Advertisement

ಪ್ರಕಾಶ್‌ ರೈ, ಮೇವಾನಿ ಸೇರಿ 15 ಮಂದಿ ವಿರುದ್ಧ ಪ್ರಕರಣ ದಾಖಲು

07:10 AM May 05, 2018 | |

ಚಿಕ್ಕಮಗಳೂರು: ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯದೆ ನಗರದ ಅಂಡೆ ಛತ್ರದಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಎಂಬ ಸಮಾವೇಶ ನಡೆಸಿದ ಹಾಗೂ ಇದರಲ್ಲಿ ಪಾಲ್ಗೊಂಡು ಮಾತನಾಡಿದ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ, ಚಿತ್ರನಟ ಪ್ರಕಾಶ್‌ ರೈ ಸೇರಿ 15ಕ್ಕೂ ಹೆಚ್ಚು ಜನರ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. 

Advertisement

ಜಿಗ್ನೇಶ್‌ ಮೇವಾನಿ, ಪ್ರಕಾಶ್‌ ರೈ, ಕೋಮು ಸೌಹಾರ್ದ ವೇದಿಕೆಯ ಗೌಸ್‌ ಮೊಹಿಯುದ್ದಿನ್‌, ಗೌಸ್‌ ಮುನೀರ್‌, ಕೆ.ಎಲ್‌. ಅಶೋಕ್‌, ಯೂಸುಫ್‌ ಹಾಜಿ, ಕಲ್ಕುಳಿ ವಿಠuಲ್‌ ಹೆಗಡೆ,ಪುಟ್ಟಸ್ವಾಮಿ, ಕೃಷ್ಣಮೂರ್ತಿ, ಮಹೇಶ್‌, ಉಮೇಶ್‌, ಚಂದ್ರೇಗೌಡ,ಪರಮೇಶ್‌, ಇರ್ಷಾದ್‌ ಅಹಮದ್‌, ಶಿವ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next