Advertisement

ಅಪ್ಪನ ಅಭಿನಯಕ್ಕೆ ಮಗಳ ನಿರ್ದೇಶನ

11:20 AM May 02, 2020 | Suhan S |

‌ಕನ್ನಡ ಚಿತ್ರರಂಗದ ಸ್ಟಾರ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರಿಗೆ ತಮ್ಮ ಮಗಳು ಆಕ್ಷನ್‌ ಕಟ್‌ ಹೇಳಿದ್ದು, ಮಗಳ ನಿರ್ದೇಶನದಂತೆ ನೀಲ್‌ ನಟಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

Advertisement

ಕೆಜಿಎಫ್-2 ಚಿತ್ರದಲ್ಲಿ ಬ್ಯುಸಿ ಇದ್ದ ಪ್ರಶಾಂತ್‌ ನೀಲ್‌, ಸದ್ಯ ಕೋವಿಡ್ 19  ಲಾಕ್‌ ಡೌನ್‌ನಿಂದ ಮನೆಯಲ್ಲೇ ಉಳಿದಿದ್ದಾರೆ. ಜೊತೆಗೆ ತನ್ನ ಕುಟುಂಬ ಮಡದಿ ಮಕ್ಕಳ ಜೊತೆ ಕಾಲಕಳೆಯುತ್ತಿದ್ದಾರೆ. ಈ ನಡುವೆ ಅವರು ತಮ್ಮ ಮಕ್ಕಳ ಜೊತೆ ಆಟವಾಡುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಮಗಳು ಅಪ್ಪನಿಗೆ ಆಕ್ಷನ್‌ ಕಟ್‌ ಹೇಳಿದ್ದಾಳೆ.

ಕೇವಲ 29 ಸೆಕೆಂಡ್‌ ಇರುವ ಈ ವಿಡಿಯೋದಲ್ಲಿ ಮೊದಲಿಗೆ ಪ್ರಶಾಂತ್‌ ನೀಲ್‌ ಅವರ ಮಗಳು ಸ್ಲೇಟ್‌ ಹಿಡಿದು ಆಕ್ಷನ್‌ ಕಟ್‌ ಹೇಳಿ ಹೋಗುತ್ತಾಳೆ. ನಂತರ ಪ್ರಶಾಂತ್‌ ನೀಲ್‌ ಅವರು, ಕೋಲಿನಿಂದ ಮಗನಿಗೆ ನಿಧಾನವಾಗಿ ಹೊಡೆಯುತ್ತಾರೆ. ಆಗ ಮಗ ಸಿನಿಮಾದಲ್ಲಿ ನಟರು ಬೀಳುವಂತೆ ನಿಧಾನವಾಗಿ ಕೆಳಗೆ ಬೀಳುತ್ತಾನೆ. ಮತ್ತೆ ಮೇಲೆ ಎದ್ದು ಕೋಲು ತೆಗೆದುಕೊಂಡು ಅಪ್ಪನಿಗೆ ವಾಪಸ್‌ ಹೊಡೆಯುತ್ತಾನೆ. ಆಗ ಪ್ರಶಾಂತ್‌ ನೀಲ್‌ ಕಿರುಚುತ್ತಾರೆ. ಮಗಳು ಆಕ್ಷನ್‌ ಕಟ್‌ ಹೇಳುತ್ತಿದ್ದಂತೆ ಮಗನ ಜೊತೆ ನಟಿಸಿರುವ ನೀಲ್‌, ಈ ವಿಡಿಯೋವನ್ನು ಶೇರ್‌ ಮಾಡಿ, ಇದು ನೀಲ್‌ ಗ್ಯಾಂಗ್‌ ಮತ್ತು ಅವರ ಲಾಕ್‌ಡೌನ್‌ ಸಮಯ. ಯಾವಾಗ ನೀಲ್‌ ಶಾಟ್‌ ಅನ್ನು ಮಿಸ್‌ ಮಾಡುತ್ತಾನೆ. ಆಗ ಅವನು ಪ್ಲಾನ್‌ ಮಾಡಿ ಹೊಸ ಸ್ಕ್ರಿಪ್ಟ್ ಅನ್ನು ತಯಾರು ಮಾಡುತ್ತಾನೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ನೀಲ್‌ ಅವರ ಈ ವಿಡಿಯೋ ಸಖತ್‌ ವೈರಲ್‌ ಆಗಿ ಸೋಶಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next