Advertisement

ಪ್ರಕಾಶಾಭಿನಂದನೆಯ ಮೂಲಕ ಯೋಗ್ಯ ವ್ಯಕ್ತಿಗೆ ಗೌರವ: ಅಜಿತ್‌ ಕುಮಾರ್‌ ರೈ

05:32 PM Dec 20, 2019 | Team Udayavani |

ಮುಂಬಯಿ, ಡಿ. 19: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಪ್ರಕಾಶ್‌ ಶೆಟ್ಟಿ ಅವರಿಗೆ ಡಿ. 25ರಂದು ಬಂಗ್ರ ಕೂಳೂರಿನಲ್ಲಿರುವ ಗೋಲ್ಡ್‌ ಪಿಂಚ್‌ ಮೈದಾನದಲ್ಲಿ ನಡೆಯಲಿರುವ ಪ್ರಕಾಶಾಭಿನಂದನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಬಂಟ್ಸ್‌ ಹಾಸ್ಟೆಲ್‌ನ ಶ್ರೀ ರಾಮಕೃಷ್ಣ ಕಾಲೇಜು ಮೈದಾನದಲ್ಲಿ ಜರಗಿದ ಪೂರ್ವಭಾವಿ ಸಭೆಯಲ್ಲಿ ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್‌ ರೈ ಮಾಲಾಡಿ ಬಿಡುಗಡೆಗೊಳಿಸಿದರು.

Advertisement

ಕೆ. ಪ್ರಕಾಶ್‌ ಶೆಟ್ಟಿ ಅವರು ಸಮಾಜದಲ್ಲಿ ಸಾಧನೆಯ ಮೂಲಕ ಸಾರ್ಥಕ ಬದುಕು ಕಂಡವರು. ಯೋಗ್ಯ ವ್ಯಕ್ತಿಗೆ ಸಲ್ಲುವ ಗೌರವ ಸಮ್ಮಾನದಲ್ಲಿ ಸಮಾಜದ ಎಲ್ಲ ಜನರು ಭಾಗವಹಿಸಿ ಅವರು ಸಮಾಜಕ್ಕೆ ಮಾಡಿದ ಕೆಲಸ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸೋಣ ಎಂದು ಅಜಿತ್‌ ಕುಮಾರ್‌ ರೈ ತಿಳಿಸಿದರು.

ಪ್ರಕಾಶಾಭಿನಂದನೆ ಸಮಿತಿಯ ಅಧ್ಯಕ್ಷ ಸುರೇಶ್‌ ಶೆಟ್ಟಿ ಗುರ್ಮೆ ಮಾತನಾಡಿ, ಪ್ರಕಾಶಾಭಿನಂದನೆ ಕಾರ್ಯ ಕ್ರಮ ಜಾತ್ಯತೀತವಾಗಿ, ಪಕ್ಷಾತೀತವಾಗಿ, ಆದರ್ಶಯುತವಾಗಿ ನಡೆಯುತ್ತಿದೆ. ಅವರ ಬದುಕು ಬೇರೆಯವರಿಗೆ ಪ್ರೇರಣೆಯಾಗಬೇಕು. ಅವರ ಪ್ರಾಮಾಣಿಕತೆಗೆ ಸಲ್ಲುವ ಗೌರವ, ಸಮ್ಮಾನದಲ್ಲಿ ಸಮಾಜ ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ಪ್ರಕಾಶಾಭಿನಂದನಾ ಸಮಿತಿಯ ಸಂಚಾಲಕ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಮಾತನಾಡಿ, ಮೂರು ತಿಂಗಳ ಹಿಂದೆ ಕಾರ್ಯ ರೂಪಕ್ಕೆ ಬಂದ ಪ್ರಕಾಶಾಭಿನಂದನೆ ಕಾರ್ಯಕ್ರಮದ ಕುರಿತು ಈಗಾಗಲೇ 100ಕ್ಕೂ ಹೆಚ್ಚು ಸಭೆಗಳನ್ನು ಗುರ್ಮೆ ಸುರೇಶ್‌ ಶೆಟ್ಟಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಮುಂಬಯಿ, ಬೆಂಗಳೂರು ಸಹಿತ ಕರಾವಳಿ ಜಿಲ್ಲೆಯ ಎಲ್ಲ ಬಂಟರ ಸಂಘಗಳು ಸಭೆಗಳನ್ನು ಆಯೋಜಿಸಿ ಬೇರೆ ಬೇರೆ ಸಮಿತಿ ಗಳನ್ನು ರಚಿಸಲಾಗಿದೆ ಎಂದರು.

ಸಮಾರಂಭದಲ್ಲಿ ಪ್ರಕಾಶಾಭಿನಂದನೆ ಸಮಿತಿಯ ಕೋಶಾಧಿಕಾರಿ, ಪಡುಬಿದ್ರೆ ಬಂಟರ ಸಂಘದ ಮಾಜಿ ಅಧ್ಯಕ್ಷ ಸುರೇಶ್‌ ಶೆಟ್ಟಿ, ಬಂಟರ ಮಾತೃ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ನಿಟ್ಟೆ ಗುತ್ತು ರವಿರಾಜ ಶೆಟ್ಟಿ, ಎಂ. ಸುಂದರ ಶೆಟ್ಟಿ, ಜಯರಾಮ ಸಾಂತ, ಕೃಷ್ಣಪ್ರಸಾದ್‌ ರೈ, ಜಗನ್ನಾಥ ಶೆಟ್ಟಿ ಬಾಳ, ಕೇಶವ ಮಾರ್ಲ, ಉಮೇಶ್‌ ರೈ, ಸಬಿತಾ ಶೆಟ್ಟಿ, ಗೋಪಾಲ ಶೆಟ್ಟಿ, ರತ್ನಾಕರ ಶೆಟ್ಟಿ ಎಕ್ಕಾರ್‌, ಆನಂದ ಶೆಟ್ಟಿ, ಎನ್‌. ಮುರಳೀಧರ ಶೆಟ್ಟಿ, ಉಲ್ಲಾಸ್‌ ಆರ್‌. ಶೆಟ್ಟಿ, ಡಾ| ಸಚ್ಚಿದಾನಂದ ರೈ, ಮನೀಶ್‌ ರೈ, ಸುಕೇಶ್‌ ಚೌಟ ಉಳ್ಳಾಲ ಗುತ್ತು, ಕಾವು ಹೇಮನಾಥ ಶೆಟ್ಟಿ, ಜಯಲಕ್ಷ್ಮೀ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಮಂಜುಳಾ ಶೆಟ್ಟಿ ಮತ್ತು ಪ್ರಕಾಶ್‌ ಮೇಲಾಂಟ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next