Advertisement

ಡ್ರಗ್ ದಂಧೆಯ ಬಗ್ಗೆ 2009ರಲ್ಲೇ ಹೇಳಿದ್ದೆ, ಆದರೆ ನನ್ನನ್ನೇ ಜೈಲಿಗೆ ಹಾಕಿದ್ದರು: ಮುತಾಲಿಕ್

02:18 PM Sep 03, 2020 | keerthan |

ದಾವಣಗೆರೆ: ಮಂಗಳೂರಿನಲ್ಲಿ 2009ರ ಪಬ್ ಗಲಾಟೆ ನಡೆದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ನನ್ನನ್ನು ಮಾತ್ರ ಟಾರ್ಗೆಟ್‌ ಮಾಡಿ 15 ದಿನ ಜೈಲಿಗೆ ಕಳಿಸಿತು. ಡ್ರಗ್ ದಂಧೆಯ ಬಗ್ಗೆ ಟಾರ್ಗೆಟ್ ಮಾಡಲೇ ಇಲ್ಲ. ಆಗ ನಾನು ಪಬ್ ಗಳಲ್ಲಿ ಡ್ರಗ್ ಇತರೆ ಮಾಫಿಯಾ ನಡೆಯುತ್ತಿದೆ ಎಂದು ಚೀರಿ ಚೀರಿ ಹೇಳಿದರೂ ಸರ್ಕಾರ ಕೇಳಲಿಲ್ಲ. ಅದರ ಫಲವೇ ಈಗ ನೋಡುತ್ತಿದ್ದೆವೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ದೂರಿದ್ದಾರೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಮತ್ತು ರಾಜಕಾರಣಿಗಳೇ ರಾಜ್ಯದಲ್ಲಿ ಡ್ರಗ್ ಜಿಹಾದ್ ಗೆ ನೇರ ಕಾರಣ. ಪೊಲೀಸ್ ಇಲಾಖೆಯ ಬೇಹುಗಾರಿಕೆ ವಿಭಾಗ ಡ್ರಗ್ ಜಿಹಾದ್ ತಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕಳೆದ ಹತ್ತು ವರ್ಷಗಳ ಕಾಲ ನಡೆಯುತ್ತಿರು ಡ್ರಗ್ ಜಾಲದ ಇಂಚಿಂಚು ಮಾಹಿತಿ ಪೊಲೀಸ್ ಇಲಾಖೆ ಗೆ ಇರುತ್ತದೆ. ಆದರೆ, ರಾಜಕಾರಣಿಗಳು ಅವರ ಕೈಯನ್ನು ಕಟ್ಟಿ ಹಾಕಿರುತ್ತಾರೆ. ಡ್ರಗ್ ಜಿಹಾದ್ ಮೂಲಕ ಯುವಕ, ಯುವತಿಯರನ್ನು ದುರ್ಬಲ, ನಿಶ್ಯಕ್ತರನ್ನಾಗಿ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಯುವಕ, ಯುವತಿಯರ ಬಗ್ಗೆ ಕಾಳಜಿ ಇದ್ದಲ್ಲಿ ಡ್ರಗ್ ಜಿಹಾದ್ ನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು.

ಬೇಹುಗಾರಿಕೆ ವಿಭಾಗಕ್ಕೆ ಡ್ರಗ್ ಜಿಹಾದ್ ತಡೆಯಲಿಕ್ಕೆ ಆಗದೇ ಹೋದರೆ ಬೇಹುಗಾರಿಕೆ ವಿಭಾಗವನ್ನು ಮುಚ್ಚಲಿ, ನಾವು ಶ್ರೀ ರಾಮ ಸೇನೆಯವರೇ ಬೀದಿಗಿಳಿದು, ಡ್ರಗ್ ದಂಧೆಯಲ್ಲಿ ಇರುವವರನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದರು.

ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವನ್ನ ಉರುಳಿಸಲು ಡ್ರಗ್ ಹಣವನ್ನು ಬಳಕೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಕುಮಾರಸ್ವಾಮಿ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಬೀಳಿಸಲು ಡ್ರಗ್ ಮಾಫಿಯಾ ಹಣ ಬಳಕೆ ಮಾಡಲಾಗಿದೆ ಎಂದು ಯಾರೋ ನೀಡಿದ ಹೇಳಿಕೆಯಲ್ಲ. ಮಾಜಿ ಮುಖ್ಯಮಂತ್ರಿ ನೀಡಿರುವಂತದ್ದು. ಹಾಗಾಗಿ ಕುಮಾರಸ್ವಾಮಿ ಅವರನ್ನು ಕರೆಸಿ, ಎಲ್ಲಿಂದ ಹಣ ಬಂದಿತು, ಹೇಗೆ ಬಳಕೆ ಮಾಡಲಾಯಿತು ಎಂಬುದನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Advertisement

ಇದನ್ನೂ ಓದಿ: ಮರೆಮಾಚಲು ಏನೂ ಇಲ್ಲ, ಸೋಮವಾರ ವಿಚಾರಣೆಗೆ ಹಾಜರಾಗುತ್ತೇನೆ: ರಾಗಿಣಿ ದ್ವಿವೇದಿ

ಗೌರಿ ಲಂಕೇಶ್ ರವರ ಹತ್ಯೆಯಲ್ಲಿ ಶ್ರೀರಾಮ ಸೇನೆಯ- ಪ್ರಮೋದ್ ಮುತಾಲಿಕ್ ಪಾತ್ರವೇ ಇಲ್ಲ.‌ ಈಗಾಗಲೇ ಆರೋಪಿತರ ಬಂಧಿಸಿ, ಚಾರ್ಜ್ ಶೀಟ್ ಹಾಕಿ ತನಿಖೆ ನಡೆಸಲಾಗುತ್ತಿದೆ. ಎಲ್ಲವೂ ಮುಗಿದು ಹೋಗಿರುವಾಗ ಇಂದ್ರಜಿತ್ ಲಂಕೇಶ್ ತಮ್ಮ ಬಗ್ಗೆ ಆರೋಪ ಮಾಡಿದ್ದಾರೆ. ನಮ್ಮ ಬಗ್ಗೆ ಆರೋಪ ಮಾಡಿರುವ ಇಂದ್ರಜಿತ್ ಲಂಕೇಶ್, ಗೌರಿ ಲಂಕೇಶ್ ಡ್ರಗ್ ಅಡಿಟ್ ಹೌದೋ ಅಲ್ಲವೋ ಎಂಬುದನ್ನು ಸಾಬೀತುಪಡಿಸಲಿ. ನಾನು ಗೌರಿ ಲಂಕೇಶ್ ಎಲ್ಲಿ ಹೋಗುತ್ತಿದ್ದರು, ಏನೇನೂ ಬಳಕೆ ಮಾಡುತ್ತಿದ್ದರು ಎಂಬುದನ್ನು ಸಾಬೀತು ಪಡಿಸುವುದಾಗಿ ಪ್ರಮೋದ್ ಮುತಾಲಿಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next