ಬೆಂಗಳೂರು: ಐಪಿಎಲ್ ಆಟಗಾರರ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆ ಕಾಣುತ್ತಿದೆ. ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಬೌಲರ್ ಪ್ರಸಿದ್ ಕೃಷ್ಣ ಅವರಿಗೂ ಕೋವಿಡ್ ಪಾಸಿಟಿವ್ ಆಗಿದೆ.
ಕೆಕೆಆರ್ ಪಾಳಯದಲ್ಲಿ ಇದೀಗ ನಾಲ್ಕು ಆಟಗಾರರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಮೊದಲು ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಗೆ ಕೋವಿಡ್ ಪಾಸಿಟಿವ್ ಆಗಿತ್ತು. ಇಂದು ಕೀಪರ್ ಟಿಮ್ ಸೀಫರ್ಟ್ ಗೂ ಸೋಂಕು ದೃಢವಾಗಿತ್ತು.
ಇದನ್ನೂ ಓದಿ:ಬೆಡ್ ಸ್ಕ್ಯಾಮ್ ಗೆ ಬಿಜೆಪಿ ನಾಯಕರೇ ಕಿಂಗ್ ಪಿನ್ ಗಳು: ದಿನೇಶ್ ಗುಂಡೂರಾವ್
ಪ್ರಸಿದ್ ಕೃಷ್ಣ ಅವರಿಗೆ ಅಹಮದಾಬಾದ್ ನಲ್ಲಿ ಕೆಕೆಆರ್ ಬಬಲ್ ತೊರೆಯುವಾಗ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಅಗ ನೆಗೆಟಿವ್ ಆಗಿದ್ದು, ನಂತರ ಬೆಂಗಳೂರಿನಲ್ಲಿ ಪರೀಕ್ಷೆ ನಡೆಸುವಾಗ ಪಾಸಿಟಿವ್ ಆಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಶುಕ್ರವಾರ ತಂಡ ಪ್ರಕಟಿಸಲಾಗಿದ್ದು, ಪ್ರಸಿದ್ ಕೃಷ್ಣ ಅವರನ್ನು ಸ್ಟಾಂಡ್ ಬೈ ಆಗಿ ಆಯ್ಕೆ ಮಾಡಲಾಗಿದೆ. ನ್ಯೂಜಿಲ್ಯಾಂಡ್ ವಿರುದ್ಧ ಈ ಫೈನಲ್ ಪಂದ್ಯ ಇಂಗ್ಲೆಂಡ್ ನಲ್ಲಿ ನಡೆಯಲಿದೆ.