Advertisement

ನಿವೇಶನದಾರರಿಗೆ ಹಕ್ಕುಪತ್ರ ವಿತರಿಸಿ ನುಡಿದಂತೆ ನಡೆದ ಸರಕಾರ: ಶಾಸಕ ಮುನವಳ್ಳಿ

05:57 PM Mar 27, 2023 | Team Udayavani |

ಗಂಗಾವತಿ: ತಾಂಡ, ಕ್ಯಾಂಪ್ ಸೇರಿ ಕಂದಾಯ ರಹಿತವಾಗಿದ್ದ ಜನ ವಸತಿ ಗ್ರಾಮಗಳನ್ನು ರಾಜ್ಯ ಸರಕಾರ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಸ್ಥಳೀಯರ ಮನವಿ ಮೇರೆಗೆ ಗ್ರಾಮಗಳಿಗೆ ನೂತನ ಹೆಸರಿಟ್ಟು ನಿವೇಶನದಾರರಿಗೆ ಹಕ್ಕುಪತ್ರ ವಿತರಿಸಿ ರಾಜ್ಯ ಸರಕಾರ ನುಡಿದಂತೆ ನಡೆದಿದ್ದು 70 ವರ್ಷ ಅಧಿಕಾರ ನಡೆಸಿದವರ ಮಾಡದೇ ಇದ್ದ ಕಾರ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಮಾಡಿದ್ದರೆಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ಅವರು ಕೊಪ್ಪಳ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜಿನ್ನಾಪೂರ ತಾಂಡದಲ್ಲಿ ಹೊಸ ಕಂದಾಯ ಗ್ರಾಮಗಳ ನೂತನ ನಾಮಕರಣ ಮತ್ತು ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.

ಕಳೆದ 70 ವರ್ಷಗಳಿಂದ ಕಂದಾಯ ಗ್ರಾಮಗಳನ್ನು ಮಾಡುತ್ತೇವೆ ಎಂದು ಚುನಾವಣೆಯಲ್ಲಿ ಭರವಸೆ ನೀಡಿ ಮತ ಪಡೆದು ಮರೆಯುತ್ತಿದ್ದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರನ್ನು ಕ್ಷಮಿಸಬಾರದು. ಬಿಜೆಪಿ ಸರಕಾರ ಭರವಸೆ ಕೊಟ್ಟಂತೆ ನಡೆದುಕೊಂಡಿದ್ದು ತಾಂಡಾ, ಹಟ್ಟಿ, ಕ್ಯಾಂಪ್‌ಗಳನ್ನು ಕಂದಾಯ ಇಲಾಖೆಯಿಂದ ಸರ್ವೇ ನಡೆಸಿ ಅವಶ್ಯಕತೆ ಇದ್ದಲ್ಲಿ ಹೆಸರು ನೂತನವಾಗಿ ನಾಮಕರಣ ಮಾಡಿ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಎಸ್ಸಿ, ಎಸ್ಟಿ, ಹಿಂದುಳಿಸ ವರ್ಗಗಳ ಜನರೇ ಹೆಚ್ಚಾಗಿರುವ ಗ್ರಾಮಗಳಲ್ಲಿ ಅನೇಕ ಸರಕಾರಿ ಯೋಜನೆಗಳ ಅನುಷ್ಠಾನದ ಮೂಲಕ ಅವರೆಲ್ಲಾ ಮುಖ್ಯವಾಹಿನಿಗೆ ಬರಲು ಇದು ನೆರವಾಗಲಿದೆ ಎಂದರು.

ಗಂಗಾವತಿ ತಾಲೂಕಿನ ಬಂಡಿಬಸಪ್ಪ ಕ್ಯಾಂಪ್ ಇನ್ನೂ ಮುಂದೆ ಬಸವೇಶ್ವರನಗರವಾಗಿದ್ದು ಇಲ್ಲಿದ್ದ 93 ಕುಟುಂಬಗಳ ಪೈಕಿ ಸದ್ಯ 48 ಜನರಿಗೆ ನಿವೇಶನಗಳ ಹಕ್ಕುಪತ್ರ ವಿತರಿಸಲಾಗಿದೆ. ಹೊಸ್ಕೇರಾ ಕೋಟಯ್ಯ ಕ್ಯಾಂಪ್ ಇನ್ನೂ ಮುಂದೆ ಕೋಟಯ್ಯಪುರ ಹಾಗೂ ಹೊಸೂರು ಎಂದು ನಾಮಕರಣ ಮಾಡಲಾಗಿದೆ.

ಈ ಸಂದರ್ಭದಲ್ಲಿ ಎಡಿಸಿ ಸುನಿತಾ, ಕೊಪ್ಪಳ ತಹಸೀಲ್ದಾರ್ ಅಮರೇಶ ಬೀರಾದರ, ಉಪ ತಹಶಿಲ್ದಾರÀ ಮಲ್ಲಿಕಾರ್ಜುನ, ಗಂಗಾವತಿ ಗ್ರೇಡ್-2
ತಹಶಿಲ್ದಾರ ವಿ.ಎಚ್. ಹೊರಪೇಟೆ, ತಾ.ಪಂ.ಮಾಜಿ ಸದಸ್ಯ ಹನುಮಂತಪ್ಪ ಚೌವ್ಹಾಣ, ಸಂಗಾಪುರ ಗ್ರಾ.ಪ.ಅಧ್ಯಕ್ಷರಾದ ಜಿ.ಹರಿಶ್, ಇಂದರಗಿ ಗ್ರಾ.ಪಂ.ಅಧ್ಯಕ್ಷ ಹನುಮಂತಪ್ಪ ಭೋವಿ, ಪ್ರಮುಖರಾದ ಚನ್ನನಗೌಡ ಹಾಗೂ ಗ್ರಾಮದ ಪ್ರಮುಖರಾದ, ಹಿರಿಯರಿದ್ದರು.

Advertisement

ಇದನ್ನೂ ಓದಿ: ಅವಳಿ ತಾಲೂಕಿಗೆ ಒಂದೇ ಅಗ್ನಿಶಾಮಕ ಠಾಣೆ! ಅನಾಹುತ ಕೈ ಮೀರಿದರೆ ಸಿಬಂದಿ ಮೇಲೆ ಅಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next