Advertisement
ಗುವಾಹಟಿಯ ಕಾರ್ಯಕ್ರಮವೊಂದರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರೇ ಈ ಕುರಿತು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ತೇರ್ಗಡೆ ಹೊಂದಲು 2 ಅವಕಾಶಗಳನ್ನು ನೀಡಲಾಗುತ್ತದೆ. ಮಾರ್ಚ್‌ನಲ್ಲಿ ನಡೆಯುವ ಪರೀಕ್ಷೆ ಮೊದಲನೆಯದಾದರೆ, ಜೂನ್‌ನಲ್ಲಿ ನಡೆಯುವುದು ಎರಡನೇ ಅವಕಾಶ. ಆದರೂ, ಫೇಲ್ ಆದರೆ, ವಿದ್ಯಾರ್ಥಿ ಮತ್ತೂಂದು ವರ್ಷ ಅದೇ ತರಗತಿಯಲ್ಲಿ ಕಲಿಯಬೇಕು. ಸದ್ಯದಲ್ಲೇ ಈ ಕುರಿತ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದಿದ್ದಾರೆ. ಪರೀಕ್ಷೆ ನಡೆಸದೇ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಕಷ್ಟವಾಗುತ್ತಿದೆ ಎಂದು 25 ರಾಜ್ಯಗಳು ಅಭಿಪ್ರಾಯಪಟ್ಟಿದ್ದು, ರಾಜ್ಯಗಳ ಶಿಕ್ಷಣ ಸಚಿವರ ಸಭೆ ಕರೆದಿದ್ದೇವೆ ಎಂದಿದ್ದಾರೆ. Advertisement
ಫೇಲ್ ಆದ್ರೆ ಮತ್ತದೇ ಕ್ಲಾಸ್; ಶಿಕ್ಷಣ ಸುಧಾರಣೆಯತ್ತ ಹೆಜ್ಜೆ
02:38 AM May 08, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.