Advertisement

ಅಭಿಜಿತ್ ಮುಖರ್ಜಿ ಇಂದು ತೃಣಮೂಲಕ್ಕೆ ಜಂಪ್..?!

04:24 PM Jul 05, 2021 | Team Udayavani |

ಕೋಲ್ಕತ್ತಾ : ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮಗ ಅಭಿಜಿತ್ ಮುಖರ್ಜಿ ಇಂದು (ಸೋಮವಾರ, ಜುಲೈ 5) ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವದಂತಿಗಳು ಪಶ್ಚಿಮ ಬಂಗಾಳ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.

Advertisement

ಜಂಗಿಪುರ್ ನ ಮಾಜಿ ಕಾಂಗ್ರೆಸ್ ಸಂಸದ ಹಾಗೂ ನಲ್ ಹಟಿ ಶಾಸಕ ಚುನಾವಣೆಗೂ ಮುನ್ನ ಮೃತರಾಗಿದ್ದ ಕಾರಣ ಆ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಬೇಕಾಗಿದ್ದು, ತೃಣ ಮೂಲ ಕಾಂಗ್ರೆಸ್ ಅಭಿಜಿತ್ ಮುಖರ್ಜಿ ಅವರಿಗೆ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಕೋಟತಟ್ಟು ಗ್ರಾ.ಪಂ.ಗೆ ಉಡುಪಿ ಜಿ.ಪಂ. ಸಿ.ಇ.ಒ. ಭೇಟಿ : ಅಭಿವೃದ್ಧಿ ಕುರಿತು ಚರ್ಚೆ

ಅಭಿಜಿತ್ ಮುಖರ್ಜಿಯವರ ತಂದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜಂಗಿಪುರ ಸಂಸದೀಯ ಕ್ಷೇತ್ರದಲ್ಲಿ ಸಂಸದರಾಗಿ ಜಯಗಳಿಸಿದ್ದರು. 2012 ರ ತನಕ ಅವರು ಆ ಕ್ಷೇತ್ರದ ಸಂಸದರಾಗಿದ್ದರು. ನಂತರ ರಾಷ್ಟ್ರಪತಿ ಹುದ್ದೆಗಾಗಿ ಆ ಕ್ಷೇತ್ರದ ಅಧಿಕಾರವನ್ನು ತೆರವುಗೊಳಿಸಿದರು.

ಯುಪಿಎ ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ ಅವರು ಬಿಜೆಪಿಗೆ ಸೇರ್ಪಡೆಗೊಂಡ ನಂತರ ಮುಖರ್ಜಿ ಕಾಂಗ್ರೆಸ್ ತ್ಯಜಿಸಲಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗಿದ್ದವು.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನ ಬಂಗಾಳ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ, ಮಾಜಿ ಲೋಕಸಭಾ ಸಂಸದ ಮುಖರ್ಜಿ,  “ನಾನು ಕಾಂಗ್ರೆಸ್ ನಲ್ಲಿಯೇ ಇರುತ್ತೇನೆ ಮತ್ತು ನಾನು ತೃಣಮೂಲಕ್ಕೆ ಸೇರುತ್ತೇನೆ ಅಥವಾ ಬೇರೆ ಯಾವುದೇ ಪಕ್ಷಕ್ಕೆ ಸೇರುತ್ತೇನೆ ಎಂಬ ವರದಿಗಳು ಸತ್ಯಕ್ಕೆ ದೂರವಾದದ್ದು” ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ಗೆ ಅವರು ಹೇಳಿಕೆ ನೀಡಿದ್ದಾರೆ.

ಇನ್ನು, , ಈಗ ತೃಣ ಮೂಲಕ್ಕೆ ಸೇರ್ಪಡೆಗೊಂಡ ಅಂದು ತನ್ನ ತಂದೆಯವರ ಕಾಂಗ್ರೆಸ್ ಸಹೋದ್ಯೋಗಿಗಳಾಗಿದ್ದ ಕೆಲವರು ತಮ್ಮೊಂದಿಗೆ ಟೀ ಪಾರ್ಟಿ ನಡೆಸಿದ್ದ ಕಾರಣದಿಂದ ವದಂತಿಗಳು ಹಬ್ಬರಬಹುದಾಗಿ ಅವರು ಹೇಳಿದ್ದಾರೆ.

2012 ರಲ್ಲಿ ತಂದೆ ಪ್ರಣಬ್ ಮುಖರ್ಜಿ ಅವರಿಂದ ಸಂಸದ ಸ್ಥಾನ ತೆರವುಗೊಂಡ  ನಂತರ ಅಭಿಜಿತ್ ಮುಖರ್ಜಿ ಜಂಗೀಪುರ ಸಂಸದೀಯ ಕ್ಷೇತ್ರದಲ್ಲಿ ಉಪಚುನಾವಣೆಗಳನ್ನು ಗೆದ್ದಿದ್ದರು ಹಾಗೂ 2014 ರಲ್ಲಿ ಮತ್ತೆ ಸಂಸದರಾಗಿ ಆಯ್ಕೆಯಾದರು. ಆದರೇ, 2019 ರಲ್ಲಿ ತೃಣಮೂಲದ ಖಲೀಲೂರ್ ರಹಮಾನ್ ವಿರುದ್ಧ ಸೋತಿದ್ದರು.

ಇದನ್ನೂ ಓದಿ : ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮಾನವ ಹಕ್ಕುಗಳ ಹೋರಾಟಗಾರ ಸ್ವಾಮಿ ನಿಧನ

Advertisement

Udayavani is now on Telegram. Click here to join our channel and stay updated with the latest news.

Next