Advertisement

ತಾಜ್‌ ಮಹಲ್‌ ಅಲ್ಲ, ಈಶ್ವರನ ತೇಜೋ ಮಹಾಲಯ: ಮುತಾಲಿಕ್‌

08:35 PM May 12, 2022 | Team Udayavani |

ಬಾಗಲಕೋಟೆ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್‌ ಮಹಲ್‌ ಅದು ನಿಜವಾಗಿ ಈಶ್ವರನ ತೇಜೋ ಮಹಾಲಯ. ಈ ಕುರಿತು ತನಿಖೆಯಾಗಬೇಕು. ಕಳೆದ 25 ವರ್ಷಗಳ ಹಿಂದೆ ಪಿ.ಎನ್‌. ವೋಕ್‌ ಎಂಬುವವರು ಈ ಎಲ್ಲ ದಾಖಲೆ ಸಮೇತ ಪುರಾವೆ ಒದಗಿಸಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಹೇಳಿದರು.

Advertisement

ಬಾದಾಮಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿ.ಎನ್‌.ವೋಕ್‌ ಅವರು ತಾಜ್‌ ಮಹಲ್‌ ಅಲ್ಲ, ಅದು ತೇಜೋ ಮಹಾಲಯ ಎಂಬುದನ್ನು ಆಗಲೇ ತಿಳಿಸಿದ್ದರು. ತೇಜೋ ಮಹಾಲಯದ ಹೆಸರು ತೆಗೆದು ತಾಜ್‌ ಮಹಲ್‌ ಎಂದು ಬದಲಿಸಲಾಗಿದೆ. ಶಹಜಾನ್‌ ಪತ್ನಿಯ ಸಮಾಧಿ ಬೇರೆ ಕಡೆ ಇದೆ. ಒಂದು ಕಡೆ ಕಟ್ಟು ಕಥೆಗಳನ್ನು ಸೃಷ್ಟಿಸಿ ವಿಷ್ಣು ಸ್ತಂಭವನ್ನು ಕುತುಬ್‌ ಮಿನಾರ್‌ ಎಂದು ಹೇಳುತ್ತಾರೆ. ಸರ್ಕಾರ ತಾಜ್‌ ಮಹಲ್‌ ಅಲ್ಲ, ಅದು ತೇಜೋ ಮಹಾಲಯ ಎಂದು ಜಗತ್ತಿಗೆ ತಿಳಿಸಿಕೊಡಲು ತನಿಖೆ ಮಾಡಬೇಕು ಎಂದರು.

ರಾಜ್ಯದಲ್ಲಿ ಮತಾಂತರ ಕಾಯ್ದೆ ಕಡ್ಡಾಯವಾಗಿ ಜಾರಿಗೆ ಬರಬೇಕು. ಬಿಜೆಪಿ ಸರ್ಕಾರಕ್ಕೆ ಹಿಂದೂ ಪರ ಸಂಘಟನೆಗಳು ಬೇಕಾದರೆ ಅವರ ಬೇಡಿಕೆ ಈಡೇರಿಸಬೇಕು. ರಾಜ್ಯದೆಲ್ಲೆಡೆ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ಚರ್ಚಗಳನ್ನು ಜೆಸಿಬಿ ಮೂಲಕ ತೆಗೆದು ಹಾಕಬೇಕು. ಅದನ್ನು ಸುಗ್ರೀವಾಜ್ಞೆ ಮೂಲಕ ಸರ್ಕಾರ ಮಾಡಬೇಕು. ಅದಕ್ಕೆ ಹಿಂದೂಪರ ಸಂಘಟನೆಗಳು ಸಂಪೂರ್ಣವಾಗಿ ಬೆಂಬಲಿಸುತ್ತವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next