಉಂಟಾಗಿ ಜಗಳವಾಗಿ ಶಿವು ಮತ್ತು ತಿಲಕ ಸೇರಿಕೊಂಡು ಪ್ರತಾಪ್‌ ಪೂಜಾರಿಗೆ ತಲವಾರ್‌ನಿಂದ ಕಡಿದಿದ್ದರು. ಪ್ರತಾಪ್‌ ಸ್ಥಳದಲ್ಲೇ ಮೃತಪಟ್ಟು, ಮಣಿಕಂಠ ಗಾಯಗೊಂಡಿದ್ದರು.

ಆಯುಕ್ತ ಎಂ. ಚಂದ್ರಶೇಖರ್‌, ಡಿಸಿಪಿಗಳಾದ ಶಾಂತರಾಜು, ಡಾ| ಸಂಜೀವ ಎಂ. ಪಾಟೀಲ್‌, ಎಸಿಪಿ ಶ್ರುತಿ, ಕಂಕನಾಡಿ ನಗರ ಇನ್‌ಸ್ಪೆಕ್ಟರ್‌ ರವಿ ನಾೖಕ್‌ ನೇತೃತ್ವದ ಕಾರ್ಯಾಚರಣೆಯಲ್ಲಿ ಎಎಸ್‌ಐ ಭಾಸ್ಕರ ರಾವ್‌, ರುಕ್ಮಯ, ದಯಾನಂದ, ಗಿಲ್ಬರ್ಟ್‌, ಹೆಡ್‌ಕಾನ್‌ಸ್ಟೆಬಲ್‌ಗ‌ಳಾದ ಸಂತೋಷ್‌,ವಿನೋದ್‌, ಮದನ್‌, ರಘುವೀರ್‌, ರವೀಂದ್ರನಾಥ, ವಿನೋದ ಕುಮಾರ್‌ ಹಾಗೂ ಪಿಸಿಗಳಾದ ನೂತನ್‌ ಕುಮಾರ್‌, ಭೀಮಪ್ಪ, ಮಾಲತೇಶ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next