Advertisement

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

06:16 PM Nov 23, 2024 | Team Udayavani |

ಪಣಜಿ: ಕೇಂದ್ರ ಸರಕಾರಿ ಸ್ವಾಮ್ಯದ ಪ್ರಸಾರ ಭಾರತಿ ಸಹ ಈಗ ಒಟಿಟಿ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 55ನೇ ಆವೃತ್ತಿಯಲ್ಲಿ ಪ್ರಸಾರ ಭಾರತಿಯ ಒಟಿಟಿ ವೇದಿಕೆ ʼವೇವ್ಸ್‌ʼ ಅನ್ನು ಲೋಕಾರ್ಪಣೆಗೊಳಿಸಲಾಗಿದೆ.

Advertisement

ವೇವ್ಸ್‌ – ಮನರಂಜನೆಯ ಹೊಸ ಅಲೆ ಎಂಬ ಘೋಷಣೆಯಡಿ ಪ್ರಸಾರ ಭಾರತಿ ಈಗ ಒಟಿಟಿ ಕ್ಷೇತ್ರಕ್ಕೆ ಕಾಲಿಟ್ಟಿದೆ.  ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಚಾಲನೆ ನೀಡಿದರು.

ಪ್ರಸಾರ ಭಾರತಿಯ ಅಧ್ಯಕ್ಷ ನವನೀತ್‌ ಕುಮಾರ್‌ ಸೆಹಗಾಲ್‌ ಈ ಕುರಿತು ಮಾತನಾಡಿ, ಸರಕಾರಿ ಸ್ವಾಮ್ಯದ ಪ್ರಸಾರ ಮಾಧ್ಯಮವಾಗಿ ಸ್ವಚ್ಛ ಹಾಗೂ ಅರೋಗ್ಯಕರವಾದ ಕೌಟುಂಬಿಕ ಮನರಂಜನೆಯನ್ನು ಸಮಾಜದ ಎಲ್ಲ ವರ್ಗಗಳಿಗೆ ಒದಗಿಸಬೇಕಾದುದು ನಮ್ಮ ಹೊಣೆಗಾರಿಕೆಯೂ ಸಹ. ಈ ಹಿನ್ನೆಲೆಯಲ್ಲಿ ವೇವ್ಸ್‌ ಅನ್ನು ರೂಪಿಸಲಾಗಿದೆʼ ಎಂದು ತಿಳಿಸಿದ್ದಾರೆ.

ವೇವ್ಸ್‌ ವೈವಿಧ್ಯಮಯ ವಿಷಯಗಳನ್ನು ಹೊಂದಿರಲಿದೆ. ಕೇವಲ ಮನರಂಜನೆಯಷ್ಟೇ ಆಲ್ಲದೇ, ಗೇಮ್ಸ್ ಗಳನ್ನೂ ಹೊಂದಿರಲಿದೆ. ಭಾರತದ ಇತಿಹಾಸ ಮತ್ತು ಶ್ರೀಮಂತ ಸಂಸ್ಕೃತಿಯ ಪ್ರಚಾರಕ್ಕೂ ಈ ಒಟಿಟಿ ವೇದಿಕೆಯಾಗಲಿದೆ.

ಪ್ರಸಾರ ಭಾರತಿಯ ಸಿಇಒ ಗೌರವ್‌ ದ್ವಿವೇದಿ ಪ್ರಕಾರ, ದೇಶದ ಉದ್ದಗಲಕ್ಕೂ ಮನರಂಜನೆ ಲಭ್ಯವಾಗಬೇಕೆಂಬುದು ವೇವ್ಸ್‌ ನ ಉದ್ದೇಶ ಎಂದರು.

Advertisement

ಫೌಜಿ, 2. 20, ರಾಮಾಯಣ ಸೇರಿದಂತೆ ಹಲವಾರು ವಿಷಯಗಳು ವೇವ್ಸ್‌ ನಲ್ಲಿ ಲಭ್ಯವಿವೆ.  ಇದರೊಂದದಿಗೆ ವೀಡಿಯೋ ಅನ್‌ ಡಿಮ್ಯಾಂಡ್‌ ಆಯ್ಕೆಯೂ ಇದೆ. 65 ಟಿವಿ ಚಾನೆಲ್‌ ಗಳು, ರೇಡಿಯೋ ಸ್ಟೇಷನ್‌ ಗಳು, ಉಚಿತ ಗೇಮ್ ಗಳು, ಮಲ್ಟಿ ಮೀಡಿಯಾ ಸೇವೆಯೂ ಸೇರಿದಂತೆ ಹಲವು ಸೌಲಭ್ಯಗಳು ವೇವ್ಸ್‌ ನಲ್ಲಿ ಲಭ್ಯ. ಇದರೊಂದಿಗೆ ಇ ಕಾಮರ್ಸ್‌ ವೇದಿಕೆಯೂ ವೇವ್ಸ್‌ ಆಗಲಿದೆ.

ಬೇಡಿಕೆಯ ಮೇಲೆ ವಿಡಿಯೋ:

ವಿಡಿಯೋ ಅನ್‌ ಡಿಮ್ಯಾಂಡ್‌ ಸೇವೆ ಉಳಿದ ಎಲ್ಲ ಒಟಿಟಿ ಗಳಿಗಿಂತ ವೇವ್ಸ್‌ ಅನ್ನು ವಿಭಿನ್ನವಾಗಿಸಬಹುದು. ಪ್ರಸಾರ ಭಾರತಿ ರಾಮಾಯಣ, ಮಹಾಭಾರತದಿಂದ ಹಿಡಿದು ಅಸಂಖ್ಯಾತ ಲಕ್ಷಾಂತರ ಗಂಟೆಗಟ್ಟಲೆ ನೋಡಬಹುದಾದ, ಆಲಿಸಬಹುದಾದ ಅಮೂಲ್ಯ ವಿಡಿಯೋ, ಆಡಿಯೋ ಕಂಟೆಂಟ್‌ ಗಳ ಸಂಗ್ರಹವನ್ನು ಹೊಂದಿದೆ. ಇವೆಲ್ಲವೂ ವೇವ್ಸ್‌ ನ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಇದನ್ನು ವೀಡಿಯೊ ಆನ್‌ ಡಿಮ್ಯಾಂಡ್‌ ನಡಿ ಒದಗಿಸುವ ಆಲೋಚನೆ ವೇವ್ಸ್‌ ನದ್ದು.

ವೇವ್ಸ್‌ ಡೌನ್‌ ಲೋಡ್‌ ಗೆ ಪ್ಲೇ ಸ್ಟೋರ್‌ ಗಳಲ್ಲಿ ಲಭ್ಯವಿದೆ. ಡೌನ್‌ ಲೋಡ್‌ ಉಚಿತವಾಗಿರಲಿದ್ದು, ಬಹುತೇಕ ಕಂಟೆಂಟ್‌ ಗಳು ಉಚಿತವಾಗಿರಲಿದೆ. ಕೆಲವು ವಿಶೇಷ (ಪ್ರೀಮಿಯಂ) ಎನ್ನುವ ಕಂಟೆಂಟ್‌ ಗಳಿಗ ಮಾತ್ರ ದರ ನಿಗದಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next