Advertisement

ನಮ್ಮ ಸಹನೆ ಮೀರಿ ಹೋಗಿದೆ, ವರ್ಷದೊಳಗೆ ತೀರ್ಪು ಬರಬೇಕು; ಪ್ರಮೋದ್ ಮುತಾಲಿಕ್

03:20 PM Feb 25, 2022 | Team Udayavani |

ಶಿವಮೊಗ್ಗ: ಇತ್ತೀಚೆಗೆ ಹತ್ಯೆಯಾದ ಹಿಂದೂ ಕಾರ್ಯಕರ್ತ ಹರ್ಷ ಮನೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ನೀಡಿ, ಹರ್ಷ ಕುಟುಂಬಕ್ಕೆ ಸಾಂತ್ವನ ಹೇಳಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಹರ್ಷ‌ ಕೊಲೆ ಆರೋಪಿಗಳನ್ನು ಎನ್ ಕೌಂಟರ್ ಮಾಡಿ. ಇವರನ್ನ ಸಾಯಿಸಿ, ಕೋಕಾ ಕಾಯ್ದೆ ಹಾಕಿ. ನಮ್ಮ ಸಹನೆ ಮೀರಿ ಹೋಗಿದೆ, ವರ್ಷದೊಳಗೆ ತೀರ್ಪು ಬರಬೇಕು, ಹತ್ತು ವರ್ಷ ಕಾಯಲಾಗದು ಎಂದರು.

ಕಾಂಗ್ರೆಸ್ ಇರುವುದೇ ಮುಸ್ಲಿಮರಿಗಾಗಿ, ಸಿದ್ದರಾಮ್ಮಯ್ಯ ಮುಖ್ಯಮಂತ್ರಿಯಾಗಿದ್ದಾಗ 250 ಪಿಎಫ್ಐ ಕಾರ್ಯಕರ್ತರ ಕೇಸ್ ವಾಪಸ್ ಪಡೆದಿದ್ದರು. ಸಿದ್ದರಾಮಯ್ಯನವರೇ ನಿಮ್ಮದು ಇದೇ ದೇಶ, ಅವರು ನಿಮ್ಮನ್ನೂ ಬಿಡುವುದಿಲ್ಲ, ಸಿದ್ದು ನಿಮ್ಮ ಹೆಸರಲ್ಲೇ ರಾಮ ಇದ್ದಾನೆ, ಅವರು ನಿಮ್ಮನ್ನು ಬಿಡುವುದಿಲ್ಲ ಎಂದರು.

ಹರ್ಷ ಸ್ವಂತದ, ಸ್ವಾರ್ಥದ ಹಿನ್ನೆಲೆ ಕೊಲೆಯಾಗಿಲ್ಲ, ಹಣ, ಹುಡುಗಿ, ಜಮೀನು ವಿಚಾರದಲ್ಲಿ ಹರ್ಷ ಕೊಲೆಯಾಗಿಲ್ಲ. ಅವನು ಹಿಂದೂ ಕಾರ್ಯಕರ್ತ, ಹಿಂದುತ್ವದ ಹಿನ್ನೆಲೆಯಲ್ಲಿ ಕೊಲೆಯಾಗಿದೆ, ಅವನ ಸಾವು ವ್ಯರ್ಥವಾಗಬಾರದು. ಬೇರೆ ಪ್ರಕರಣದ ರೀತಿ 302 ಕೇಸ್ ಹಾಕಿ ಕೈ ತೊಳೆದುಕೊಳ್ಳಬಾರದು ಎಂದು ಮುತಾಲಿಕ್ ಆಗ್ರಹಿಸಿದರು.

ಇದನ್ನೂ ಓದಿ:ಉಳ್ಳಾಲದಲ್ಲಿ ಹಿಜಾಬ್ ವಿವಾದ: ವಿದ್ಯಾರ್ಥಿಗಳಿಂದ ಪ್ರತಿಭಟನೆ

Advertisement

ರಾಕ್ಷಸಿ ಸ್ವರೂಪದಲ್ಲಿ ಹರ್ಷನ ಕೊಲೆಯಾಗಿದೆ, ತರಬೇತಿ ಪಡದೆವರೇ ಕೊಲೆ ಮಾಡಿದ್ದಾರೆ. ಅವರ ಮಧ್ಯೆ ದ್ವೇಷ ಇತ್ತು ಎಂದು ಹೇಳಿ ಕೇಸ್ ಮುಚ್ಚಿಹಾಕಲು ಬಿಡುವುದಿಲ್ಲ. ಅವರ ಹಿಂದೆ ಇಸ್ಲಾಮಿಕ್ ಶಕ್ತಿಯೂ ಇದೆ, ಅವರನ್ನೂ ಬಂಧಿಸಬೇಕು ಎಂದರು.

ಡಿಜೆ ಹಳ್ಳಿ-ಕೆಜೆ ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್, ಮನೆ ಸುಟ್ಟರೂ ಜಮೀನು ಪಡೆದು ಹೊರಗಿದ್ದಾರೆ. ರುದ್ರೇಶ್, ರಾಜು, ಕುಟ್ಟಪ್ಪ ಕೊಂದವರೂ ಜಾಮೀನು ಪಡೆದು ಹೊರಗಡೆ ಓಡಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಜಾಮೀನು ನೀಡುವ ಸೆಕ್ಷನ್ ಹಾಕಿದರೆ ಹಿಂದೂ ಸಮಾಜ ಬಿಡುವುದಿಲ್ಲ. ಎಸ್ ಡಿಪಿಐ, ಪಿಎಫ್ಐ, ಎಸ್ಎಫ್ಐ ಯಾರೇ ಆದರೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅವರು ಸಂವಿಧಾನ, ಕೋರ್ಟ್ ಗೆ ಬೆಲೆ ನೀಡುವಂತೆ ಮಾಡಿ ಎಂದು ಹೇಳಿದರು.

ನಮಗೆ ಕಣ್ಣೀರು ಹಾಕಲು ಅವಕಾಶವಿಲ್ಲವೇ, ನಮ್ಮ ಕೈಯಲ್ಲಿ ಮಚ್ವು, ಲಾಂಗ್ ಇರಲಿಲ್ಲ. ಶವಯಾತ್ರೆಯಲ್ಲಿ ಭಾಗಿಯಾದ ಕಾರ್ಯಕರ್ತರ ಮೇಲೆ ಕೇಸ್ ಹಾಕಬಾರದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next