Advertisement

ಮೇ 20 ರಿಂದ “ಪ್ರಾರಂಭ” ಶುಭಾರಂಭ

01:40 PM May 18, 2022 | Team Udayavani |

ಚಿತ್ರದ ಸಂಪೂರ್ಣ ಕೆಲಸಗಳನ್ನು ಮುಗಿಸಿ ಇನ್ನೇನು ಚಿತ್ರ ಬಿಡುಗಡೆ ದಿನ ಬಂತು ಅನ್ನುವಾಗ ಕೋವಿಡ್‌ ಲಾಕ್‌ಡೌನ್‌ ಆರಂಭವಾಗಿ, ಅದೆಷ್ಟೋ ಚಿತ್ರಗಳು ತೆರೆಗೆ ಬಾರದೇ ಹಿಂದೆ ಸರಿದಿದ್ದವು. ಇದೀಗ ಕನ್ನಡ ಚಿತ್ರರಂಗದ ಹೊಸ ಪರ್ವ ಶುರುವಾಗಿದ್ದು, ರಿಲೀಸ್‌ಗಾಗಿ ಕಾದು ಕುಳಿತಿದ್ದ ಎಲ್ಲಾ ಚಿತ್ರಗಳು ತೆರೆ ಮೇಲೆ ಬರಲು ಸಜ್ಜಾಗಿದೆ.

Advertisement

ಈ ಸಾಲಿಗೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನುರಂಜನ್‌ ಅಭಿನಯದ “ಪ್ರಾರಂಭ’ ಚಿತ್ರ ಸೇರಿದ್ದು, ಹೊಸ “ಪ್ರಾರಂಭ’ಕ್ಕೆ ದಿನಗಣೆ ಆರಂಭಿಸಿದೆ. ಜಗದೀಶ್‌ ಕಲ್ಯಾಡಿ ನಿರ್ಮಾಣದ , ಮನು ಕಲ್ಯಾಡಿ ಚೊಚ್ಚಲ ನಿರ್ದೇಶನದ, ಪ್ರಾರಂಭ ಚಿತ್ರ ಮೇ 20 ಕ್ಕೆ ಬಿಡುಗಡೆಯಾಗಲಿದೆ. ಬಿಡು ಗಡೆ ಹಿನ್ನೆಲೆಯಲ್ಲಿ ನಿರ್ದೇಶಕ ಮನು ಕಲ್ಯಾಡಿ ಮಾತನಾಡಿ, “ಕೋವಿಡ್‌ಗೂ ಮೊದಲು ತಯಾರಾದ ಚಿತ್ರ “ಪ್ರಾರಂಭ’. ಚಿತ್ರ ಬಿಡುಗಡೆಗೆ 3 ವರ್ಷ ಕಾದಿದ್ದೇವೆ. ಈಗ ಇದೇ ತಿಂಗಳ 20 ರಂದು ತೆರೆಗೆ ಬರುತ್ತಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟೂ 250 ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಇದೊಂದು ಪ್ರೇಮ ಕಥೆಯಾಗಿರುವ ಪಕ್ಕಾ ಕಮರ್ಷಿಯಲ್‌ ಸಿನಿಮಾ. ಇನ್ನು ಚಿತ್ರದಲ್ಲಿ ಮನುರಂಜನ್‌ ಮೂರು ಶೇಡ್‌ನ‌ಲ್ಲಿ ಕಾಣಿಸಿಕೊಂಡಿದ್ದು , ಚಿತ್ರದ ದ್ವಿತಿಯಾರ್ಧದಲ್ಲಿ ಕಥೆ ಕುತೂಹಲಕಾರಿಯಾಗಿದೆ’ ಎಂಬುದು ನಿರ್ದೇಶಕರ ಮಾತು.

ಚಿತ್ರದ ನಾಯಕ ಮನುರಂಜನ್‌, “ಈ ಚಿತ್ರದ ನಿರ್ದೇಶಕರು, ನಿರ್ಮಾಪಕರು ಹೊಸಬರಾದರೂ ಅವರು ತಂದ ಕಥೆ ನನಗೆ ಇಷ್ಟ ವಾ ಯಿತು. ಲವ್‌ ಫೇಲ್ಯೂರ್‌ ಅನ್ನೋದು ಯುವಕರನ್ನು ಆತ್ಮಹತ್ಯೆ ಅಥವಾ ಕೆಟ್ಟ ಚಟಗಳ ದಾಸರನ್ನಾಗಿಸುತ್ತದೆ. ತಮ್ಮ ತಂದೆ-ತಾಯಿ ಕುಟುಂಬದ ಬಗ್ಗೆ ಯೋಚನೆ ಮಾಡುವುದಿಲ್ಲ. ಆದರೆ ಲವ್‌ ಫೇಲ್ಯೂರ್‌ ಆದ ಮೇಲೂ ಒಂದು ಒಳ್ಳೆ ಜೀವನ ಇದೆ ಅನ್ನೋದನ್ನು ಚಿತ್ರದ ಮೂಲಕ ಹೇಳಲು ಹೊರಟಿದ್ದೇವೆ. ಒಂದು ಒಳ್ಳೆಯ ಕಂಟೆಂಟ್‌ ಇದರಲ್ಲಿದೆ’ ಎಂದರು.

ಚಿತ್ರದ ಛಾಯಾಗ್ರಾಹಕ ಸುರೇಶ್‌ ಬಾಬು ಮಾತನಾಡಿ, “ಆಗೋದೆಲ್ಲಾ ಒಳ್ಳೆದಕ್ಕೆ ಅನ್ನೋ ಮಾತಿದೆ ಹಾಗೇ ಈ ಚಿತ್ರ ಕೊರೊನಾ ಮೊದಲೇ ಬಿಡುಗಡೆಯಾಗಬೇಕಿತ್ತು, ಆದರೆ ಆಗಲಿಲ್ಲ . ಆದರೂ ಚಿತ್ರ ಈಗ ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವುದು ಖುಷಿ ಸಂಗತಿ’ ಎಂದರು.

Advertisement

ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ಅಭಿನಯಿಸಿದ್ದು, ಕಡ್ಡಿಪುಡಿ ಚಂದ್ರು, ಹನುಮಂತೇ ಗೌಡ್ರು, ಸೂರಜ್‌, ರಕ್ಷಿತ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ.

“ಜೇನುಶ್ರೀ ತನುಷ ಪ್ರೊಡಕ್ಷನ್‌’ ಅಡಿಯಲ್ಲಿ ಜಗದೀಶ್‌ ಕಲ್ಯಾಡಿ ನಿರ್ಮಾಣ, ಮನು ಕಲ್ಯಾಡಿ ನಿರ್ದೆಶನ, ಪ್ರಜ್ವಲ್‌ ಪೈ ಸಂಗೀತ ಸಂಯೋಜನೆ, ಸುರೇಶ್‌ ಬಾಬು ಛಾಯಾಗ್ರಹಣ, ಥ್ರಿಲ್ಲರ್‌ ಮಂಜು, ವಿಕ್ರಮ್‌ ಮೌರ್‌ ಸಾಹಸ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next