Advertisement

ನೀವು ಯಾವ ಆಧಾರದಲ್ಲಿ ಮತ ಯಾಚಿಸುತ್ತೀರಿ?

08:37 AM Mar 27, 2019 | Vishnu Das |

ರಾಜ್ಯದ ಜಿದ್ದಾಜಿದ್ದಿ ಕ್ಷೇತ್ರಗಳ ಪೈಕಿ ಒಂದು ಎನ್ನಲಾದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್‌-ಜೆಡಿಎಸ್‌ನಿಂದ ಪ್ರಮೋದ್‌ ಮಧ್ವರಾಜ್‌ ಕಣಕ್ಕಿಳಿದಿದ್ದಾರೆ. “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಇಬ್ಬರೂ ಮನ ಬಿಚ್ಚಿ ಮಾತನಾಡಿದ್ದಾರೆ.

Advertisement

ಜೆಡಿಎಸ್‌-ಕಾಂಗ್ರೆಸ್‌ ಕಚ್ಚಾಟ ಬಿಜೆಪಿಗೆ ಲಾಭ

ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದೀರಿ. ಅಂದಿಗೂ-ಇಂದಿಗೂ ಏನು ವ್ಯತ್ಯಾಸ?
ಅಂದು ನಾನು ಉಡುಪಿ-ಚಿಕ್ಕಮಗಳೂರಿಗೆ ಹೊಸಬಳಾಗಿದ್ದೆ. ಸಂಸದೆಯಾದ ಬಳಿಕ ಕೇಂದ್ರ ಸರಕಾರದ ಅನೇಕ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಮತ್ತು ಕ್ಷೇತ್ರದಲ್ಲಿನ ನನ್ನ ಸಾಧನೆ ಗೆಲುವಿಗೆ ಪೂರಕವಾಗಲಿದೆ.

 ನಿಮಗೆ ಟಿಕೆಟ್‌ ನೀಡುವ ಕುರಿತು ಅತೃಪ್ತಿ ಇತ್ತಲ್ಲವೆ?
ಎಲ್ಲಿ ಗೆಲ್ಲುವ ಸಾಧ್ಯತೆ ಇರುತ್ತದೋ ಅಲ್ಲಿ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚು ಇರುವುದು ಸಾಮಾನ್ಯ. ಈಗ ಟಿಕೆಟ್‌ ಹಂಚಿಕೆಯಾದ ಬಳಿಕ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಅತೃಪ್ತಿ ಇಲ್ಲ.

ಮೈತ್ರಿ ಅಭ್ಯರ್ಥಿ ಪರಿಣಾಮ ಬೀರಲಿದೆಯೆ?
ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರಕಾರ ರಾಜ್ಯದಲ್ಲಿರುವುದರಿಂದ ರಾಜ್ಯಕ್ಕೆ ಲಾಭ ಏನಾಗಿದೆ?ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಏನಾದರೂ ಅಭಿವೃದಿಟಛಿ ಕೆಲಸ ಮಾಡಿದ್ದಾರಾ? ರಾಜ್ಯದಲ್ಲಿ ಮೈತ್ರಿ ವಿಫ‌ಲವಾಗಿರುವುದು ಸಾಬೀತಾಗಿದೆ. ಎಲ್ಲ ಸಂದರ್ಭಗಳಲ್ಲೂ ಗೊಂದಲ, ಕಚ್ಚಾಟವೇ ಕಂಡು ಬಂದಿದೆ. ಲೋಕಸಭಾ ಕ್ಷೇತ್ರದ ಟಿಕೆಟ್‌ ಹಂಚಿಕೆಯಲ್ಲಿಯೂ ಕಚ್ಚಾಟ ಮುಂದುವರಿಯುತ್ತಿದೆ. ಇದು ಬಿಜೆಪಿಗೆ ಲಾಭ ತರಲಿದೆ.

Advertisement

 ಯಾವ ಆಧಾರದಲ್ಲಿ ಮತ ಯಾಚಿಸುತ್ತೀರಿ?
ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಜಾರಿಗೊಂಡ ಯೋಜನೆಗಳು, ಬೇಡಿಕೆಗಳನ್ನು ಪೂರ್ಣಗೊಳಿಸಬೇಕಾಗಿದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವ ಮೂಲಕ ದೇಶದ ರಕ್ಷಣೆ ಮತ್ತು ಅಭಿವೃದಿಟಛಿಗೆ ಪೂರಕ ವಾತಾವರಣ ಸೃಷ್ಟಿಸಬೇಕಾಗಿದ್ದು, ಆ ಬಗ್ಗೆ ಜನರಲ್ಲಿ ಮನವರಿಕೆ ಮಾಡುತ್ತೇವೆ.

ಹೊರಗಿನವರಿಗೆ ಕ್ಷೇತ್ರದ ಬಗ್ಗೆ ಮಮಕಾರ ಇರಲ್ಲ

ಲೋಕಸಭೆಗೆ ಮೊದಲ ಬಾರಿ ಸ್ಪರ್ಧಿಸುತ್ತಿದ್ದೀರಿ. ಏನನಿಸುತ್ತಿದೆ? ಚುನಾವಣೆಯಲ್ಲಿ ಸ್ಪರ್ಧಿಸಲು ದೇವರ, ಪಕ್ಷದ,ಪಕ್ಷಗಳ ನಾಯಕರ, ಜನರ ಪ್ರೇರಣೆ ಬೇಕು. ಹಾಗಿದ್ದಾಗ ಮಾತ್ರ ಸ್ಪರ್ಧಿಸಲು ಸಾಧ್ಯ. ದೇವರ ಮೇಲೆ ಮತ್ತು ಜನರ ಮೇಲೆ ಭಾರ ಹಾಕಿ ಸ್ಪರ್ಧಿಸುತ್ತಿದ್ದೇನೆ.

ಸ್ಥಳೀಯವಾಗಿ ಕಾಂಗ್ರೆಸ್‌ನಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಎರಡೂ ಪಕ್ಷಗಳಲ್ಲಿ ಅತೃಪ್ತಿ ಇದೆಯಲ್ಲವೆ?
ಪ್ರತಿ ಚುನಾವಣೆಯಲ್ಲಿಯೂ ಸ್ವಲ್ಪ ಮಟ್ಟಿನ ಅತೃಪ್ತಿ ಸಹಜ. ಕಳೆದ 10-15 ದಿನಗಳ ಹಿಂದೆ ಇದ್ದ ಅತೃಪ್ತಿ ಈಗ ಸಾಕಷ್ಟು ಶಮನವಾಗಿದೆ. ಇನ್ನೇನಾದರೂ ಅತೃಪ್ತಿ ಉಳಿದಿದ್ದರೆ ಮಾತುಕತೆ ಮೂಲಕ ನಿವಾರಿಸಲಾಗುತ್ತದೆ. ಎಲ್ಲರೂ ಒಂದಾಗಿ ಚುನಾವಣೆ ಎದುರಿಸುತ್ತೇವೆ ಎಂಬ ವಿಶ್ವಾಸವಿದೆ

ನೀವು ಗೆದ್ದರೆ ಯಾವ ಪಕ್ಷದ ಕಡೆ ಇರುತ್ತೀರಿ?
ಐದು ವರ್ಷ ಎರಡೂ ಪಕ್ಷಗಳ ಜತೆ, ಜತೆಯಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ನನ್ನ ಪರವಾಗಿ ಕೆಲಸ ಮಾಡಿದ ಕಾರ್ಯಕರ್ತರು, ಮತ ಹಾಕಿದ ಮತದಾರರನ್ನು ಮರೆಯಲು ಸಾಧ್ಯವೆ?

ಯಾವ ಆಧಾರದಲ್ಲಿ ಮತ ಯಾಚಿಸುವಿರಿ?
ದೇವರ ದಯೆಯಿಂದ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿದಾಗ ಜನರ ಮತ್ತು ಕ್ಷೇತ್ರದ ಅಭಿವೃದ್ಧಿ ಯನ್ನು ಶಕ್ತಿ ಮೀರಿ ಮಾಡಿದ್ದೇನೆ. ಕ್ಷೇತ್ರದ ಹೊರಗಿ ನವರಿಗೂ ನಾನು ನನ್ನ ಕ್ಷೇತ್ರದಲ್ಲಿ ಮಾಡಿದ ಕೆಲಸಗಳ ಮಾಹಿತಿ ತಿಳಿದಿರುತ್ತದೆ. ಕೆಲಸ ಮಾಡದವರು ಮತ್ತು ಮಾಡಿದವರ ನಡುವಿನ ಹೋರಾಟ ಇದು. ಹೊರಗಿನವರಿಗೆ ಅವಕಾಶ ಕೊಟ್ಟರೆ ಅವರಿಗೆ ಕ್ಷೇತ್ರದ ಮೇಲೆ ಮಮಕಾರ ಇರುವುದಿಲ್ಲ ಎಂಬುದಕ್ಕೆ ಶೋಭಾ ಕರಂದ್ಲಾಜೆ ಉದಾಹರಣೆ. ನಮಗೆ ರಾಷ್ಟ್ರ ಮುಖ್ಯ. ಅದರ ಜತೆಗೆ, ಕ್ಷೇತ್ರವೂ ಮುಖ್ಯ. ಕ್ಷೇತ್ರದ ಅಭಿವೃದ್ಧಿ ಯಾದರೆ ಮಾತ್ರ ರಾಷ್ಟ್ರದ ಅಭಿವೃದ್ಧಿಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next