Advertisement

ಕೈಗೆ ಬೇಕು ಪುನರ್‌ಜನ್ಮ: ಚುನಾವಣ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಪ್ರಸ್ತಾವ

11:36 PM Apr 21, 2022 | Team Udayavani |

ಹೊಸದಿಲ್ಲಿ: ಕೇಂದ್ರದಲ್ಲಿ ಮತ್ತೂಮ್ಮೆ  ಅಧಿಕಾರ ಗದ್ದುಗೆಯೇರುವ ಕನಸು ಕಾಣುತ್ತಿರುವ ಕಾಂಗ್ರೆಸ್‌ಗೆ ಖ್ಯಾತ ಚುನಾವಣ ಕಾರ್ಯತಂತ್ರಜ್ಞ ಪ್ರಶಾಂತ್‌ ಕಿಶೋರ್‌, ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ಕಾಂಗ್ರೆಸ್‌ನ  ಸ್ಥಿತಿಗತಿಗಳನ್ನು ಕೂಲಂಕಷವಾಗಿ ಅವಲೋಕಿಸಿ, ತಾವು ಕಂಡುಕೊಂಡ ಅಂಶಗಳನ್ನು ಕ್ರೋಢೀಕರಿಸಿ ಈ ಸಲಹೆಗಳನ್ನು ಅವರು ನೀಡಿದ್ದಾರೆ.

Advertisement

ಸಪ್ತ  ಸಲಹೆಗಳೇನು?  :

  1. ಯುಪಿಎ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರಿಯಲಿ. ಅತ್ತ ರಾಹುಲ್‌ ಗಾಂಧಿಯವರೂ ಸಂಸತ್ತಿನಲ್ಲಿ ಕಾಂಗ್ರೆಸ್ಸನ್ನು ಮುನ್ನಡೆಸಲಿ. ಆದರೆ, ಕಾಂಗ್ರೆಸ್‌ನ ಪಕ್ಷ ಒಬ್ಬ ಶಕ್ತಿಶಾಲಿ ಅಧ್ಯಕ್ಷನನ್ನು ಆರಿಸಲೇಬೇಕು ಹಾಗೂ ಆತ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಯಾಗಿರಬೇಕು.
  2. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ ಸದಸ್ಯತ್ವದ ಅಭಿಯಾನ ಆಗಬೇಕು. ಈ ಮೂಲಕ ಒಂದು ಕೋಟಿ ಕಾರ್ಯಕರ್ತರು ಸೃಷ್ಟಿಯಾಗಬೇಕು.
  3. ಆಧುನಿಕ ಕಾಲಘಟ್ಟದ ಡಿಜಿಟಲ್‌ ಯೋಧರ ಪಡೆಯೊಂದು ನಿರ್ಮಾಣವಾಗಬೇಕು.

4.ಹೊಸದಾಗಿ ರೂಪುಗೊಳ್ಳುವ ಡಿಜಿಟಲ್‌ ಪಡೆ, ಪಕ್ಷದ ಸಂವಹನಕ್ಕಾಗಿಯೇ ನೇಮಕ ವಾಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಯೊಬ್ಬರ ಅವಗಾಹನೆಯಲ್ಲಿ ಕೆಲಸ ಮಾಡಬೇಕು.

  1. “ಯುಪಿಎ- 3′ ಸರಕಾರ ರಚನೆಗೆ ಯೋಜನೆ ರೂಪಿಸುವುದಕ್ಕಿಂತ ಹೆಚ್ಚಾಗಿ, ಕಾಂಗ್ರೆಸ್‌ ಪ್ಲಸ್‌ ರೀತಿಯ ಮೈತ್ರಿ ಆಗಲಿ.
  2. ಮುಂದಿನ ಚುನಾವಣೆ ಹೊತ್ತಿಗೆ 30 ಕೋಟಿ ಮತದಾರರನ್ನು ಗಾಂಧಿ ಮತ್ತು ಗೋಡ್ಸೆ ವಿಚಾರದಡಿ ಮುಟ್ಟಬೇಕು.

7.ಸಾಂಪ್ರದಾಯಿಕ ಸಂವಹನ ತಂತ್ರಗಾರಿಕೆ­ಯನ್ನು ಆಮೂಲಾಗ್ರವಾಗಿ ಬದಲಾಯಿಸಿ ನವ ಮಾಧ್ಯಮ ಆಧಾರಿತ ಸಂವಹನ ಕಾರ್ಯತಂತ್ರಗಳನ್ನು ಅಳವಡಿಸಿ ಅನುಷ್ಠಾನಗೊಳಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next