Advertisement

ಕೋಲಾರ ಬಂದ್‌ನಲ್ಲಿ ಪಾಲ್ಗೊಳ್ಳದಂತೆ ನೋಟಿಸ್ : ಮುತಾಲಿಕ್ ಕಿಡಿ

09:25 PM Nov 17, 2021 | Team Udayavani |

ಗದಗ: ಕೋಲಾರದಲ್ಲಿ ದತ್ತ ಮಲಾಧಾರಿಗಳ ಕೊಲೆಗೆ ಯತ್ನಿಸಿರುವುದನ್ನು ಖಂಡಿಸಿ ನ.18 ರಂದು ಕೆರೆದಿರುವ ಕೋಲಾರ್ ಬಂದ್‌ನಲ್ಲಿ ಪಾಲ್ಗೊಳ್ಳದಂತೆ ನನಗೆ ಎಂಟ್ರಿ ಬ್ಯಾನ್ ನೋಟಿಸ್ ನೀಡಲಾಗಿದೆ. ಈ ಮೂಲಕ ರಾಜ್ಯ ಬಿಜೆಪಿ ಸರಕಾರ ಕಾಂಗ್ರೆಸ್, ಜೆಡಿಎಸ್ ಧೋರಣೆಯನ್ನು ಪ್ರದರ್ಶಿಸುತ್ತಿದೆ. ಹಿಂದೂ ನಾಯಕರನ್ನು ತಡೆದರೆ, ಹಿಂದುತ್ವವನ್ನು ತಡೆದಂತೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹರಿಹಾಯ್ದರು.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಘಟನೆ ಖಂಡಿಸಿ ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗಹರಣ ಸಮಿತಿ ಸೇರಿದಂತೆ ಅನೇಕ ಹಿಂದೂಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಶಾಂತಿಯುತ ಬಂದ್‌ನಲ್ಲಿ ಪಾಲ್ಗೊಳ್ಳಬೇಕೆಂದಿರುವ ನನಗೆ ಅನಾವಶ್ಯಕವಾಗಿ ಇಂದು ಸಂಜೆ 6 ಗಂಟೆಗೆ ಕೋಲಾರ್ ಎಂಟ್ರಿ ಬ್ಯಾನ್ ನೋಟಿಸ್ ಜಾರಿಗೊಳಿಸಿದ್ದಾರೆ. ಈ ಮೂಲಕ ದತ್ತ ಮಾಲಾಧಾರಿಗಳ ಹಲ್ಲೆಕೋರರಿಗೆ ಸರಕಾರವೇ ಬೆಂಬಲವಾಗಿ ನಿಲ್ಲುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ : ಪಟಾಕಿ ಸಿಡಿಸಿ ಗಾಯಗೊಳಿಸಿದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್

ದಶಕಗಳ ಹಿಂದೆ ನನ್ನ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅದರಲ್ಲಿನ ಯಾವುದೇ ಪ್ರಕರಣ ಈಗ ಚಾಲ್ತಿಯಲ್ಲಿಲ್ಲ. ಆ ಎಲ್ಲ ಪ್ರಕರಣಗಳಲ್ಲಿ ನಾನು ನಿರ್ದೋಷಿಯಾಗಿದ್ದೇನೆ. ಹೀಗಾಗಿ ತಕ್ಷಣವೇ ಕೋಲಾರ ಜಿಲ್ಲಾಧಿಕಾರಿಗಳು ಈ ಆದೇಶವನ್ನು ಹಿಂಪಡೆಯಬೇಕು. ಈ ಬಗ್ಗೆ ನಮ್ಮ ವಕೀಲರೊಂದಿಗೆ ಚರ್ಚಿಸಿದ್ದು, ತುರ್ತು ತಡೆಯಾಜ್ಞೆ ಪಡೆದುಕೊಂಡು, ಕೋಲಾರ್ ಬಂದ್‌ನಲ್ಲಿ ಪಾಲ್ಗೊಳ್ಳುವುದಾಗಿ ಪ್ರಮೋದ್ ಮುತಾಲಿಕ್ ತಿಳಿಸಿದ ಅವರು, ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಈ ಸರಕಾರ, ಹಿಂದೂಗಳ ಮೇಲಿನ ಹಲ್ಲೆ, ತಲಿಬಾನ್ ಕೃತ್ಯವನ್ನು ಪರೋಕ್ಷವಾಗಿ ಸಮರ್ಥಿಸಿಕೊಳ್ಳುತ್ತಿದೆ. ಇದೊಂದು ನಿರ್ಲಜ್ಜ ಸರಕಾರವೆಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next