Advertisement

ಎನ್ ಟಿ ಆರ್ ಜೊತೆಗಿನ ಚಿತ್ರಕ್ಕೆ ಪ್ರಶಾಂತ್ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ?

01:39 PM May 24, 2021 | Team Udayavani |

ಹೈದರಾಬಾದ್ : ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಅವರು ಟಾಲಿವುಡ್ ಸ್ಟಾರ್ ಜ್ಯೂನಿಯರ್ ಎನ್ ಟಿಆರ್ ಅವರ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವ ಸುದ್ದಿ ಇದೀಗ ಟಾಕ್ ಆಫ್ ದಿ ಟೌನ್.

Advertisement

ಈ ಹಿಂದಿನಿಂದಲೂ ಎನ್ ಟಿ ಆರ್ ಹಾಗು ಪ್ರಶಾಂತ್ ನೀಲ್ ಕಾಂಬಿನೇಶನ್ ಸಿನಿಮಾ ಕುರಿತು ಮಾತುಗಳು ಕೇಳಿ ಬಂದಿದ್ದವು. ಮೇ 20 ರಂದು ಅದು ಕನ್ಫರ್ಮ್ ಆಯಿತು. ಅಂದು ಎನ್ ಟಿ ಆರ್ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ ಪ್ರಶಾಂತ್, ಅವರ ಜೊತಗೆ ನಮ್ಮ ಮುಂದಿನ ಸಿನಿಮಾವನ್ನೂ ಘೋಷಿಸಿದರು. ಸದ್ಯ ಈ ಸುದ್ದಿ ಟಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಮಿಂಚಿನಂತೆ ಸಂಚರಿಸುತ್ತಿದೆ. ಇದೀಗ ಪ್ರಶಾಂತ್ ನೀಲ್ ಅವರು ಈ ಸಿನಿಮಾ ನಿರ್ದೇಶನ ಮಾಡಲು ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬುದು ರಿವೀಲ್ ಆಗಿದೆ.

ಉಗ್ರಂ ಹಾಗೂ ಕೆಜಿಎಫ್ ಸರಣಿ ಸಿನಿಮಾಗಳನ್ನು ನಿರ್ದೇಶನ ಮಾಡಿ ದೊಡ್ಡ ಗೆಲುವು ಪಡೆದಿರುವ ಪ್ರಶಾಂತ್ ನೀಲ್ ಅವರಿಗೆ ತೆಲುಗು ಚಿತ್ರರಂಗದಲ್ಲಿಯೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಈಗಾಗಲೇ ಅವರು ಟಾಲಿವುಡ್ ನಲ್ಲಿ ನಟ ಪ್ರಭಾಸ್ ಅವರನ್ನು ಹಾಕಿಕೊಂಡು ಸಲಾರ್ ಚಿತ್ರ ಮಾಡುತ್ತಿದ್ದಾರೆ. ಇದೀಗ ಜ್ಯೂನಿಯರ್ ಎನ್ ಟಿ ಆರ್ ಸಿನಿಮಾ ಕೈಗೊಳ್ಳುತ್ತಿದ್ದಾರೆ. ಸದ್ಯ ರಿವೀಲ್ ಆಗಿರುವ ಮಾಹಿತಿಗಳ ಪ್ರಕಾರ ಪ್ರಶಾಂತ್ ನೀಲ್ ಅವರು ಈ ಸಿನಿಮಾ ನಿರ್ದೇಶನಕ್ಕೆ 10 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next