Advertisement

ದತ್ತ ಪೀಠದ ಹೆಸರಲ್ಲಿ ಅಧಿಕಾರಕ್ಕೇರಿದವರು ಏನ್ಮಾಡ್ತಿದ್ದಾರೆ ?: ಮುತಾಲಿಕ್ ಕಿಡಿ

09:41 PM May 25, 2022 | Team Udayavani |

ಕೊಪ್ಪಳ: ದತ್ತಪೀಠದ ಹೆಸರಲ್ಲಿ ಸಂಸದ, ಶಾಸಕರಾಗಿ ಅಧಿಕಾರಕ್ಕೆ ಬಂದವರು ಈಗೇನು ಮಾಡುತ್ತಿದ್ದಾರೆ ? ಅಲ್ಲಿ ಮುಸ್ಮಾನರು ನಮಾಜು ಮಾಡ್ತಾರೆ, ಮಾಂಸದ ಊಟ ಮಾಡ್ತಾರೆಂದರೇ ಏನರ್ಥ ? ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಅವರು ಸಿ.ಟಿ.ರವಿ ವಿರುದ್ದ ಗುಡುಗಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ದತ್ತಪೀಠದಲ್ಲಿ ಮುಸ್ಮಾನರು ನಮಾಜು ಮಾಡ್ತಾರೆ, ಮಾಂಸದ ಊಟ ಮಾಡ್ತಾರೆ ಎಂದರೆ ಏನರ್ಥ ? ಪೀಠದ 200 ಮೀಟರ ವ್ಯಾಪ್ತಿಯಲ್ಲಿ ನಮಾಜು ಮಾಡಬಾರದು, ಮಾಂಸದ ಊಟ ಮಾಡಬಾರದು ಎನ್ನುವ ನಿಯಮ ಇದ್ದರೂ ಪೊಲೀಸ್ ಇಲಾಖೆ ಏನು ಮಾಡುತ್ತಿದೆ. ದತ್ತ ಪೀಠದಿಂದಲೇ ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಗೆದ್ದಿದ್ದಾರೆ. ಈಗ ಅವರೇನು ಮಾಡ್ತಿದ್ದಾರೆ ಎಂದು ಮುತಾಲಿಕ್ ಪ್ರಶ್ನೆ ಮಾಡಿದರು.

ಅಲ್ಲಿ ಧಾರ್ಮಿಕ ದತ್ತಿ ಇಲಾಖೆಯು ಪೀಠದ ಅಧಿಕಾರಿಯನ್ನು ಕಿತ್ತೊಗೆಯಬೇಕು. ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ನಮ್ಮಂತ ಹೋರಾಟಗಾರರಿಗೆ, ಹಿಂದುತ್ವವಾದಿಗಳಿಗೆ ರಾಜಕೀಯ ಬಾಗಿಲು ಮುಚ್ಚಿದೆ. ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ. ಬಿಜೆಪಿಗೆ ಯಾವುದೇ ಹಿಂದೂತ್ವ ಇಲ್ಲ. ಯೋಗಿ ಆದಿತ್ಯನಾಥ ತರ ರಾಜ್ಯದಲ್ಲಿ ಯಾವುದೇ ಕ್ರಮಗಳಾಗುತ್ತಿಲ್ಲ. ಅಲ್ಲೂ ಒಂದೇ ಕಾನೂನು, ಇಲ್ಲಿಯೂ ಒಂದೇ ಕಾನೂನು. ಆದರೂ ಯಾವುದೇ ಕ್ರಮಗಳು ಇಲ್ಲಿ ಜರುಗಿಸುತ್ತಿಲ್ಲ.

ಇದನ್ನೂ ಓದಿ : ಬಿಎಸ್ ವೈ ಪಕ್ಷದ ದೊಡ್ಡ ಶಕ್ತಿ, ಸೈಡ್ ಲೈನ್ ಮಾಡುವ ಪ್ರಶ್ನೆಯೇ ಇಲ್ಲ; ಸಚಿವ ರಾಮುಲು

ಇಂದು ರಾಜಕೀಯ ವ್ಯವಸ್ಥೆ ಲೂಟಿಕೋರರ ವ್ಯವಸ್ಥೆಯಾಗಿದೆ. ಹಿಂದೂ ಧರ್ಮದಲ್ಲಿ ಒಂದು ಸಂಪ್ರದಾಯ, ಸಂಸ್ಕೃತಯಿದೆ. ಇದು ಕಾಂಗ್ರೆಸ್‌ನವರಿಗೆ ಅರ್ಥವಾಗುತ್ತಿಲ್ಲ. ಅವರು ಮುಸ್ಲಿಂರ ಓಟ್ ಬ್ಯಾಂಕಿಗಾಗಿ ಜೊಲ್ಲು ಸುರಿಸುತ್ತಿದ್ದಾರೆ. ವೋಟ್‌ಗಿಗಾಗಿ ನೀವು ಈ ರೀತಿಯ ಸ್ಟಂಟ್ ಮಾಡಿರುವುದು ಕಾಂಗ್ರೆಸ್‌ನ ಮನಸ್ಥಿತಿಯನ್ನ ತೋರಿಸುತ್ತದೆ. ನಮ್ಮ ಸಂಸ್ಕೃತಿಗೆ, ಶಾಸ್ತ್ರಕ್ಕೆ ಅಪಮಾನ ಮಾಡಿದರೆ ಹುಷಾರ್ ಎಂದರಲ್ಲದೇ, ಕಾಂಗ್ರೆಸ್‌ಗೆ ಧರ್ಮಶಾಸ್ತ್ರ, ವಿಜ್ಞಾನದ ಸಂಪ್ರದಾಯ ಕಾಣಲ್ಲ. ಅವರಿಗೆ ಬರಿ ಮಸೀದಿ, ಗೋರಿಗಳು ಕಾಣುತ್ತಿವೆ. ವಾಸ್ತವಿಕ ಬಿಟ್ಟು ಓಲೈಸುವ ತಂತ್ರವನ್ನು ಡಿಕೆಶಿ ಬಿಡಬೇಕು. ಇದು ಕಾಂಗ್ರೆಸ್‌ನ ಮೂರ್ಖತನವಾಗಿದೆ. ಅವರ ಮೂರ್ಖತನದಿಂದಲೇ ಕಾಂಗ್ರೆಸ್ ನಿರ್ಮೂಲನೆಯಾಗುತ್ತಿದೆ ಎಂದರು.

Advertisement

ಕಾಂಗ್ರೆಸ್ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರು ಮುಸ್ಲಿಂರ ಓಟುಗಳನ್ನು ಯಾರು ಹೆಚ್ಚು ಪಡೆಯಬೇಕು ಎನ್ನವು ಕಾಂಪಿಟೇಷನ್ ನಡೆದಿದೆ. ಕೋಟ್ಯಾಂತರ ರೂ. ಖರ್ಚು ಮಾಡಿ ದೇವೇಗೌಡರು ಚಂಡಿಕಾ ಹೋಮ ಯಾಕೆ ಮಾಡ್ತಾರೆ ಎನ್ನುವುದನ್ನು ಕುಮಾರಸ್ವಾಮಿ ಅವರು ದೇವೇಗೌಡರನ್ನೇ ಕೇಳಲಿ. ಜ್ಞಾನವ್ಯಾಪಿ ಅದು ದೇವಸ್ಥಾನ. ಸಾಮರಸ್ಯ ಚೆನ್ನಾಗಿ ಇರಬೇಕೆಂದರೆ ದೇವಸ್ಥಾನ ಒಡೆದು ಏಲ್ಲೆಲ್ಲಿ ಮಸೀದಿ ಕಟ್ಟಲಾಗಿದೆಯೋ ಅವೆಲ್ಲವನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂದು ಒತ್ತಾಯ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next