Advertisement

ಎಸ್‌ಡಿಪಿಐ-ಪಿಎಫ್‌ಐ ನಿಷೇಧಿಸದ ದುರ್ಬಲ ಸರಕಾರ: ಮುತಾಲಿಕ್‌

10:59 PM Jul 28, 2022 | Team Udayavani |

ಹುಬ್ಬಳ್ಳಿ: ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ಬಿಜೆಪಿ ಸರಕಾರ ಪೋಷಿಸುತ್ತಿದೆಯೇ ಹೊರತು  ನಿಷೇಧಿಸಲು ಮುಂದಾಗು ತ್ತಿಲ್ಲ. ಇದೊಂದು ದುರ್ಬಲ ಸರಕಾರ. ಬಿಜೆಪಿ ಮಾಡಲು ಮುಂದಾಗಿದ್ದು ಜನೋತ್ಸವ ಅಲ್ಲ, ಹಿಂದೂಗಳ ಪಾಲಿಗೆ ಮರಣೋತ್ಸವ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾ ಲಿಕ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಕಠಿನ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಸಿದ್ಧ ಉತ್ತರ ಸಂಪೂರ್ಣ ವೈಫಲ್ಯದ ಪ್ರತೀಕ. ಪ್ರವೀಣ್‌  ಹತ್ಯೆ ಖಂಡಿ ಸಿ ಆಕ್ರೋಶ ವ್ಯಕ್ತಪಡಿಸಿದ ಜನರ ಮೇಲೆ ಲಾಠೀಚಾರ್ಜ್‌ ಮಾಡಿರುವುದು ಲಜ್ಜೆಗೇಡಿತನ.  ಪ್ರವೀಣ ಹತ್ಯೆ  ಖಂಡಿಸಿ ರಾಜೀನಾಮೆ ನೀಡುತ್ತಿರುವುದನ್ನು ಸ್ವಾಗತಿಸುತ್ತೇವೆ. ಪ್ರವೀಣ್‌ ಕುಟುಂಬಕ್ಕೆ ಸಾಂತ್ವನ ಹೇಳಲು ಜು.29ರಂದು ಅವರ ಮನಗೆ ತೆರಳುತ್ತೇವೆ. ಆ ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿ ನೀಡಬೇಕು ಹಾಗೂ ಆತನ ಕನಸಿನಂತೆ ಮನೆ ಕಟ್ಟಿಕೊಡಬೇಕು ಎಂದು  ಆಗ್ರಹಿಸಿದರು.

ಎನ್‌ಐಎ ವರದಿ ಕೊಡಿ:

ಇಲ್ಲಿವರೆಗೆ ನಡೆದ 30 ಹಿಂದೂಗಳ ಕೊಲೆ ಪ್ರಕರಣಗಳ ಪೈಕಿ 9 ಪ್ರಕರಣಗಳಲ್ಲಿ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳ ಕೈವಾಡ ಇರುವ ಕುರಿತು ದೃಢಪಟ್ಟಿದ್ದರೂ  ಅವುಗಳಿಗೆ ನಿಷೇಧ ಹೇರುತ್ತಿಲ್ಲ. ಎನ್‌ಐಎ ತನಿಖೆ ಎಂಬ ನಾಟಕ ಬೇಡ. ಈಗಾಗಲೇ 6 ಪ್ರಕರಣಗಳನ್ನು ಎನ್‌ಐಎಗೆ ನೀಡಿದ್ದರೂ  ಪ್ರಗತಿ ಕಂಡಿಲ್ಲ. ಮಹಾ ಭ್ರಷ್ಟಾಚಾರದಿಂದ ಇಲ್ಲಿನ ಪೊಲೀಸ್‌ ವ್ಯವಸ್ಥೆಯೂ ದುರ್ಬಲಗೊಂಡಿದೆ. ಈ ಸಂಘಟನೆಗಳು ನಿಷೇಧಿಸುವಂತೆ ಆಗ್ರಹಿಸಿ ಆ.5ರಂದು ರಾಜ್ಯಮಟ್ಟದಲ್ಲಿ ಹೋರಾಟ ನಡೆಯಲಿದೆ ಎಂದರು.

ತೇಜಸ್ವಿ ಹೇಳಿಕೆ ಖಂಡನೀಯ:

Advertisement

ತೇಜಸ್ವಿ ಸೂರ್ಯ ಹೇಳಿಕೆ ಖಂಡನೀಯವಾಗಿದ್ದು, ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಪ್ರತಿಯೊಂದು ಮನೆಗೆ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂಬುದು ಬಾಲಿಶತನದಿಂದ ಕೂಡಿದೆ ಎಂದರು.

ಪರ್ಯಾಯ ರಾಜಕೀಯ ಶಕ್ತಿ:

ಹಿಂದೂಗಳ ರಕ್ಷಣೆಗಾಗಿ ಪರ್ಯಾಯವಾಗಿ ರಾಜಕೀಯ ಶಕ್ತಿ ಬೇಕಾಗಿದೆ. ಮುಂದಿನ ಚುನಾವಣೆಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಈ ಬಗ್ಗೆ ಚಿಂತನೆ ನಡೆಯಲಿದೆ. ನಿಮ್ಮ ರಾಜಕಾರಣಕ್ಕೆ ಬಡವರ ಮಕ್ಕಳನ್ನು ಬಲಿ ಕೊಡುವುದನ್ನು ನಿಲ್ಲಿಸಿ. ಯುಪಿ ಮಾದರಿ ನಿಮ್ಮಿಂದ ಸಾಧ್ಯವಿಲ್ಲ. ನನಗೆ ಅಧಿಕಾರ ಕೊಟ್ಟರೆ ಜಿಹಾದಿಗಳ ಹುಟ್ಟಡಗಿಸುತ್ತೇನೆ. ರಾಜ್ಯದಲ್ಲಿ ಎರಡನೇ ಯೋಗಿಯಾಗಿ ಆಡಳಿತ ನಡೆಸುತ್ತೇವೆ. ಹಿಂದೂಗಳ ಕೊಲೆ ವಿಚಾರದಲ್ಲಿ ರಾಜ್ಯದ ಸ್ವಾಮೀಜಿಗಳು ಸುಮ್ಮನಿರಬಾರದು ಎಂದರು.

ಅಂಗರಕ್ಷಕರನ್ನು ಹಿಂಪಡೆದ ಸರ್ಕಾರವಿದು:

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಪ್ರಮೋದ ಮುತಾಲಿಕ್‌ ಅವರಿಗೆ ನೀಡಿದ್ದ ಇಬ್ಬರು ಅಂಗರಕ್ಷಕರಲ್ಲಿ ಒಬ್ಬರನ್ನು ವಾಪಸ್‌ ಪಡೆದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಠೇವಣಿ ಇರಿಸಿದ್ದ ಪಿಸ್ತೂಲ್‌ ನೀಡುತ್ತಿಲ್ಲ. ಈ ಕುರಿತು ಗೃಹ ಸಚಿವರು ಉಡಾಫೆ ಉತ್ತರ ನೀಡಿದ್ದಾರೆ. ಕಲಬುರಗಿ ಸಿದ್ಧಲಿಂಗಸ್ವಾಮಿ ಅವರ ಅಂಗರಕ್ಷಕ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಮುಖಂಡರಿಗೆ ನೀಡಿದ್ದ ಭದ್ರತೆಯನ್ನು ಕೂಡ ವಾಪಸ್‌ ಪಡೆದಿದ್ದಾರೆ. ಈ ಬೆಳವಣಿಗೆ ನೋಡಿದರೆ ಹಿಂದೂಗಳ ಹೆಣ ಬೀಳಲಿ, ಅವರ ಸಮಾಧಿ ಮೇಲೆ ರಾಜಕಾರಣ ಮಾಡುವ ಸ್ಪಷ್ಟ ಉದ್ದೇಶ ಬಿಜೆಪಿ ನಾಯಕರದ್ದಾಗಿದೆ ಎಂದು ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next