Advertisement

ಸದನ ಬಿಕ್ಕಟ್ಟು ಪರಿಹಾರಕ್ಕೆ ಸಭೆ ಸೂತ್ರ? 18 ತಿಂಗಳ ಅನಂತರ ನಡೆಯುತ್ತಿರುವ ಅಧಿವೇಶನ

11:30 PM Jul 30, 2021 | Team Udayavani |

ಹೊಸದಿಲ್ಲಿ: ಮುಂಗಾರು ಅಧಿವೇಶನ ಶುರುವಾಗಿ ಶುಕ್ರವಾರಕ್ಕೆ 2 ವಾರಗಳು ಪೂರ್ತಿಯಾಗಿವೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುಗಮವಾಗಿ ಕಲಾಪಗಳು ನಡೆದಿಲ್ಲ. ಸರಿ ಸುಮಾರು 43 ಮಸೂದೆಗಳ ಪೈಕಿ ಅನುಮೋದನೆ ಪಡೆದದ್ದು ಕೇವಲ ಎಂಟು. ಆ.13ರಂದು ಅಧಿವೇಶನದ ಕೊನೆಯ ದಿನ. ಹೀಗಾಗಿ, ಒಟ್ಟು ಹತ್ತು ದಿನಗಳು ಮಾತ್ರ ಕಲಾಪ ನಡೆಸಲು ಸಿಗಲಿದೆ.

Advertisement

ಉಳಿದ ಅವಧಿಯಲ್ಲಾದರೂ ಸುಗಮ ಕಲಾಪ ನಡೆಸಿ, ಪ್ರಮುಖ ಮಸೂದೆಗಳನ್ನು ಅಂಗೀಕರಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಎರಡೂ ಸದನಗಳ ವಿಪಕ್ಷಗಳ ನಾಯಕರ ಜತೆಗೆ ಸಭೆ ನಡೆಸಲು ಸರಕಾರ‌ ನಿರ್ಧರಿಸಿದೆ. ಹೆಸರು ಬಹಿರಂಗಪಡಿಸ ಲಿಚ್ಛಿಸದ ವಿಪಕ್ಷ ನಾಯಕರ ಪ್ರಕಾರ ಸರಕಾರ‌ದ ಸಭೆಯಲ್ಲಿ ಭಾಗವಹಿಸಲಾಗುತ್ತದೆ. ಆದರೆ ಪೆಗಾಸಸ್‌ ಮತ್ತು ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆಯಾಗಬೇಕು ಎಂಬ ಅಂಶವನ್ನು ಪ್ರಸ್ತಾವಿಸುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿನ ವಿಪಕ್ಷ ನಾಯಕ ಮಲ್ಲಿ ಕಾರ್ಜುನ ಖರ್ಗೆ ಜತೆಗೆ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಮತ್ತು ಪಿಯೂಷ್‌ ಗೋಯಲ್‌ ಗುರುವಾರ ಮಾತುಕತೆ ನಡೆಸಿ ಸಭೆ ನಡೆಸುವ ಬಗ್ಗೆ ಚರ್ಚೆ ನಡೆಸಿ ದ್ದಾರೆ. ಸೋಂಕು ದೇಶಕ್ಕೆ ಧಾಂಗುಡಿ ಇರಿಸಿದ ಬಳಿಕ ಬರೋಬ್ಬರಿ 18 ತಿಂಗಳ ಅನಂತರ ನಡೆಯುತ್ತಿರುವ ಮೊದಲ ಸಂಸತ್‌ ಅಧಿವೇಶನ ಇದಾಗಿದೆ.

ಸೋಮವಾರಕ್ಕೆ ಕಲಾಪ: ಲೋಕಸಭೆಯಲ್ಲಿ ಶುಕ್ರವಾರವೂ ಪೆಗಾಸಸ್‌, ಕೃಷಿ ಕಾಯ್ದೆ ವಿರುದ್ಧದ ಗಲಾಟೆಯಿಂದಾಗಿ ಕಲಾಪ ನಡೆಸಲು ಸಾಧ್ಯವಾಗಿಲ್ಲ. ಮಧ್ಯಾಹ್ನದ ಬಳಿಕ ಎರಡು ಮಸೂದೆಗಳನ್ನು ಕೋಲಾಹಲದ ನಡುವೆಯೇ ಮಂಡಿಸಲಾಯಿತು. ರಾಜ್ಯಸಭೆಯಲ್ಲಿ ಕೂಡ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್‌ ಮಧ್ಯಾಹ್ನ 2.30ಕ್ಕೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಬೇಕಾಯಿತು. ಮೇಲ್ಮನೆ ಯಲ್ಲಿ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ ಸೇರಿದಂತೆ 2 ಮಸೂದೆಗಳನ್ನು ಮಂಡಿಸಲಾಗಿದೆ.

ದಾಖಲೆ ಇಲ್ಲದವರಿಗೆ ಲಸಿಕೆ: ಜು.26ರ ವರೆಗೆ ಕೋವಿನ್‌ ವೆಬ್‌ಸೈಟ್‌ ಮೂಲಕ ಯಾವುದೇ ದಾಖಲೆಗಳನ್ನು ಹೊಂದಿಲ್ಲದೇ ಇರುವ 3.8 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಈ ಬಗ್ಗೆ ರಾಜ್ಯಸಭೆಗೆ ಆರೋಗ್ಯ ಖಾತೆ ಸಹಾಯಕ ಸಚಿವೆ ಭಾರತೀ ಪ್ರವೀಣ್‌ ಪವಾರ್‌ ಮಾಹಿತಿ ನೀಡಿದ್ದಾರೆ. ಯಾವುದೇ ಫೋಟೋ ಸಹಿತ ಗುರುತಿನ ಚೀಟಿ ಇಲ್ಲದವರಿಗೆ ಕೂಡ ಲಸಿಕೆ ನೀಡಲು ಕೇಂದ್ರ ಆದೇಶ ನೀಡಿತ್ತು.

Advertisement

ಸದನ ಸಾಧನೆ
ಶೇ.23 ಲೋಕಸಭೆ ಕಲಾಪ
ಶೇ.13 ರಾಜ್ಯಸಭೆ ಕಲಾಪ
08 ಅಂಗಿಕಾರಗೊಂಡ ಮಸೂದೆಗಳು
10 ಬಾಕಿ ಉಳಿದಿರುವ ಕಲಾಪದ ದಿನಗಳು
ಆ.13 ಕೊನೇಯ ದಿನ

ಜನಪರ ಚರ್ಚೆಗೆ ಸಿದ್ಧ
ಕೇಂದ್ರ ಸರಕಾರ‌ ಸಂಸತ್‌ನಲ್ಲಿ ಜನ ಪರ-ಹಿತ ವಿಚಾರಗಳ ಬಗ್ಗೆ ಚರ್ಚೆಗೆ ಸಿದ್ಧವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. ಪೆಗಾಸಸ್‌ ಚರ್ಚೆಯ ವಿಷಯವೇ ಅಲ್ಲ. ಈ ನಿಟ್ಟಿನಲ್ಲಿ ವಿಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿವೆ ಎಂದು ದೂರಿದ್ದಾರೆ. ಜನರಿಗೆ ಅನುಕೂಲ ವಾಗುವ ಕೆಲವು ಮಸೂದೆಗಳನ್ನು ಚರ್ಚೆ ನಡೆಸಿಯೇ ಅಂಗೀಕಾರ ಮಾಡುವುದು ಸರಕಾರ‌ ಇರಾದೆ ಎಂದರು ಸಚಿವ ಜೋಶಿ.

Advertisement

Udayavani is now on Telegram. Click here to join our channel and stay updated with the latest news.

Next