Advertisement
ಪರಸ್ಪರ ಬೇರೆ ಬೇರೆ ಪಕ್ಷದವರಾದರೂ, ಈ ಮೂರು ವರ್ಷ ಹೇಗೆ ಈ ಇಬ್ಬರೂ ನಾಯಕರು ಹೊಂದಿಕೊಂಡು ಹೋದರು ಎಂಬ ಬಗ್ಗೆ ಬಹಳಷ್ಟು ಮಂದಿ ಈಗಲೂ ಅಚ್ಚರಿ ಪಡುತ್ತಾರೆ. ಇದಕ್ಕೆ ಇದೀಗ ಉತ್ತರ ಸಿಕ್ಕಿದೆ. ರಾಷ್ಟ್ರಪತಿ ಭವನದಲ್ಲೇ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಇಬ್ಬರೂ, ತಮ್ಮಿಬ್ಬರ ಹೊಂದಾಣಿಕೆಯ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
“ತಂದೆಯ ಸ್ಥಾನದಲ್ಲಿದ್ದು ನನಗೆ ಮಾರ್ಗದರ್ಶನ ಮಾಡಿದವರು ಪ್ರಣಬ್‌ದಾ. ನಮ್ಮಿಬ್ಬರ ಭೇಟಿಯಾದಾಗಲೆಲ್ಲಾ ಒಂದಷ್ಟು ವಿಶ್ರಾಂತಿ ತೆಗೆದುಕೊಂಡು ಕೆಲಸ ಮಾಡಿ, ಆರೋಗ್ಯದ ಮೇಲೆ ಗಮನವಿರಲಿ ಎನ್ನುತ್ತಿದ್ದರು. ನಾನು ದೆಹಲಿಗೆ ಬಂದ ಮೇಲೆ ಸಂಪೂರ್ಣವಾಗಿ ಸಹಕಾರ ಮಾಡಿದ ಪ್ರಣಬ್‌ದಾ ಅವರನ್ನು ಎಂದಿಗೂ ಮರೆಯುವುದಿಲ್ಲ. ಅವರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ.” ಬಳಿಕ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹೇಳಿದ್ದು,
“”ಸುಮಾರು ಮೂರು ವರ್ಷಗಳ ಅವಧಿಗೆ ನಾವಿಬ್ಬರು ಪರಸ್ಪರ ಸಹಕಾರದಿಂದ ಕೆಲಸ ಮಾಡಿದ್ದೇವೆ. ಹಾಗಂತ ನಮ್ಮಿಬ್ಬರ ನಡುವೆ ವಿಭಿನ್ನ ಅಭಿಪ್ರಾಯಗಳು ಇರಲೇ ಇಲ್ಲ ಎಂದಲ್ಲ. ಆದರೆ ಈ ವಿಭಿನ್ನ ಅಭಿಪ್ರಾಯಗಳನ್ನು ನಮ್ಮೊಳಗೇ ಇರಿಸಿಕೊಂಡು ಕೆಲಸ ಮಾಡಿದೆವು. ಇಂಥ ಅಭಿಪ್ರಾಯಗಳನ್ನು ಹೊರಗೆ ಬರಲು ಬಿಡದೇ, ನಮ್ಮಬ್ಬರ ರಾಷ್ಟ್ರಪತಿ-ಪ್ರಧಾನಿ ನಡುವಿನ ಸಂಬಂಧವನ್ನು ಹಾಳು ಮಾಡಿಕೊಳ್ಳಲು ಅವಕಾಶ ನೀಡಲಿಲ್ಲ.”
Related Articles
“”ಪ್ರತಿ ಬಾರಿಯೂ ನನ್ನ ಬಳಿಗೆ ಯಾವುದಾದರೂ ಫೈಲ್ ಬಂದಾಗ ಕರೆಯುತ್ತಿದ್ದಿದ್ದೇ ಅರುಣ್ ಜೇಟ್ಲಿ ಅವರನ್ನು. ಪಾಪ, ಅವರಿಗೆ ಎಷ್ಟು ತೊಂದರೆ ಕೊಟ್ಟಿದ್ದೇನೋ ಗೊತ್ತಿಲ್ಲ. ಆದರೂ ಅವರು ಬಂದು, ನನ್ನ ಎಲ್ಲ ಅನುಮಾನ, ಸಂದೇಹಗಳಿಗೆ ಉತ್ತರ ಕೊಡುತ್ತಿದ್ದರು.”
Advertisement