ಮಂಗಳೂರು: ಈ ಬಾರಿಯೂ ಯುಗಾದಿ ಸಂದರ್ಭ ಹಲಾಲ್ ಕಟ್ ಬಹಿಷ್ಕಾರ ಅಭಿಯಾನ ಮುಂದುವರೆಯಲಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲಾಲ್ ಕಟ್ ಬಹಿಷ್ಕರಿಸಿ ಜಟ್ಕಾ ಕಟ್ ಸ್ವೀಕರಿಸಿ ಎಂದು ಕಳೆದ ವರ್ಷ ಆರಂಭಿಸಿದ ಅಭಿಯಾನ ಯಶಸ್ವಿಯಾಗಿತ್ತು. ಹಲಾಲ್ ಕಟ್ ನಿಂದಾಗಿ ಟ್ರಸ್ಟ್ ವೊಂದಕ್ಕೆ ಹಣ ಹೋಗುತ್ತಿದ್ದು ಇದು ಭಯೋತ್ಪಾದನೆ , ಗಲಭೆ ಕೃತ್ಯಗಳಿಗೆ ಬಳಕೆಯಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಶಿಗ್ಗಾಂವಿಯಿಂದ ಸ್ಪರ್ಧೆ ವಿಚಾರ: ವರಿಷ್ಠರ ತೀರ್ಮಾನದಂತೆ ನಡೆಯುತ್ತೇನೆ; ವಿನಯ್ ಕುಲಕರ್ಣಿ
ಸಚಿವ ಸುನಿಲ್ ಕುಮಾರ್ ಕೇಸರಿ ಶಾಲಿನ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಅವರು ಕೇಸರಿ ಶಾಲು , ಹಿಂದುತ್ವದಿಂದಲೇ ಈಗ ಇರುವ ಸ್ಥಾನಕ್ಕೆ ಬಂದಿದ್ದಾರೆ ಎಂಬುದನ್ನು ಮರೆತಿದ್ದಾರೆ. ಅವರು ಕೇಸರಿ ಶಾಲು, ಹಿಂದುತ್ವದ ಬಗ್ಗೆ ನೀಡಿರುವ ಹೇಳಿಕೆ ವಾಪಸ್ ಪಡೆದು ಹಿಂದುಗಳ ಕ್ಷಮೆ ಯಾಚಿಸಬೇಕು. ಹಾಗಾದರೆ ಹಿಂದುತ್ವ ಎಂದರೆ ಹಣ, ಭ್ರಷ್ಟಾಚಾರ ಮಾಡುವುದೆ? ಎಂದು ಮುತಾಲಿಕ್ ಪ್ರಶ್ನಿಸಿದರು.