Advertisement
ಹರ್ಷವರ್ಧನ ಪ್ರಚಾರ: ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ತಾಂಡವಪುರ, ಹದಿನಾರು , ಬಿಳಗೆರೆ ,ಸುತ್ತೂರು, ಹೊಸಕೋಟೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಹರ್ಷವರ್ಧನ ತೆರಳಿ, ತಮ್ಮ ಮಾವ ಶ್ರೀನಿವಾಸ ಪ್ರಸಾದ್‌ಗೆ ಮತ ನೀಡುವಂತೆ ಮನವಿ ಮಾಡಿದರು.
Related Articles
Advertisement
ಪುತ್ರಿ ಪ್ರತಿಮಾ ಪ್ರಚಾರ: ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್ ಅವರ ಹಿರಿಯ ಪುತ್ರಿ ಪ್ರತಿಮಾ ಚುನಾವಣಾ ಪ್ರಚಾರ ನಡೆಸಿದರು. ಪ್ರತಿ ಮನೆ ಮನೆಗೂ ತೆರಳಿ ಮತಯಾಚಿಸಿದರು.
ಈ ವೇಳೆ ಮಾತನಾಡಿದ ಅವರು, 20 ವರ್ಷಗಳ ಬಳಿಕ ಲೋಕಸಭೆಗೆ ಸ್ಪರ್ಧಿಸಿರುವ ತಮ್ಮ ತಂದೆಯನ್ನು ಈ ಬಾರಿ ಸಂಸತ್‌ಗೆ ಕಳುಹಿಸಬೇಕು. ದೇಶಕ್ಕೆ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕಿದ್ದು, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಬಿಜೆಪಿ ಬೆಂಬಲಿಸಬೇಕು ಎಂದು ಕೋರಿದರು.
ಈ ವೇಳೆ ಮುಖಂಡರಾದ ಕಾಪು ಸಿದ್ಧಲಿಂಗಸ್ವಾಮಿ, ಜಿಪಂ ಸದಸ್ಯ ಗುರುಸ್ವಾಮಿ, ಸದಾನಂದ, ತಾಪಂ ಅಧ್ಯಕ್ಷ ಬಿ ಮಹದೇವಪ್ಪ, ವರುಣಾ ಕ್ಷೇತ್ರದ ಅಧ್ಯಕ್ಷ ಶಿವಯ್ಯ, ಮುಖಂಡರಾದ ಮಾಂಬಳ್ಳಿ ಮೂರ್ತಿ, ತಾಂಡವಪುರ ಸಂದೀಪ್, ಸುತ್ತೂರು ಚಿಕ್ಕಮಾದಪ್ಪ, ತಾಪಂ ಸದಸ್ಯ ಸತೀಶ್ ಇತರರಿದ್ದರು.
ಪ್ರಸಾದ್ ಕುಟುಂಬದಿಂದ ಮತಬೇಟೆ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ನಾಲ್ಕು ದಶಕಗಳ ರಾಜಕೀಯವ ಜೀವನದಲ್ಲಿ ಎಂದಿಗೂ ಅವರ ಪುತ್ರಿಯರು ಹಾಗೂ ಸಂಬಂಧಿಕರು ಭಾಗಿಯಾಗಿರಲಿಲ್ಲ.
ಆದರೆ, ಈ ಬಾರಿ ಅವರ ಮೂವರು ಪುತ್ರಿಯರು, ಅಳಿಯಂದರು ಹಾಗೂ ಹತ್ತಿರದ ಸಂಬಂಧಿಕರು ಉರಿ ಬಿಸಿಲನ್ನು ಲೆಕ್ಕಿಸದೇ ಹಳ್ಳಿಗಳನ್ನು ಸುತ್ತುತ್ತಾ ಮತಬೇಟಿಗೆ ಇಳಿದಿದ್ದಾರೆ. ಪ್ರಸಾದ್ ಅಳಿಯ, ನಂಜನಗೂಡು ಶಾಸಕ ಹರ್ಷವರ್ಧನ್, ಮತ್ತೂಬ್ಬ ಅಳಿಯ ಡಾ|ಮೋಹನ್, ಹಿರಿಯ ಪುತ್ರಿ ಪ್ರತಿಮಾ ಸೇರಿದಂತೆ ಸಂಬಂಧಿಕರು ಕ್ಷೇತ್ರ ವ್ಯಾಪ್ತಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.