Advertisement

ವೃದ್ಧರ ಸೇವೆಯಿಂದ ಮನಸ್ಸು ಪ್ರಸನ್ನ

04:55 PM Mar 21, 2017 | |

ಜೇವರ್ಗಿ: ವೃದ್ಧರ ಸೇವೆ ಮಾಡುವುದರಿಂದ ಮನಸ್ಸು ಪ್ರಸನ್ನತೆ ಕಡೆಗೆ ಹೋಗುವುದಲ್ಲದೆ ಆಯುಷ್ಯ ವೃದ್ಧಿ, ವಿದ್ಯೆ ಪ್ರಾಪ್ತಿಯಾಗುತ್ತದೆ ಎಂದು ಕಾಶೀ ಜಗದ್ಗುರು ಡಾ| ಚಂದ್ರಶೇಖರ ಭಗವತ್ಪಾದರು ನುಡಿದರು. ತಾಲೂಕಿನ ಶಖಾಪುರ ತಪೋವನ ಮಠದಲ್ಲಿ ಸಿದ್ದರಾಮ ಶಿವಾಚಾರ್ಯರ ಜನ್ಮ ಸುವರ್ಣ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ  ಸ್ವಾಮೀಜಿ ಆಶೀರ್ವಚನ ನೀಡಿದರು.

Advertisement

ವೃದ್ಧರಿಗೆ ಮಾಡಿದ ಸೇವೆ ದೇವರಿಗೆ ಮಾಡುವ ಸೇವೆಗೆ ಸಮಾನವಾಗಿರುತ್ತದೆ. ತಂದೆ ತಾಯಿಗಳನ್ನು ದೇವರು ಎನ್ನುವ ಮನೋಭಾವ ಹೆಚ್ಚಾಗಬೇಕು. ವೃದ್ಧರಿಗೆ ಸಹಾಯ ಮಾಡುವುದರಿಂದ ಆಯುಷ್ಯ ವೃದ್ಧಿ, ಸಂತೋಷ ಪ್ರಾಪ್ತಿ, ನೆಮ್ಮದಿ ಲಭಿಸುತ್ತದೆ ಎಂದು ಹೇಳಿದರು. ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುವ ದೇಶದ ಜನರು ವೃದ್ಧರ ಸೇವೆಗೆ ಅಣಿಯಾಗ ಬೇಕಾಗುತ್ತದೆ.

ವಿದ್ಯೆ, ಬುದ್ಧಿಯನ್ನು ಪಡೆಯಬೇಕಾದರೆ ವೃದ್ಧರ ಸೇವೆ ಮಾಡಬೇಕಾಗುತ್ತದೆ ಎಂದು ಹೇಳಿದರು ಶಖಾಪುರ ತಪೋವನಮಠದ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರೈತ ಮುಖಂಡ ವೆಂಕೋಬರಾವ ವಾಗಣಗೇರಿ, ಬಸವರಾಜ ಸಾಸಾಬಾಳ, ಮಹಾದೇವಪ್ಪ ನೀರಲಕೋಡ, ಭೀಮರಾಯ ನೀರಲಕೋಡ, ಬಸಯ್ಯ ಸ್ವಾಮಿ ಕಮರಿಮಠ, ಚನ್ನಬಸಯ್ಯ ಸ್ಥಾವರಮಠ, ರಾಜೇಂದ್ರ ಕರಗಲ್‌, ಜಗದೀಶ ಕುಮಾರ ಒಳಕೇರಿ,

ಮಲ್ಲಪ್ಪ ಆರ್‌. ಜೀರಳಿ, ಸುಭಾಶ್ಚಂದ್ರ ಕಪಾಳೆ, ನಾಗೇಂದ್ರಪ್ಪ ಗಚ್ಚಿನಮನಿ, ವೀರೇಶ ಕಂದಗಲ, ಬಸವರಾಜ ಕಟ್ಟಿ ಹಂಗಿನಹಳ್ಳಿ, ಶ್ರೀಶೈಲ ಹಾಗರಗಾ, ವಿಶ್ವನಾಥ ಮೈನಾಳ, ಶರಣಪ್ಪ ಸಿಪಾಯಿ, ಮಲ್ಲು ಇಡ್ಲಿ, ಬಸವರಾಜ ಕಟ್ಟಿ ಕಲಬುರಗಿ, ಅಶೋಕ ಮರತೂರ, ಮಹಾದೇವಪ್ಪ ಯಕ್ಷಿಂತಿ, ಸುಭಾಷ ಪಾಟೀಲ ಇಟಗಾ, ಅಲ್ಲಾವುದ್ದೀನ, ಶರಣಯ್ಯ ಸ್ವಾಮಿ ಬಂಟನಳ್ಳಿ ಇದ್ದರು. 

ಹರಿದು ಬರುತ್ತಿರುವ ಭಕ್ತ ಸಾಗರ: ಮಾ.15ರಿಂದ ಕಾಶೀ ಜಗದ್ಗುರು ಡಾ| ಚಂದ್ರಶೇಖರ ಭಗವತ್ಪಾದರು ನೀಡುತ್ತಿರುವ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಕಲಬುರಗಿ ಜಿಲ್ಲೆ ಸೇರಿದಂತೆ ಸಿಂದಗಿ, ಶಹಾಪುರ, ಸುರಪುರ, ಯಾದಗಿರಿ, ವಿಜಯಪುರ, ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಸಹಸ್ರಾರು ಜನ ಭಾಗವಹಿಸುತ್ತಿದ್ದಾರೆ. ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಶ್ರೀಮಠದಲ್ಲಿ ಪ್ರಸಾದ, ಕುಡಿಯುವ ನೀರಿನ ಸೌಲಭ್ಯ ಹಾಗೂ ವಸತಿ ಸೌಕರ್ಯ ಕಲ್ಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next