Advertisement

ಪ್ರಕಾಶ್‌ ಅವರದ್ದು ಮಾದರಿ ವ್ಯಕ್ತಿತ್ವ: ಸಿಎಂ

10:08 AM Dec 27, 2019 | Team Udayavani |

ಮಂಗಳೂರು: ನಿರಂತರ ಪರಿಶ್ರಮ ಮತ್ತು ದೂರದೃಷ್ಟಿಯಿಂದ ಉದ್ಯಮ ಕ್ಷೇತ್ರದಲ್ಲಿ ಯಶಸ್ವೀ ನಾಯಕನಾಗಿ ಬೆಳೆದ ಕೆ. ಪ್ರಕಾಶ್‌ ಶೆಟ್ಟಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಅವರ ಸಾಧನೆ ಮತ್ತು
ವ್ಯಕ್ತಿತ್ವ ಮಾದರಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

Advertisement

ಎಂಆರ್‌ಜಿ ಗ್ರೂಪ್‌ ಅಧ್ಯಕ್ಷ ಕೊರಂಗ್ರಪಾಡಿ ಪ್ರಕಾಶ್‌ ಶೆಟ್ಟಿ ಅವರಿಗೆ 60ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಂಗ್ರ ಕೂಳೂರಿನ ಗೋಲ್ಡ್‌ ಫಿಂಚ್‌ ಮೈದಾನದಲ್ಲಿ ಬುಧವಾರ ಆಯೋಜಿಸಲಾದ “ಪ್ರಕಾಶಾಭಿನಂದನ-60ರ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕಾಶ್‌ ಶೆಟ್ಟಿ ಪರಿಶ್ರಮದ ಮೂಲಕವೇ ಹೊಟೇಲ್‌ ಉದ್ಯಮದಲ್ಲಿ ಅದ್ವಿತೀಯ ಸಾಧಕನಾಗಿ ಕಂಗೊಳಿಸಿದ್ದಾರೆ. ಸಮಾಜಕ್ಕಾಗಿ ಅವರ ಸ್ಪಂದನೆ ಮಾದರಿ ಎಂದರು.

ಗೃಹಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿದರು. ನಿಟ್ಟೆ ವಿ.ವಿ. ಕುಲಾಧಿಪತಿ ಎನ್‌. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉಪಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥ ನಾರಾಯಣ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌, ಸಚಿವರಾದ ಸಿ.ಟಿ. ರವಿ, ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ನಟರಾದ ವಿ. ರವಿಚಂದ್ರನ್‌, ಯಶ್‌, ನಟಿಯರಾದ ಹರಿಪ್ರಿಯಾ, ಕಾವ್ಯಾ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಪ್ರಕಾಶ್‌ ಶೆಟ್ಟಿ ಅವರ ಬಗ್ಗೆ ಪ್ರತಾಪ್‌ ಶೆಟ್ಟಿ ಅವರು ಬರೆದ ಅಭಿನಂದನ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.
ಶಾಸಕರಾದ ಸುನಿಲ್‌ ಕುಮಾರ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಡಾ| ವೈ. ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್‌, ಸಂಜೀವ ಮಠಂದೂರು, ರಾಜೇಶ್‌ ನಾೖಕ್‌, ಹರೀಶ್‌ ಪೂಂಜ, ಸುಕುಮಾರ ಶೆಟ್ಟಿ, ಐವನ್‌ ಡಿ’ಸೋಜಾ, ಗಣ್ಯರಾದ ಅಮರನಾಥ ಶೆಟ್ಟಿ, ಪ್ರಮೋದ್‌ ಮಧ್ವರಾಜ್‌, ಅಭಯಚಂದ್ರ, ಅಜಿತ್‌ ಕುಮಾರ್‌ ರೈ ಮಾಲಾಡಿ, ಐಕಳ ಹರೀಶ್‌ ಶೆಟ್ಟಿ, ಎ. ಸದಾನಂದ ಶೆಟ್ಟಿ, ಎ.ಜೆ. ಶೆಟ್ಟಿ, ಡಾ| ಮೋಹನ ಆಳ್ವ, ಸದಾಶಿವ ಭಂಡಾರಿ ಸಕಲೇಶಪುರ, ಧರ್ಮಪಾಲ ದೇವಾಡಿಗ, ಸುರೇಶ್‌ ಭಂಡಾರಿ ಕಡಂದಲೆ ಉಪಸ್ಥಿತರಿದ್ದರು.

ಪ್ರಕಾಶಾಭಿನಂದನ ಸಮಿತಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಗುರ್ಮೆ ಸ್ವಾಗತಿಸಿದರು. ಪ್ರಧಾನ ಸಂಚಾಲಕ ಸಂತೋಷ್‌ ವಿ. ಶೆಟ್ಟಿ ಸಮ್ಮಾನಪತ್ರ ವಾಚಿಸಿದರು. ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು. ಅನುಶ್ರೀ, ರೂಪೇಶ್‌ ಶೆಟ್ಟಿ, ನಿತೇಶ್‌ ಶೆಟ್ಟಿ ಎಕ್ಕಾರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

ಪ್ರಕಾಶಾಭಿನಂದನ ಸಮಿತಿಯ ಪ್ರಮುಖರಾದ ಸುರೇಶ್‌ ಶೆಟ್ಟಿ ಪಡುಬಿದ್ರಿ, ಎಂ. ಸುರೇಶ್‌ಚಂದ್ರ ಶೆಟ್ಟಿ, ಮನೋಹರ್‌ ಎಸ್‌. ಶೆಟ್ಟಿ, ಪುರುಷೋತ್ತಮ ಪಿ. ಶೆಟ್ಟಿ, ಜಿ. ಸುಧೀರ್‌ ಹೆಗ್ಡೆ ಬೈಲೂರು, ದೇವಾನಂದ ಎಂ. ಶೆಟ್ಟಿ, ದೇವಿಪ್ರಸಾದ್‌ ಶೆಟ್ಟಿ ಬೆಳಪು, ಅರವಿಂದ ಪೂಂಜಾ ಮೂಲ್ಕಿ, ನಿಟ್ಟೆ ರವಿರಾಜ್‌ ಶೆಟ್ಟಿ ಉಪಸ್ಥಿತರಿದ್ದರು.

ದೇಶ-ವಿದೇಶಗಳ ವಿವಿಧ ಸಮುದಾಯಗಳ ಸಾವಿರಾರು ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಆಕರ್ಷಕ ವೇದಿಕೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು ಗಮನಸೆಳೆದವು.

ಸಾಧಕ ಶ್ರೇಷ್ಠರಿಗೆ ಸಮ್ಮಾನ
ವಿವಿಧ ಕ್ಷೇತ್ರಗಳ ಸಾಧಕರಾದ ಡಾ| ಬಿ.ಎಂ. ಹೆಗ್ಡೆ, ಡಾ| ಚಂದ್ರಶೇಖರ ಶೆಟ್ಟಿ ಬೆಂಗಳೂರು, ಡಾ| ಸುನೀತಾ ಶೆಟ್ಟಿ ಮುಂಬಯಿ, ಅಪ್ಪಣ್ಣ ಹೆಗ್ಡೆ ಬಸೂÅರು, ಜಯ ಸುವರ್ಣ, ಎಲ್‌.ಜಿ. ಸೋನ್ಸ್‌, ಶಿಮಂತೂರು ನಾರಾಯಣ ಶೆಟ್ಟಿ, ಕೆ. ಗೋವಿಂದ ಭಟ್‌ ಸೂರಿಕುಮೇರು, ಬನ್ನಂಜೆ ಸಂಜೀವ ಸುವರ್ಣ, ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ, ಬೋಳ ಸುಬ್ಬಯ್ಯ ಶೆಟ್ಟಿ, ಸಾರಾ ಅಬೂಬಕರ್‌, ನಾರಾಯಣ ರಾವ್‌ ಪಡುಬಿದ್ರಿ, ನಗರ ನಾರಾಯಣ ಶೆಣೈ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಿತರಿಗೆ ತಲಾ 1 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯದ ಹಾರ ಸಮರ್ಪಿಸಲಾಯಿತು.

ಬೆಳ್ತಂಗಡಿ ನೆರೆ ಪರಿಹಾರಕ್ಕಾಗಿ 26 ಲಕ್ಷ ರೂ.
ಪ್ರಕಾಶ್‌ ಶೆಟ್ಟಿಯವರಿಗೆ ಇತ್ತೀಚೆಗೆ ಪ್ರದಾನ ಮಾಡಿದ್ದ ರಾಜ್ಯೋತ್ಸವ ಪ್ರಶಸ್ತಿಯ 1 ಲಕ್ಷ ರೂ. ನಿಧಿ ಸೇರಿಸಿ ಒಟ್ಟು 26 ಲಕ್ಷ ರೂ.ಗಳನ್ನು ಬೆಳ್ತಂಗಡಿ ನೆರೆ ಪರಿಹಾರ ಕಾರ್ಯಗಳಿಗೆ ವಿನಿಯೋಗಿಸುವುದಕ್ಕಾಗಿ ಶಾಸಕ ಹರೀಶ್‌ ಪೂಂಜ ಅವರಿಗೆ ಚೆಕ್‌ ರೂಪದಲ್ಲಿ ಹಸ್ತಾಂತರಿಸಲಾಯಿತು.

ಅಶಕ್ತರು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರಕಾಶಾಭಿ ನಂದನೆಯ ಹಿನ್ನೆಲೆಯಲ್ಲಿ ನೆರವು ನೀಡುವ ಕಾರ್ಯಕ್ರಮ ಡಿ. 19ರಂದು ಮಂಗಳೂರಿನಲ್ಲಿ ನಡೆದಿತ್ತು. 100ಕ್ಕೂ ಮಿಕ್ಕಿ ಅಶಕ್ತರಿಗೆ ಮತ್ತು 66 ವಿದ್ಯಾರ್ಥಿಗಳಿಗೆ ಒಂದು ಕೋಟಿ ರೂ.ಗೂ ಅಧಿಕ ಮೌಲ್ಯದ ನೆರವು ವಿತರಿಸಲಾಗಿತ್ತು.

ಪಕ್ಷಾತೀತ-ಜಾತ್ಯತೀತ
ಪ್ರಕಾಶ್‌ ಶೆಟ್ಟಿ, ಪತ್ನಿ ಆಶಾ ಶೆಟ್ಟಿ ಅವರನ್ನು ಯಡಿಯೂರಪ್ಪ ಪ್ರಕಾಶಾಭಿನಂದನ ಸಮಿತಿ ಪರವಾಗಿ ಸಮ್ಮಾನಿಸಿದರು.
ಪ್ರಕಾಶ್‌ ಶೆಟ್ಟಿ ಅವರ ಪುತ್ರ ಗೌರವ್‌ ಶೆಟ್ಟಿ ಮತ್ತು ಸೊಸೆ ಅನುಷ್ಕಾ ಶೆಟ್ಟಿ ಉಪಸ್ಥಿತರಿದ್ದರು. ಸಮ್ಮಾನಕ್ಕೆ ಉತ್ತರಿಸಿ ಮಾತನಾಡಿದ ಪ್ರಕಾಶ್‌ ಶೆಟ್ಟಿ, ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕಾರ್ಯಕ್ರಮ ನಡೆಯಬೇಕು ಎಂಬುದು ನನ್ನ ನಿರೀಕ್ಷೆಯಾಗಿದ್ದು, ಅದು ಈಡೇರಿದೆ. ಬಡತನದಿಂದ ಬಂದ ನನಗೆ ತಂದೆ, ತಾಯಿ ಮತ್ತು ನನ್ನ ಮನೆತನ ನೀಡಿದ ಮಾರ್ಗದರ್ಶನದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಬದುಕು ಸಾರ್ಥಕವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next