Advertisement

ಎಲ್ಲರನ್ನು ಸೇರಿಸಿಕೊಂಡು ಗೋವಾ ರಾಜ್ಯ ಅಭಿವೃದ್ಧಿ ಪಡಿಸುವುದೇ ನಮ್ಮ ಗುರಿ : ಪ್ರಮೋದ್ ಸಾವಂತ್

07:58 PM Aug 08, 2021 | Team Udayavani |

ಪಣಜಿ: ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಗೋವಾ ರಾಜ್ಯವನ್ನು ಅಭಿವೃದ್ಧಿ ಪಡಿಸುವ ಧ್ಯೇಯವನ್ನು ನಮ್ಮ ಸರ್ಕಾರ ಇಟ್ಟುಕೊಂಡಿದೆ. ರಾಜ್ಯದಲ್ಲಿ 151 ವಿವಿಧ ಯೋಜನೆಗಳನ್ನು ಆನ್‍ಲೈನ್ ಆನ್‍ಲೈನ್ ಮೂಲಕ ಲಭಿಸುವಂತೆ ಮಾಡಿರುವ ಏಕೈಕ ರಾಜ್ಯ ಗೋವಾ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ.

Advertisement

ರಾಜ್ಯದ ವಿವಿಧ ಪಂಚಾಯತಿಗಳಲ್ಲಿ ನಿಯುಕ್ತಿಗೊಳಿಸಿದ ಸ್ವಯಂಪೂರ್ಣ ಮಿತ್ರರೊಂದಿಗೆ ವೀಡಿಯೊ ಸಂವಾದ ನಡೆಸಿದ ಮುಖ್ಯಮಂತ್ರಿ ಸಾವಂತ್- ರಾಜ್ಯದಲ್ಲಿನ 10 ಪಂಚಾಯತಿಗಳ ಪಂಚಾಯತ್ ಅಧ್ಯಕ್ಷರು ಮತ್ತು ಸ್ವಯಂಪೂರ್ಣ ಮಿತ್ರರೊಂದಿಗೆ ಸಪ್ಟೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೊ ಸಂವಾದ ನಡೆಸಲಿದ್ದಾರೆ ಎಂದರು.

ಇದನ್ನೂ ಓದಿ :ಆಗಸ್ಟ್ 11 ದರ್ಶನ್ ಅವರಿಗೆ ವಿಶೇಷವಾದ ದಿನ : ಸಂಭ್ರಮಕ್ಕೆ ಸಜ್ಜಾಗಿದೆ ‘ಡಿ ಬಾಸ್’ ಪಡೆ  

ರಾಜ್ಯದ ವಿವಿಧ ಊರುಗಳಲ್ಲಿ ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸ್ವಯಂಪೂರ್ಣ ಮಿತ್ರರು ಆರಮಭಿಸಿರುವ ಪ್ರಯತ್ನಕ್ಕೆ ನಾನು ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಈ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಪಂಚಾಯತಿ ಹಾಗೂ ಸ್ವಯಂಪೂರ್ಣ ಮಿತ್ರರಿಗೆ ಪುರಸ್ಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next